ವಿಜಯಪುರ: ಸಿಎಂ ಸ್ಥಾನದಿಂದ B.S.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಶಾಸಕ ಯತ್ನಾಳ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. BSY 3 ವರ್ಷವೂ ಸಿಎಂ ಆಗಿರ್ತಾರೆಂದು ನಾನೇನೂ ಹೇಳಲ್ಲ. ಸೂರ್ಯ, ಚಂದ್ರರಿರುವಷ್ಟು ದಿನ CM ಆಗಿರ್ತಾರೆಂದು ಕೆಲ ಸಚಿವರು ಹೀಗೆ ಹೇಳಿದ್ದಾರೆ. ಆದ್ರೆ ನಾನು ಈ ರೀತಿ ಹೇಳಲ್ಲ ಎಂದು ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಿಎಂ, ಸರ್ಕಾರದ ವಿರುದ್ಧ ಮಾತಾಡಿದ್ದಕ್ಕೆ ಪತ್ರ ಬರೆದ ವಿಚಾರವಾಗಿ ಕೆಲವು ಸಚಿವರು, ಪಕ್ಷದ ಹಿರಿಯ ಶಾಸಕರು ಪತ್ರ ಬರೆದಿದ್ದಾರೆ. ನನ್ನ ವಿರುದ್ಧ ಕ್ರಮಕ್ಕೆ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಯಾರು ಏನು ಬೇಕಾದ್ರೂ ಬರೆಯಲಿ ಎಂದ ಶಾಸಕ ಯತ್ನಾಳ್ ನಾನು ಸಚಿವನೇ ಆಗಿಲ್ಲ, ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲವೇ ಅಲ್ಲ. ಯಾರ ಹಣೆಯಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು ಎಂದು ಹೇಳಿದರು. ಮೋದಿ ಮನಸ್ಸಿನಲ್ಲಿ ಏನು ಬರುತ್ತದೆಂದು ಯಾರಿಗೆ ಗೊತ್ತು. ನಾನು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ರಾಜ್ಯಸರ್ಕಾರದಿಂದ ಅನುದಾನ ರಿಲೀಸ್ ಮಾಡದ್ದನ್ನು ಪ್ರಶ್ನಿಸಿದ್ದೆ. ಹೀಗಾಗಿ, ಇಂದು ಬಹುತೇಕ ಮಹಾನಗರ ಪಾಲಿಕೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ.