ಮುಕ್ಕಣ್ಣ ತೆಂಗಿನ ಕಾಯಿಯಲ್ಲಿ ಮೂರು ಕೊಬ್ಬರಿ ಬಟ್ಟಲು!
ಇಂದು ರಾಜ್ಯಾದ್ಯಂತ ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಾನಗಲ್ ತಾಲೂಕಿನ ಜಕ್ಕನಾಯ್ಕನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕ ಜಯಂತಿ ಆಚರಿಸಲಾಯಿತು. ಈ ವೇಳೆ ಅಚ್ಚರಿಯ ಪವಾಡವೊಂದು ನಡೆದಿದೆ.
ಹಾವೇರಿ: ಇಂದು ರಾಜ್ಯಾದ್ಯಂತ ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಾನಗಲ್ ತಾಲೂಕಿನ ಜಕ್ಕನಾಯ್ಕನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕ ಜಯಂತಿ ಆಚರಿಸಲಾಯಿತು. ಈ ವೇಳೆ ಅಚ್ಚರಿಯ ಪವಾಡವೊಂದು ನಡೆದಿದೆ.
ಶ್ರೀಫಲದಲ್ಲಿ ಮೂರು ಕೊಬ್ಬರಿ ಬಟ್ಟಲು: ಸರ್ಕಾರಿ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ ವೇಳೆ ಒಡೆದ ತೆಂಗಿನಕಾಯಿಯಲ್ಲಿ ಮೂರು ಕೊಬ್ಬರಿ ಬಟ್ಟಲುಗಳು ಗೋಚರವಾಗಿದೆ. ಅಪರೂಪದ ತೆಂಗಿನಕಾಯಿ ಕಂಡು ಶಾಲಾ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.
ಮುಕ್ಕಣ್ಣನ ಸಂಕೇತದ ತೆಂಗಿನ ಕಾಯಿ: ಮನುಷ್ಯ ಜೀವನದುದ್ದಕ್ಕು ತೆಂಗಿನ ಮರದ ಆಸರೆಯನ್ನು ಪಡೆದಿರುತ್ತಾನೆ. ತೆಂಗಿನ ಕಾಯಿಯ ಮರದಿಂದ ಹಿಡಿದು ತೆಂಗಿನ ಕಾಯಿಯ ಸಿಪ್ಪೆಯವರೆಗೂ ಮನುಷ್ಯ ತನ್ನ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾನೆ. ಆಧ್ಯಾತ್ಮಿಕವಾಗಿ ತಂಗಿನ ಮರಕ್ಕೆ ವಿಶೇಷ ಸ್ಥಾನವಿದೆ.
ತೆಂಗಿನ ಕಾಯಿ ಇಲ್ಲದೆ ದೇವರ ಪೂಜೆ ನಡೆಯುವುದಿಲ್ಲ. ತೆಂಗಿನ ಮರವನ್ನು ಕಲ್ಪವೃಕ್ಷ, ಶ್ರೀಫಲ ಎಂದೆಲ್ಲ ಕರೆಯುತ್ತೇವೆ. ಹಾಗೂ ಮುಕ್ಕಣ್ಣ ಶಿವನಿಗೂ ಹೋಲಿಸಲಾಗುತ್ತೆ. ಹೀಗಾಗಿ ಚಿಕ್ಕ ತೆಂಗಿನ ಕಾಯಿಯಲ್ಲಿ ಮೂರು ಕೊಬ್ಬರಿ ಬಟ್ಟಲುಗಳನ್ನು ನೋಡಿ ಜನ ಚಕಿತರಾಗಿದ್ದಾರೆ.
ತೆಂಗಿನ ಮರಕ್ಕೆ ಹೂ ಮುಡಿಸಿ, ಅರಿಶಿಣ ಹಚ್ಚಿ ಸೀಮಂತ
Published On - 2:45 pm, Thu, 3 December 20