ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದೆ. ಕೊವಿಡ್ ಕಡಿಮೆ ಮಾಡಲು ಮಾಡಿದ್ದ ಲಾಕ್ಡೌನ್ ಹಂತ ಹಂತವಾಗಿ ಅನ್ಲಾಕ್ ಆಗಿದೆ. ಆದರೆ ಈಗ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಮತ್ತೆ ರಾಜ್ಯವನ್ನ ಲಾಕ್ಡೌನ್ ಮಾಡ್ತಾರಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಲಾಕ್ಡೌನ್ ಆದಾಗ ಜನರು ತುತ್ತು ಅನ್ನಕ್ಕೂ ಬರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲಸವಿಲ್ಲದೆ. ಎಲ್ಲಿಯೂ ಹೋಗಲಾಗದ ಪರಿಸ್ಥಿತಿಯಲ್ಲಿ ನರಕ ಅನುಭವಿಸಿದ್ದರು. ಸದ್ಯ ಈಗ ಕೊಂಚ ಮಟ್ಟಿಗೆ ಸಡಲಿಕೆ ನೀಡಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್ಡೌನ್ ಆಗುತ್ತಾ? ಇಲ್ವಾ? ಎಂಬ ಪ್ರಶ್ನೆ ಎದ್ದಿದೆ.
ಆದ್ರೆ ಇಲ್ಲಿ ಗಮನಿಸುವ ವಿಷಯ ಎಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ಲಾಕ್ಡೌನ್ ಆಗಲ್ಲ ಅಂತಿದ್ದಾರೆ. ಆದ್ರೆ ಆರ್. ಅಶೋಕ್ ಜುಲೈ 7ರಿಂದ ಕಠಿಣ ರೂಲ್ಸ್ ಅಂತಾರೆ. ಎಸ್ಎಸ್ಎಲ್ಸಿ ಎಕ್ಸಾಂ ಬಳಿಕ ಗಟ್ಟಿ ನಿರ್ಧಾರ ತೆಗೆದುಕೊಳ್ತೀವಿ ಎಂದು ಹೇಳುತ್ತಿದ್ದಾರೆ. ಇನ್ನು ಗೃಹ ಸಚಿವ ಬೊಮ್ಮಾಯಿ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಅಂತಾರೆ. ಲಾಕ್ಡೌನ್ ಬಗ್ಗೆ ಪ್ರಮುಖ ಸಚಿವರಲ್ಲೇ ಗೊಂದಲ ಉಂಟಾಗಿದೆ.
ಲಾಕ್ಡೌನ್ ಜಾರಿಗೆ ನಿರ್ಧರಿಸಿದ್ರೆ ಹೇಗಿರುತ್ತೆ ಹೊಸ ನಿಯಮ?
ರಾಜ್ಯದಲ್ಲಿ ಜಾರಿಯಾಗೋ ಲಾಕ್ಡೌನ್ ಹೇಗಿರಬಹುದು? ಕರ್ನಾಟಕ ಕಂಪ್ಲೀಟ್ ಲಾಕ್ಡೌನ್ ಆಗುತ್ತಾ? ಜನದಟ್ಟಣೆ ಪ್ರದೇಶಗಳು ಮಾತ್ರ ಲಾಕ್ಡೌನ್ ಆಗುತ್ತಾ? ಜನ ಹೆಚ್ಚಿರುವ ಪಾರ್ಕ್, ಮಾರ್ಕೆಟ್ ಮತ್ತೆ ಬಂದ್ ಮಾಡ್ತಾರಾ?ಇಲ್ಲಾ ಷರತ್ತುಬದ್ಧ ಲಾಕ್ಡೌನ್ ಜಾರಿಗೊಳಿಸ್ತಾರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ತಲೆಯಲ್ಲಿ ಓಡಾಡುತ್ತಿವೆ. ಆದರೆ ರಾಜಕಾರಣಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈಗ ಕೊರೊನಾ ಸಂಖ್ಯೆಗಳನ್ನು ನೋಡಿದ್ರೆ ಲಾಕ್ಡೌನ್ ಅನಿವಾರ್ಯ ಇಲ್ಲದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ಆದ್ರೆ ಜನ ಸಂದಣಿ ಪ್ರದೇಶಗಳಲ್ಲಿನ ಮಾರ್ಕೆಟ್ಗಳ ಸ್ಥಳಾಂತರಿಸುವ ಸಾಧ್ಯತೆ ಇದೆ. ಜನದಟ್ಟಣೆ ಕಡಿಮೆ ಮಾಡುವ ಯತ್ನ ನಡೆಯುತ್ತೆ. ಪಾರ್ಕ್ ಬೆಂಚ್ಗಳಲ್ಲಿ ಕುಳಿತು ಜನ ಕೊರೊನಾ ಅಂಟಿಸಿಕೊಳ್ತಿದ್ದಾರೆ. ಹೀಗಾಗಿ ಪಾರ್ಕ್ಗಳನ್ನ ಮತ್ತೆ ಬಂದ್ ಮಾಡೋ ಸಾಧ್ಯತೆ ಇದೆ. ಅಥವಾ ಪಾರ್ಕ್ಗಳ ಅವಧಿ ಕಡಿತಗೊಳಿಸೋ ಸಾಧ್ಯತೆ ಇದೆ.
ಮೊದಲ ಬಾರಿಗೆ ವಿಧಿಸಿದ್ದ ಲಾಕ್ಡೌನ್ ಮಾದರಿಯಲ್ಲೇ ಈ ಲಾಕ್ಡೌನ್ ಕೂಡ ಮುಂದುವರೆಯಬಹುದು. ಸದ್ಯ SSLC ಪರೀಕ್ಷೆಗಳು ನಡೆಯುತ್ತಿರುವುದರಿಂದ ಲಾಕ್ಡೌನ್ ಕುರಿತು ಗೊಂದಲ ಉಂಟಾಗಿದೆ. ಆದ್ರೆ ಎಕ್ಸಾಂ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತೆ ಎಂದು ಸಿಎಂ ಬಿಎಸ್ವೈ, ಆರ್. ಅಶೋಕ್ ಸುಳಿವು ಕೊಟ್ಟಿದ್ದಾರೆ. ಜುಲೈ 4ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಗಳು ಮುಗಿಯಲಿವೆ. ಜುಲೈ 5ರಂದು ಮೊದಲ ‘ಸಂಡೇ ಕರ್ಫ್ಯೂ’ ಜಾರಿಯಾಗಲಿದೆ. ಹೀಗಾಗಿ ಜುಲೈ 6ರಿಂದ 12 ದಿನಗಳ ಕಾಲ ಲಾಕ್ಡೌನ್ ಮಾಡೋ ಸಾಧ್ಯತೆ ಇದೆ.
Published On - 10:46 am, Tue, 30 June 20