AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಾಕೀರ್ ಬಂಧನದಿಂದಾಗಿ ನ್ಯಾಯ ಸಿಗೋ ಭರವಸೆ ಸಿಕ್ಕಿದೆ; ಆದ್ರೆ ಡಿಕೆಶಿ ನೋಟಿಸ್ ಈವರೆಗೂ ಕೊಟ್ಟಿಲ್ಲ’

ಜಾಕೀರ್ ಬಂಧನದಿಂದಾಗಿ ನ್ಯಾಯ ಸಿಗುವ ಭರವಸೆ ಸಿಕ್ಕಿದೆ ಎಂದು ಶಾಸಕರ ಮನೆಗೆ ಬೆಂಕಿ, 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ಗೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಪೊಲೀಸರು, ನ್ಯಾಯಾಲಯ ಹಾಗೂ ಮಾಧ್ಯಮಗಳಿಂದಾಗಿ ನ್ಯಾಯ ದೊರಕುತ್ತಿದೆ. ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದು ಶ್ರೀನಿವಾಸಮೂರ್ತಿ ಹೇಳಿದರು.

‘ಜಾಕೀರ್ ಬಂಧನದಿಂದಾಗಿ ನ್ಯಾಯ ಸಿಗೋ ಭರವಸೆ ಸಿಕ್ಕಿದೆ; ಆದ್ರೆ ಡಿಕೆಶಿ ನೋಟಿಸ್ ಈವರೆಗೂ ಕೊಟ್ಟಿಲ್ಲ’
ಶಾಸಕ ಅಖಂಡ ಶ್ರೀನಿವಾಸಮೂರ್ತಿ
KUSHAL V
|

Updated on:Dec 03, 2020 | 1:57 PM

Share

ಬೆಂಗಳೂರು: ಶಾಸಕರ ಮನೆಗೆ ಬೆಂಕಿ, 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ನಲ್ಲಿ ಜಾಕೀರ್ ಬಂಧನದಿಂದಾಗಿ ನ್ಯಾಯ ಸಿಗುವ ಭರವಸೆ ಸಿಕ್ಕಿದೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಪೊಲೀಸರು, ನ್ಯಾಯಾಲಯ ಹಾಗೂ ಮಾಧ್ಯಮಗಳಿಂದಾಗಿ ನ್ಯಾಯ ದೊರಕುತ್ತಿದೆ. ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದು ಶ್ರೀನಿವಾಸಮೂರ್ತಿ ಹೇಳಿದರು.

ಜೊತೆಗೆ, ಸಂಪತ್ ರಾಜ್ ಹಾಗೂ ಜಾಕೀರ್​ರನ್ನು ಉಚ್ಚಾಟಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಮನವಿ ಪತ್ರ ಕೊಟ್ಟಿದ್ದೇನೆ ಎಂದು ಸಹ ಹೇಳಿದರು. ಆದ್ರೆ ಡಿಕೆಶಿ ಶಿಸ್ತುಪಾಲನಾ ಸಮಿತಿಗೆ ಕೊಟ್ಟಿರುವುದಾಗಿ ಹೇಳಿದ್ದಾರೆ.ಆ ಸಮಿತಿ ಈವರೆಗೂ ಒಂದೇ ಒಂದು ನೋಟಿಸ್ ಕೂಡ ಕೊಟ್ಟಿಲ್ಲ. ಜೊತೆಗೆ, ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಯಾವುದೇ ವಿಚಾರಣೆ ನಡೆಸಿಲ್ಲ ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ಹೊರಹಾಕಿದರು.

ಆದರೆ, ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ. ಶಿಸ್ತುಪಾಲನಾ ಸಮಿತಿ ಸ್ಪಂದಿಸದಿದ್ದಲ್ಲಿ AICCಗೆ ಪತ್ರ ಬರೆಯುವೆ ಎಂದು ಶ್ರೀನಿವಾಸಮೂರ್ತಿ ಹೇಳಿದರು. ನನಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹಾಗಂತ ನಾನು ಪಕ್ಷ ಬಿಡುವುದಿಲ್ಲ, ಬಿಜೆಪಿ ಸೇರುವ ಪ್ರಶ್ನೆಯಿಲ್ಲ ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಡಿ.16ರವರೆಗೆ ಜಾಕೀರ್ ಹುಸೇನ್‌ಗೆ ನ್ಯಾಯಾಂಗ ಬಂಧನ ಶಾಸಕರ ಮನೆಗೆ ಬೆಂಕಿ, 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ನಲ್ಲಿ ಡಿ.16ರವರೆಗೆ ಜಾಕೀರ್ ಹುಸೇನ್‌ಗೆ ನ್ಯಾಯಾಂಗ ಬಂಧನವಾಗಿದೆ.

ಸಿಸಿಬಿ ಅಧಿಕಾರಿಗಳು ಇಂದು‌ ಜಾಕೀರ್​ರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಇಂದು ಸರ್ಕಾರಿ ರಜೆಯಿದ್ದ ಹಿನ್ನೆಲೆಯಲ್ಲಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಜಾಕೀರ್​ರನ್ನು ಮನೆಗೆ ಹಾಜರು ಪಡಿಸಲಾಗಿತ್ತು. ಸದ್ಯ, ರಜೆ ಇದ್ದ ಹಿನ್ನೆಲೆಯಲ್ಲಿ ಜಾಕೀರ್​ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. ಸಿಸಿಬಿ ಅಧಿಕಾರಿಗಳು ನಾಳೆ ಮತ್ತೆ ಜಾಕೀರ್ ಕಸ್ಟಡಿಗೆ ಕೇಳಲಿದ್ದಾರೆ ಎಂದು ತಿಳಿದುಬಂದಿದೆ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಜಾಕೀರ್ ಅರೆಸ್ಟ್

Published On - 1:49 pm, Thu, 3 December 20