ರಾಜಧಾನಿಯಲ್ಲಿ ಕೊರೊನಾ ರುದ್ರತಾಂಡವಕ್ಕೆ ಕಾರಣಱರು ಗೊತ್ತಾ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ನಿತ್ಯ ಎರಡು, ಮೂರು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ಸೋಂಕಿತರ ಸಂಖ್ಯೆ ಏರಿಕೆಯಾಗುವುದಕ್ಕೆ ಕಾರಣ ಹೋಮ್ ಐಸೋಲೇಷನ್ ಹಾಗೂ ಬಿಬಿಎಂಪಿಯ ನಿರ್ಲಕ್ಷ್ಯವೇ ಎನ್ನಲಾಗುತ್ತಿದೆ. ಹೋಮ್ ಐಸೋಲೇಷನ್​ನಲ್ಲಿ ಇಲ್ಲ ಸೋಂಕಿತರು: ಒಟ್ಟು 64 ಸಾವಿರ ಸಕ್ರಿಯ ಕೇಸ್​ಗಳಿದ್ದು, ಈ ಪೈಕಿ 37 ಸಾವಿರಕ್ಕೂ ಅಧಿಕ ಸೋಂಕಿತರು ಹೋಮ್‌ ಐಸೋಲೇಷನ್​ನಲ್ಲಿದ್ದಾರೆ. ಇದುವರೆಗೂ 9,39,229 ಜನ ಪ್ರೈಮರಿ ಕಾಂಟ್ಯಾಕ್ಟ್, 11,00,888 ಜನ ಸೆಕೆಂಡರಿ ಕಾಂಟ್ಯಾಕ್ಟ್ ಗಳಿದ್ದಾರೆ. ಆದರೆ ಸೋಂಕಿತರಿಗೆ ಮೂಗುದಾರ […]

ರಾಜಧಾನಿಯಲ್ಲಿ ಕೊರೊನಾ ರುದ್ರತಾಂಡವಕ್ಕೆ ಕಾರಣಱರು ಗೊತ್ತಾ?

Updated on: Oct 22, 2020 | 10:19 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ನಿತ್ಯ ಎರಡು, ಮೂರು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ಸೋಂಕಿತರ ಸಂಖ್ಯೆ ಏರಿಕೆಯಾಗುವುದಕ್ಕೆ ಕಾರಣ ಹೋಮ್ ಐಸೋಲೇಷನ್ ಹಾಗೂ ಬಿಬಿಎಂಪಿಯ ನಿರ್ಲಕ್ಷ್ಯವೇ ಎನ್ನಲಾಗುತ್ತಿದೆ.

ಹೋಮ್ ಐಸೋಲೇಷನ್​ನಲ್ಲಿ ಇಲ್ಲ ಸೋಂಕಿತರು:
ಒಟ್ಟು 64 ಸಾವಿರ ಸಕ್ರಿಯ ಕೇಸ್​ಗಳಿದ್ದು, ಈ ಪೈಕಿ 37 ಸಾವಿರಕ್ಕೂ ಅಧಿಕ ಸೋಂಕಿತರು ಹೋಮ್‌ ಐಸೋಲೇಷನ್​ನಲ್ಲಿದ್ದಾರೆ. ಇದುವರೆಗೂ 9,39,229 ಜನ ಪ್ರೈಮರಿ ಕಾಂಟ್ಯಾಕ್ಟ್, 11,00,888 ಜನ ಸೆಕೆಂಡರಿ ಕಾಂಟ್ಯಾಕ್ಟ್ ಗಳಿದ್ದಾರೆ. ಆದರೆ ಸೋಂಕಿತರಿಗೆ ಮೂಗುದಾರ ಹಾಕುವವರೆ ಇಲ್ಲದಂತಾಗಿದೆ. ಸೋಂಕಿತರ‌‌‌ನ್ನ ಮಾನಿಟರ್ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಸೋಂಕಿತರು ಬಿಂದಾಸಾಗಿ ಓಡಾಡಿಕೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲಿ, ಮಾರ್ಕೆಟ್, ಬಿಎಂಟಿಸಿ ಬಸ್, ಮಾಲ್ ಅಂತ ಸುತ್ತಾಡುತ್ತಿದ್ದಾರೆ. ಹಿಂದೆ ಕೈಗೆ ಸಿಲ್ ಹಾಕಿ ಸೋಂಕಿತರನ್ನ ಗುರುತು ಮಾಡ್ತಿದ್ರು. ಆದರೆ ಈಗ ಸೋಂಕಿತರಿಗೆ ಸೀಲ್ ಹಾಕದ ಕಾರಣ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಬಿಬಿಎಂಪಿ ಕರೆ ಮಾಡಿದ್ರೆ ಮನೆಯಲ್ಲಿದ್ದೇವೆಂದು ಸುಳ್ಳು ಮಾಹಿತಿ ನೀಡ್ತಿದ್ದಾರೆ. ಸೋಂಕಿತರ ಬೇಕಾಬಿಟ್ಟಿ ಓಡಾಟದಿಂದ ಕೊರೊನಾ ಹರಡುತ್ತಿದೆ.

ಹೋಂ​ ಐಸೋಲೇಷನ್​ನಲ್ಲಿರೋ ಬಗ್ಗೆ ಬಿಬಿಎಂಪಿ ನಿರ್ಲಕ್ಷ್ಯವಹಿಸುತ್ತಿದೆ. ಹೋಮ್​ ಐಸೋಲೇಷನ್​ನಲ್ಲಿರೋರ ಮಾನಿಟರಿಂಗ್ ಇಲ್ಲ. ಖುದ್ದು ಸಿಬ್ಬಂದಿ ಹಾಜರಾಗಿ ಮಾಹಿತಿಯನ್ನ ಪಡೆಯಬೇಕಿತ್ತು. ಆದರೆ ಕೇವಲ ಕರೆ ಮಾಡಿ ಮಾಹಿತಿ ಪಡೆಯುತ್ತಿದೆ. ಪ್ರತಿ ಐಸೋಲೇಷನ್​​ ಇದ್ದವರ ಮಾಹಿತಿ ಸಂಗ್ರಹದಲ್ಲಿ ವಿಫಲವಾಗಿದೆ. ಬಿಬಿಎಂಪಿ ಪ್ರಕಾರ 37 ಸಾವಿರ ಸೋಂಕಿತರು ಐಸೋಲೇಷನ್​ನಲ್ಲಿದ್ದಾರೆ. ಆದರೆ ಕೆಲವರು ಮಾತ್ರ ಐಸೋಲೇಷನ್​ನಲ್ಲಿದ್ದಾರೆ. ಉಳಿದವರ ಕಥೆ ಗೊತ್ತಿಲ್ಲ.

ಬೆಂಗಳೂರಿನಲ್ಲಿ ಪತ್ತೆಯಾದ ಬಹುತೇಕ ಸೋಂಕಿತರು ನಾಪತ್ತೆ:
ಇನ್ನು ಸಂಪರ್ಕಕ್ಕೆ ಸಿಗದ ಐದು ಸಾವಿರ ಕೊರೊನಾ ಸೋಂಕಿತರಿದ್ದಾರೆ. ಅವರೆಲ್ಲ ತಪ್ಪು ವಿಳಾಸ, ಮೊಬೈಲ್ ಸ್ವಿಚ್​ಆಫ್ ಮಾಡಿಕೊಂಡಿದ್ದಾರೆ. ಈ ಸೋಂಕಿತರು ಪೊಲೀಸರ ನೆರವು ಪಡೆದರೂ ಪತ್ತೆಯಾಗುತ್ತಿಲ್ಲ. ಕೆಲ ಸೋಂಕಿತರು ದಸರಾ, ವೀಕ್​ ಎಂಟ್​ ಪಾರ್ಟಿಗಳಲ್ಲಿ ಭಾಗಿಯಾಗುತ್ತಿರುವ ಶಂಕೆ ಇದೆ. ಐಸೋಲೇಷನ್​ನಲ್ಲಿರುವವರ ಮೇಲೆ ನಿಗಾ ಇಡದೆ ಪಾಲಿಕೆ ನಿರ್ಲಕ್ಷ್ಯವಹಿಸುತ್ತಿದೆ. ಇದರಿಂದ ವ್ಯಾಪಕವಾಗಿ ಸೋಂಕು ಹರಡುತ್ತಿದೆ ಎಂದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.