KC General‌ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿಗೆ ಪಬ್ಲಿಕ್‌ ಕಂಗಾಲು!

| Updated By: ಸಾಧು ಶ್ರೀನಾಥ್​

Updated on: Jun 30, 2020 | 11:05 AM

ಬೆಂಗಳೂರು: ಕೊರನೊನಾ ವಾರಿಯರ್ಸ್‌ ಅಂತಾ ವೈದ್ಯರಿಗೆ ಎಲ್ಲಿಲ್ಲದ ಗೌರವ ಸಿಗ್ತಿದೆ ಅದು ಸರಿ ಕೂಡಾ. ಆದ್ರೆ ಅದೇ ವೈದ್ಯರು ಯುದ್ಧ ಕಾಲದಲ್ಲಿ ಕೈ ಕೊಟ್ರೆ ಅಥಾ ಬೇಜವಾಬ್ದಾರಿ ಪ್ರದರ್ಶಿಸಿದ್ರೆ ಹೇಗೆ? ಇಂಥದೊಂದು ಪ್ರಶ್ನೆ ಈಗ ಬೆಂಗಳೂರಿಗರಿಗೆ ಕಾಡುತ್ತಿದೆ. ಇದಕ್ಕೆ ಕಾರಣ ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆಯಲ್ಲಿವ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ. ಇಂದು ಬೆಳಿಗ್ಗೆ 8.30ಗಂಟೆಯಿಂದ ಕೆಸಿ ಜನರಲ್‌ ಆಸ್ಪತ್ರೆಯ ಕೋವಿಡ್‌-19 ಪರೀಕ್ಷೆಗಾಗಿ ಹಲವಾರು ಜನರು ಕ್ಯೂನಲ್ಲಿ ನಿಂತು ಕಾಯುತ್ತಿದ್ದಾರೆ. ಆದ್ರೆ 9 ಗಂಟೆಯಿಂದ […]

KC General‌ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿಗೆ ಪಬ್ಲಿಕ್‌ ಕಂಗಾಲು!
Follow us on

ಬೆಂಗಳೂರು: ಕೊರನೊನಾ ವಾರಿಯರ್ಸ್‌ ಅಂತಾ ವೈದ್ಯರಿಗೆ ಎಲ್ಲಿಲ್ಲದ ಗೌರವ ಸಿಗ್ತಿದೆ ಅದು ಸರಿ ಕೂಡಾ. ಆದ್ರೆ ಅದೇ ವೈದ್ಯರು ಯುದ್ಧ ಕಾಲದಲ್ಲಿ ಕೈ ಕೊಟ್ರೆ ಅಥಾ ಬೇಜವಾಬ್ದಾರಿ ಪ್ರದರ್ಶಿಸಿದ್ರೆ ಹೇಗೆ? ಇಂಥದೊಂದು ಪ್ರಶ್ನೆ ಈಗ ಬೆಂಗಳೂರಿಗರಿಗೆ ಕಾಡುತ್ತಿದೆ.

ಇದಕ್ಕೆ ಕಾರಣ ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆಯಲ್ಲಿವ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ. ಇಂದು ಬೆಳಿಗ್ಗೆ 8.30ಗಂಟೆಯಿಂದ ಕೆಸಿ ಜನರಲ್‌ ಆಸ್ಪತ್ರೆಯ ಕೋವಿಡ್‌-19 ಪರೀಕ್ಷೆಗಾಗಿ ಹಲವಾರು ಜನರು ಕ್ಯೂನಲ್ಲಿ ನಿಂತು ಕಾಯುತ್ತಿದ್ದಾರೆ. ಆದ್ರೆ 9 ಗಂಟೆಯಿಂದ ಗಂಟಲು ದ್ರವ ಪರೀಕ್ಷೆ ಶುರುಮಾಡಬೇಕಿದ್ದ ವೈದ್ಯರು 10 ಗಂಟೆಯಾದ್ರೂ ಬಂದಿಲ್ಲ.

ಕ್ಯೂನಲ್ಲಿ ವೈದ್ಯರಿಗಾಗಿ ಕಾಯುತ್ತಿರುವವರಲ್ಲಿ ವಯಸ್ಸಾದವರು, ಗರ್ಭಿಣಿಯರು, ಕೊವಿಡ್ ವಾರಿಯರ್ಸ್ ಪೊಲೀಸರು ಸೇರಿದಂತೆ ಹಲವಾರು ಸಾರ್ವಜನಿಕರಿದ್ದಾರೆ. ಯಾವಾಗ ವೈದ್ಯರು ಬರುತ್ತಾರೆ ಅಂತಾ ಕೇಳಿದ್ರೆ ಯಾವಾಗ ಅಂತಾ ಗೊತ್ತಿಲ್ಲ ಅಂತಾ ಕೆೆಸಿ ಜನರಲ್‌ ಆಸ್ಪತ್ರೆಯ ಇತರೆ ಸಿಬ್ಬಂದಿ ಉಡಾಫೆಯ ಉತ್ತರ ಕೊಡುತ್ತಿದ್ದಾರೆ. ಮೊದಲೇ ಬೆಳಿಗ್ಗೆಯಿಂದ ಕಾದು ಸುಸ್ತಾಗಿರುವ ಸಾರ್ವಜನಿಕರು ಸಿಬ್ಬಂದಿಯ ಬೇಜವಾಬ್ದಾರಿಯಿಂದ ಮತ್ತಷ್ಟು ಹೈರಾಣಾಗಿದ್ದಾರೆ.