
ಮೈಸೂರು: ಇಂದು ರಾಜ್ಯಾದ್ಯಂತ ಮುಸ್ಲಿಮ್ ಬಾಂಧವರು ಬಕ್ರೀದ್ ಹಬ್ಬವನ್ನ ಆಚರಿಸುತ್ತಿದ್ದಾರೆ. ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬಕ್ಕೆ ಮೈಸೂರಿನ ವ್ಯಕ್ತಿಯೊಬ್ಬರು ಬಡ ಕುಟುಂಬಗಳ ನೆರವಿಗೆ ಧಾವಿಸಿದ್ದು, ಕುರಿ ಮಾಂಸವನ್ನ ಉಚಿತವಾಗಿ ಹಂಚುತ್ತಿದ್ದಾರೆ.
ಇದಕ್ಕೆ ಕಾರಣ ಕೊರೊನಾ ಮಹಾಮಾರಿ. ಕೊರೊನಾದಿಂದಾಗಿ ಸಾಕಷ್ಟು ಬಡವರು ಸಮಸ್ಯೆಯಲ್ಲಿದ್ದು, ಮಾಂಸ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ನೆರವಾಗೋದು ಮುಜಾಹಿದ್ ಅವರ ಕಾಳಜಿ. ಹೀಗಾಗಿ ಲಷ್ಕರ್ ಮೊಹಲ್ಲಾದಲ್ಲಿ ಮುಜಾಹಿದ್ ಸಾಧ್ಯವಾದಷ್ಟೂ ಕುಟುಂಬಗಳಿಗೆ ಕುರಿ ಮಾಂಸ ವಿತರಿಸಿದ್ದಾರೆ.
Published On - 1:13 pm, Sat, 1 August 20