ಧಾರವಾಡ: ಕೊರೊನಾ ಬರೀ ಮನುಷ್ಯರಿಗಷ್ಟೇ ಅಲ್ಲ, ದೇವರಿಗೂ ಶಾಕ್ ನೀಡುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಧಾರವಾಡದ ವಿಠ್ಠಲ-ರುಕ್ಮಿಣಿ ದೇವಸ್ಥಾನ. ಧಾರವಾಡ ನಗರದ ರವಿವಾರ ಪೇಟೆಯ ಬಾಳೆಕಾಯಿ ಓಣಿಯಲ್ಲಿರೋ ಈ ದೇವಸ್ಥಾನದ ಮುಂದೆ ಪ್ರತಿವರ್ಷ ಆಷಾಢ ಏಕಾದಶಿ ಬಂದರೆ ಸಾಕು ಮುಂದೆ ಭಕ್ತರ ದಂಡೇ ಕಂಡು ಬರುತ್ತಿತ್ತು. ಕಿಲೋ ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತು ಭಕ್ತರು ವಿಠ್ಠಲ-ರುಕ್ಮಿಣಿ ದರ್ಶನ ಪಡೆದುಕೊಳ್ಳುತ್ತಿದ್ದರು. ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ದರ್ಶನ ಪಡೆಯೋದಷ್ಟೇ ಅಲ್ಲದೇ ಅವತ್ತಿಡೀ ದಿನ ಉಪವಾಸವನ್ನೂ ಮಾಡುತ್ತಿದ್ದರು. ಆದರೆ ಈ ವರ್ಷ ಎಲ್ಲವೂ […]
Follow us on
ಧಾರವಾಡ: ಕೊರೊನಾ ಬರೀ ಮನುಷ್ಯರಿಗಷ್ಟೇ ಅಲ್ಲ, ದೇವರಿಗೂ ಶಾಕ್ ನೀಡುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಧಾರವಾಡದ ವಿಠ್ಠಲ-ರುಕ್ಮಿಣಿ ದೇವಸ್ಥಾನ. ಧಾರವಾಡ ನಗರದ ರವಿವಾರ ಪೇಟೆಯ ಬಾಳೆಕಾಯಿ ಓಣಿಯಲ್ಲಿರೋ ಈ ದೇವಸ್ಥಾನದ ಮುಂದೆ ಪ್ರತಿವರ್ಷ ಆಷಾಢ ಏಕಾದಶಿ ಬಂದರೆ ಸಾಕು ಮುಂದೆ ಭಕ್ತರ ದಂಡೇ ಕಂಡು ಬರುತ್ತಿತ್ತು. ಕಿಲೋ ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತು ಭಕ್ತರು ವಿಠ್ಠಲ-ರುಕ್ಮಿಣಿ ದರ್ಶನ ಪಡೆದುಕೊಳ್ಳುತ್ತಿದ್ದರು.
ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ದರ್ಶನ ಪಡೆಯೋದಷ್ಟೇ ಅಲ್ಲದೇ ಅವತ್ತಿಡೀ ದಿನ ಉಪವಾಸವನ್ನೂ ಮಾಡುತ್ತಿದ್ದರು. ಆದರೆ ಈ ವರ್ಷ ಎಲ್ಲವೂ ಬದಲಾಗಿ ಹೋಗಿದೆ. ಕೊರೊನಾ ಮಹಾಮಾರಿಯಿಂದಾಗಿ ಜನರು ಹೊರಗೆ ಬರಲು ಭಯಪಡುತ್ತಿದ್ದಾರೆ.
ಅಷ್ಟೇ ಅಲ್ಲ, ಇಂಥ ಪ್ರಸಿದ್ಧ ದೇವಸ್ಥಾನಕ್ಕೂ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ದೇವಸ್ಥಾನದ ಆಡಳಿತ ಮಂಡಳಿಯವರು ಇಂದು ಸಾಂಕೇತಿಕವಾಗಿ ಪೂಜೆ ಮಾಡಿ ಮುಗಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ಮನುಷ್ಯರಿಗಷ್ಟೇ ಅಲ್ಲದೇ ದೇವರಿಗೂ ಸಂಕಟ ತಂದಿದ್ದು ಈ ದೇವಸ್ಥಾನವನ್ನು ನೋಡಿದರೆ ತಿಳಿದು ಬರುತ್ತಿದೆ.