12 ಲಕ್ಷ ಮೌಲ್ಯದ ಚಿನ್ನವನ್ನು ಚಪ್ಪಲಿಯಲ್ಲಿ ಅಡಗಿಸಿಟ್ಟು ಕಳ್ಳಸಾಗಣೆ ಮಾಡುತಿದ್ದ ಭೂಪ

ಸೋಮವಾರ, ರಾಮನಾಥಪುರಂ ಮೂಲದ 21 ವರ್ಷದ ಮೊಹಮ್ಮದ್ ಹಸನ್ ಅಲಿ ತನ್ನ ಚಪ್ಪಲಿಗಳಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ದುಬೈನಿಂದ ಆಗಮಿಸಿದ್ದ. ವಿಮಾನದಿಂದ ಇಳಿದು ಹೊರ ಬರುವ ವೇಳೆಗೆ ಮೊಹಮ್ಮದ್​ನಿಗೆ ಸಹಾಯ ಮಾಡಲು ಬಂದ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಚಪ್ಪಲಿಯ ತೂಕವನ್ನು ಕಂಡು ಅನುಮಾನದಿಂದ ಪರಿಶೀಲಿಸಿದಾಗ ಅದರಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ.

12 ಲಕ್ಷ ಮೌಲ್ಯದ ಚಿನ್ನವನ್ನು ಚಪ್ಪಲಿಯಲ್ಲಿ ಅಡಗಿಸಿಟ್ಟು ಕಳ್ಳಸಾಗಣೆ ಮಾಡುತಿದ್ದ ಭೂಪ
ಕಳ್ಳಸಾಗಣೆಯಾಗುತ್ತಿದ್ದ ಚಿನ್ನ

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಕಳ್ಳಸಾಗಣೆ ಮಾಡುವವರು ಕೂಡ ಅತಿ ಬುದ್ಧಿವಂತಿಕೆಯನ್ನು ತೋರಿಸುತ್ತಿದ್ದು, ಚಿನ್ನವನ್ನು ದೇಶಕ್ಕೆ ಅಕ್ರಮವಾಗಿ ಸಾಗಿಸಲು ವಿಲಕ್ಷಣವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಆದರೆ ಒಂದು ಮಾತಿದೆ ಕಳ್ಳ ಚಾಪೆ ಕೆಳಗೆ ನುಸುಳಿದರೆ ಅವರನ್ನ ಹಿಡಿಯುವ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗುತ್ತಾರೆ. ಹೀಗಾಗಿ ಕಳ್ಳ ಎಷ್ಟೇ ಬುದ್ಧಿವಂತನಾದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸದ್ಯ ಇಂತಹದ್ದೇ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸೋಮವಾರ, ರಾಮನಾಥಪುರಂ ಮೂಲದ 21 ವರ್ಷದ ಮೊಹಮ್ಮದ್ ಹಸನ್ ಅಲಿ ತನ್ನ ಚಪ್ಪಲಿಗಳಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ದುಬೈನಿಂದ ಆಗಮಿಸಿದ್ದ. ವಿಮಾನದಿಂದ ಇಳಿದು ಹೊರ ಬರುವ ವೇಳೆಗೆ ಮೊಹಮ್ಮದ್​ನಿಗೆ ಸಹಾಯ ಮಾಡಲು ಬಂದ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಚಪ್ಪಲಿಯ ತೂಕವನ್ನು ಕಂಡು ಅನುಮಾನದಿಂದ ಪರಿಶೀಲಿಸಿದಾಗ ಅದರಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ.

ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಚರ್ಮದ ಚಪ್ಪಲಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುವುದು ಬೆಳಕಿಗೆ ಬಂದಿದ್ದು, ಕೆಂಪು ಬಣ್ಣದ ಅಂಟು ಟೇಪ್​ನಿಂದ ಸುತ್ತಿದ ಚಿನ್ನದ ಪೇಸ್ಟ್ ಪ್ಯಾಕೆಟ್​ಗಳನ್ನು ಮುಚ್ಚಿಟ್ಟಿದು ತಿಳಿದು ಬಂದಿದೆ ಎಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ಕು ಚಿನ್ನದ ಪೇಸ್ಟ್ ಪ್ಯಾಕೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಚಪ್ಪಲಿಯಲ್ಲಿ ಎರಡು ಪ್ಯಾಕೆಟ್​ನಂತೆ 292 ಗ್ರಾಂ ಚಿನ್ನವಿತ್ತು. ಪೂರ್ತಿ ಚಿನ್ನವನ್ನು ಹೊರತೆಗೆದ ನಂತರ 12 ಲಕ್ಷ ರೂ. ಮೌಲ್ಯದ 239 ಗ್ರಾಂನಷ್ಟು ಶುದ್ಧ ಚಿನ್ನ ಸಿಕ್ಕಿದ್ದು, ಇದನ್ನು ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಇದೇ ರೀತಿಯ ಮತ್ತೊಂದು ಪ್ರಕರಣ ಚೆನ್ನೈ  ಏರ್ ಕಸ್ಟಮ್ಸ್​ನಲ್ಲಿ ಸೋಮವಾರ ನಡೆದಿದ್ದು, ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿ 5 ಟೈಗರ್ ಬಾಂಬ್ ಬಾಟಲಿಗಳು, 6 ನಿವಿಯಾ ಕ್ರೀಮ್ ಇನ್ನಿತರ ವಸ್ತುಗಳಲ್ಲಿ 286 ಗ್ರಾಂ ತೂಕದ 14.12 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದ.

Gold smuggling: ಅರೆಸ್ಟ್​ ಆದ ಮಾಸ್ಟರ್​ಮೈಂಡ್​ಗಳು ಬೆಂಗಳೂರು ತಲುಪಿದ್ದು ಹೇಗೆ?