ಬೆಂಗಳೂರು: ಹಾಳು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇನ್ನು ಆರು ದಿನ ಯಾರೂ ನಗರದ ಆಯಕಟ್ಟಿನ ಜಾಗದಲ್ಲಿರುವ ಬಸವನಗುಡಿಯ ಕಡೆ ಹೆಜ್ಜೆ ಹಾಕಬೇಡಿ ಎಂದು ಸ್ಥಳೀಯ ವರ್ತಕರು ಗ್ರಾಹಕರನ್ನು ಕೋರಿದ್ದಾರೆ.
ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಕ್ಲೋಸ್ ಮಾಡಿ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಬಸವನಗುಡಿ ಮರ್ಚೆಂಟ್ ಫೌಂಡೇಶನ್ ಅವರಿಂದ ಈ ನಿರ್ಧಾರ ಹೊರಬಿದ್ದಿದ್ದು ಇಂದಿನಿಂದ ಆರು ದಿನಗಳ ಕಾಲ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಮಾಲೀಕರು ತಮ್ಮ ತಮ್ಮ ಅಂಗಡಿಗಳನ್ನ ಕ್ಲೋಸ್ ಮಾಡಿ ಷಟರ್ ಮೇಲೆ ನೊಟೀಸ್ ಅಂಟಿಸಿದ್ದಾರೆ. ಇದೇ ವೇಳೆ,ಬಸವನಗುಡಿ ಮತ್ತು ಎನ್ ಆರ್ ಕಾಲನಿಯಲ್ಲೂ ತರಕಾರಿ ಮತ್ತು ದಿನಸಿ ಅಂಗಡಿಗಳ ಮಾಲೀಕರೂ ಇದೇ ನಿರ್ಧಾರಕ್ಕೆ ಬಂದಿದ್ದಾರೆ. ನಿಗದಿತ ವೇಳೆಯಲ್ಲಿ ನಿಗದಿತ ಪ್ರದೇಶದಲ್ಲಿ (ಎಪಿಎಸ್ ಮೈದಾನ) ವ್ಯಾಪಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.