ತಮಿಳುನಾಡು, ಕೇರಳದಲ್ಲಿ ‘ಬುರೇವಿ‘ ರೆಡ್ ಅಲರ್ಟ್; ಚಂಡಮಾರುತ ಎದುರಿಸಲು ರಕ್ಷಣಾ ತಂಡಗಳು ಸನ್ನದ್ಧ
ಬುರೇವಿ ಪ್ರಭಾವ ಈಗಾಗಲೇ ಶುರುವಾಗಿದೆ. ಚಂಡಮಾರುತ ಇಂದು ಸಂಜೆ ಅಥವಾ ಡಿ.4ರ ಮುಂಜಾನೆ ಪಂಬಾನ್ ಮತ್ತು ಕನ್ಯಾಕುಮಾರಿ ನಡುವಿನಿಂದ ದಕ್ಷಿಣ ತಮಿಳುನಾಡು ದಾಟಲಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಪಂಬಾನ್ ಸಮೀಪ 90 ಕಿಮೀ ವೇಗದಲ್ಲಿ ಪಂಬನ್ ಸಮೀಪ ಬರಲಿದೆ.
ಚೆನ್ನೈ: ಈಗಷ್ಟೇ ನಿವಾರ್ ಚಂಡಮಾರುತದಿಂದ ತಮಿಳುನಾಡು, ಕೇರಳದ ಜನರು ಸುಧಾರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಇನ್ನೊಂದು ಚಂಡಮಾರುತ ‘ಬುರೇವಿ’ ಆತಂಕ ಶುರುವಾಗಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬುರೇವಿ ಚಂಡಮಾರುತ ಶ್ರೀಲಂಕಾದಲ್ಲಿ ಪ್ರಾರಂಭವಾಗಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಹೊತ್ತಿಗೆ ತಮಿಳುನಾಡು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ತಮಿಳುನಾಡಿನ ರಾಮನಾಥಪುರಂ, ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ, ತೆಂಕಸಿ ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ಮತ್ತು ಕೇರಳದಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹೇಳಿದೆ.
ಕಳೆದ ಆರು ತಾಸುಗಳಿಂದ ಪ್ರತಿ ಘಂಟೆಗೆ 11 ಕಿಮೀ ವೇಗದಲ್ಲಿ ಪಶ್ಚಿಮ ಮತ್ತು ಈಶಾನ್ಯ ದಿಕ್ಕಿನಲ್ಲಿ ಸಾಗುತ್ತಿರುವ ಚಂಡಮಾರುತ, ಮುಂದಿನ 3 ತಾಸುಗಳಲ್ಲಿ ಮನ್ನಾರ್ ಕೊಲ್ಲಿಯ ಸಮೀಪದ ಮನ್ನಾರ್ ಕರಾವಳಿ ತೀರ ಪ್ರವೇಶಿಸಲಿದೆ.
ವಿಪರೀತ ಮಳೆ ಬುರೇವಿ ಪ್ರಭಾವ ಈಗಾಗಲೇ ಶುರುವಾಗಿದೆ. ಚಂಡಮಾರುತ ಇಂದು ಸಂಜೆ ಅಥವಾ ಡಿ.4ರ ಮುಂಜಾನೆ ಪಂಬನ್ ಮತ್ತು ಕನ್ಯಾಕುಮಾರಿ ನಡುವಿನಿಂದ ದಕ್ಷಿಣ ತಮಿಳುನಾಡು ದಾಟಲಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಪಂಬನ್ ಸಮೀಪ 90 ಕಿಮೀ ವೇಗದಲ್ಲಿ ಪಂಬನ್ ಸಮೀಪ ಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಸಿಕ್ಕಾಪಟೆ ಮಳೆಯಾಗುತ್ತಿದೆ. ಕರ್ನಾಟಕದ ಮೇಲೆ ಈ ಚಂಡಮಾರುತ ಅಷ್ಟೇನೂ ಪ್ರಭಾವ ಬೀರದೆ ಇದ್ದರೂ, ಇಂದು ಮುಂಜಾನೆ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಶುರುವಾಗಿದೆ.
ಮೋದಿ ಸರ್ಕಾರದಿಂದ ಭರವಸೆ ತಮಿಳುನಾಡು ಮತ್ತು ಕೇರಳಕ್ಕೆ ನೆರವಿನ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ. ಬುರೇವಿ ಪ್ರವೇಶಿಸಿದ ವೇಳೆ ಉಂಟಾಗುವ ಹಾನಿ ನಿಯಂತ್ರಣಕ್ಕೆ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಕೇರಳದಲ್ಲಿ ಎಂಟು ಎನ್ಡಿಆರ್ಎಫ್ ತಂಡಗಳು, ಏರ್ಫೋರ್ಸ್, ನೇವಿ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ತಮಿಳುನಾಡಿನಲ್ಲಿ ಒಟ್ಟು 26 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ತಂಡಗಳು ಇದ್ದು, ಪುದುಚೇರಿಯಲ್ಲೂ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕರಾವಳಿ ತೀರದಲ್ಲಿ ವಾಸವಾಗಿರುವ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಯಾರ ಪಾಲಾಗುತ್ತೆ ಹೈದರಾಬಾದ್ ಮಹಾನಗರ ಪಾಲಿಕೆ? ನಾಳೆ 150 ವಾರ್ಡ್ಗಳ ಮತ ಎಣಿಕೆ
Published On - 1:51 pm, Thu, 3 December 20