ಬಿಹಾರ ಚುನಾವಣೆಯಲ್ಲಿ ಬಳಕೆಯಾದ EVMಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ
ಬಿಹಾರ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಭಾರೀ ಗೆಲುವು ದಾಖಲಿಸಿತ್ತು. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಅಕ್ರಮ ಎಸಗಿದೆ ಎಂದು ಆರ್ಜೆಡಿ ಹಾಗೂ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಪಾಟ್ನಾ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾದ ಇವಿಎಂ ಹಾಗೂ ವಿವಿಪ್ಯಾಟ್ ಸ್ಲಿಪ್ಗಳನ್ನು ತುಲನೆ ಮಾಡಿ ನೋಡಲಾಗಿದ್ದು, ಇವು ಶೇಕಡಾ ನೂರರಷ್ಟು ಹೊಂದಾಣಿಕೆ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಮೂಲಕ ಆಯೋಗವು ಇವಿಎಂ ಯಂತ್ರಕ್ಕೆ ಕ್ಲೀನ್ ಚಿಟ್ ನೀಡಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ದಾಖಲಿಸಿತ್ತು. ಇದಾದ ನಂತರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ನಗೆ ಬೀರಲು ಆರಂಭಿಸಿತ್ತು. ಇದರಿಂದ ಅನುಮಾನಗೊಂಡ ವಿಪಕ್ಷಗಳು ಬಿಜೆಪಿ ಪಕ್ಷವು ಇವಿಎಂ EVM ತಿರುಚುವ ಕೆಲಸ ಮಾಡುತ್ತಿದೆ ಎನ್ನುವ ಅನುಮಾನ ಹೊರ ಹಾಕಿದ್ದವು.
ಈ ವಿಚಾರದ ಪ್ರಕರಣದಲ್ಲಿ ವಿಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲು ಕೂಡ ಏರಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಹೊಸ ಆದೇಶ ಹೊರಡಿಸಿತ್ತು. ಮತ ಎಣಿಕೆ ಪೂರ್ಣಗೊಂಡ ನಂತರ ಐದು ಮತದಾನ ಕೇಂದ್ರದಿಂದ ಒಂದಷ್ಟು ಇವಿಎಂ ಯಂತ್ರಗಳನ್ನು ತಂದು, ವಿವಿಪ್ಯಾಟ್ ಜೊತೆ ತುಲನೆ ಮಾಡಿ ನೋಡುವುದು ಕಡ್ಡಾಯ ಎಂದಿತ್ತು.
ಸುಪ್ರೀಂಕೋರ್ಟ್ ಆದೇಶದಂತೆ ಬಿಹಾರ ಚುನಾವಣೆಯಲ್ಲಿ ಬಳಕೆ ಮಾಡಿದ ಇವಿಎಂ ಮತಯಂತ್ರ ಹಾಗೂ ವಿವಿಪ್ಯಾಟ್ಗಳನ್ನು ತಾಳೆ ಮಾಡಿ ನೋಡಲಾಗಿದೆ. ಈ ವೇಳೆ ಶೇ. 100 ಹೊಂದಾಣಿಕೆ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
VVPAT slips counted in 1215 polling stations (randomly selected to match with the votes count in the corresponding EVMs) in Bihar polls fully matched EVM count. 5 polling stations are randomly selected in each AC for matching VVPAT count with EVM count.
— Bharti Jain (@bhartijainTOI) December 2, 2020
ಬಿಹಾರ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ದೊಡ್ಡ ಗೆಲುವು ದಾಖಲಿಸಿತ್ತು. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಅಕ್ರಮ ಎಸಗಿದೆ ಎಂದು ಆರ್ಜೆಡಿ ಹಾಗೂ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಆರೋಪ ಸುಳ್ಳು ಎಂದು ಚುನಾವಣಾ ಆಯೋಗ ಕೂಡ ಸ್ಪಷ್ಟನೆ ನೀಡಿತ್ತು. ಈಗ ಚುನಾವಣಾ ಆಯೋಗ ಸಾಕ್ಷಿ ಸಮೇತ ಮತ್ತೊಮ್ಮೆ ಇದನ್ನು ಸಾಬೀತು ಮಾಡಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ಗಳನ್ನು ತಾಳೆ ಮಾಡಿ ನೋಡಲಾಗಿತ್ತು. ಈ ವೇಳೆ 8 ಕಡೆಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ಗಳ ನಡುವೆ ತುಲನೆ ಆಗಿರಲಿಲ್ಲ.
ಬಿಹಾರದಲ್ಲಿ EVM ದುರ್ಬಳಕೆ: ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಸದ DK ಸುರೇಶ್ ಆರೋಪ
Published On - 12:47 pm, Thu, 3 December 20