ದೆಹಲಿ ಚಲೋ ಆರ್ಥಿಕತೆಗಷ್ಟೇ ಅಲ್ಲ.. ಮುಂದೆ ದೇಶದ ಭದ್ರತೆಗೇ ಧಕ್ಕೆ ತರಲಿದೆ: ಅಮರೀಂದರ್ ಎಚ್ಚರಿಕೆ

ದೆಹಲಿ ಚಲೋ ಕೇವಲ ಪಂಜಾಬ್​ನ ಆರ್ಥಿಕತೆಗಷ್ಟೇ ಅಲ್ಲದೇ  ದೇಶದ ಭದ್ರತೆಗೇ ಸವಾಲಾಗಬಹುದು. ಸರ್ಕಾರ ಮತ್ತು ರೈತರು ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.

ದೆಹಲಿ ಚಲೋ ಆರ್ಥಿಕತೆಗಷ್ಟೇ ಅಲ್ಲ.. ಮುಂದೆ ದೇಶದ ಭದ್ರತೆಗೇ ಧಕ್ಕೆ ತರಲಿದೆ: ಅಮರೀಂದರ್ ಎಚ್ಚರಿಕೆ
ಅಮಿತ್ ಶಾ ಮತ್ತು ಅಮರಿಂದರ್ ಸಿಂಗ್
guruganesh bhat

|

Dec 05, 2020 | 11:25 AM

ದೆಹಲಿ: ದೆಹಲಿ ಚಲೋ ಸದ್ಯಕ್ಕೆ ಕೇವಲ ಪಂಜಾಬ್​ನ ಆರ್ಥಿಕತೆಗಷ್ಟೇ ಅಲ್ಲ; ಮುಂದೆ ದೇಶದ ಭದ್ರತೆಗೇ ಸವಾಲಾಗಬಹುದು. ತಕ್ಷಣ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೇಂದ್ರ ಸರ್ಕಾರ ಮತ್ತು ರೈತ ನಾಯಕರಿಗೆ ಮನವಿ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ಪಂಜಾಬ್ ರೈತರ ನಡುವಿನ ಶೀತಲ ಸಮರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಬ್ಬರೂ ಯೋಚಿಸಬೇಕು. ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಮೊದಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಸ್ಯೆ ಕೊನೆಗಾಣಿಸಲು ಮನವಿ ಇಂದು ಕೇಂದ್ರ ಮತ್ತು ರೈತರ ನಡುವೆ ಮಾತುಕತೆ ನಡೆಯಲಿದೆ. ಗೃಹ ಸಚಿವರ ಬಳಿ ರೈತರ ಸಮಸ್ಯೆಯನ್ನು ಕೊನೆಗಾಣಿಸುವಂತೆ ಮನವಿ ಮಾಡಿದ್ದೇನೆ. ದೆಹಲಿ ಚಲೋದಿಂದ ಪಂಜಾಬ್​ನ ಆರ್ಥಿಕತೆ ಬಿಗಡಾಯಿಸುವ ಸಾಧ್ಯತೆಯಿದೆ. ಅಲ್ಲದೇ, ದೇಶದ ಭದ್ರತೆಗೂ ಗಂಭೀರ ಪರಿಣಾಮ ಬೀರಲಿದೆ ಎಂದು ಮನವಿ ಮಾಡಿದ್ದಾಗಿ ತಿಳಿಸಿದರು.

ಪದ್ಮ ವಿಭೂಷಣ ಗೌರವ ಹಿಂದಿರುಗಿಸಿದ ಬಾದಲ್: ಈ ಬೆನ್ನಲ್ಲೇ ಕೇಂದ್ರ ಸರ್ಕಾರ ತರ ಹೊರಟಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪದ್ಮವಿಭೂಷಣ ಗೌರವ ಹಿಂದಿರುಗಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada