ನಿನ್ನೆ R.ಅಶೋಕ್​ರಿಂದ ಪರಿಹಾರ ಪಡೆದವರಿಗೆ ಇಂದು ಬಿಬಿಎಂಪಿಯಿಂದ ಬಿಗ್ ಶಾಕ್!

ಬೆಂಗಳೂರು: ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಿಸಿದ್ದರು. ಇದು ಸಂತ್ರಸ್ಥರಿಗೆ ಕೊಂಚ ಖುಷಿ ನೀಡಿತ್ತು. ಆದರೆ ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಲಿದೆ. ದತ್ತಾತ್ರೇಯನಗರದಲ್ಲಿ ರಾಜಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ಪತ್ತೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಹಾರ ಪಡೆದ 344 ಕುಟುಂಬಗಳ ಪೈಕಿ ರಾಜಕಾಲುವೆ ಒತ್ತುವರಿ ಜಾಗದಲ್ಲಿರುವ 100 ಕುಟುಂಬಗಳು […]

ನಿನ್ನೆ R.ಅಶೋಕ್​ರಿಂದ ಪರಿಹಾರ ಪಡೆದವರಿಗೆ ಇಂದು ಬಿಬಿಎಂಪಿಯಿಂದ ಬಿಗ್ ಶಾಕ್!
ಆಯೇಷಾ ಬಾನು

Updated on: Oct 26, 2020 | 7:18 AM

ಬೆಂಗಳೂರು: ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಿಸಿದ್ದರು. ಇದು ಸಂತ್ರಸ್ಥರಿಗೆ ಕೊಂಚ ಖುಷಿ ನೀಡಿತ್ತು. ಆದರೆ ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಲಿದೆ.

ದತ್ತಾತ್ರೇಯನಗರದಲ್ಲಿ ರಾಜಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ಪತ್ತೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಹಾರ ಪಡೆದ 344 ಕುಟುಂಬಗಳ ಪೈಕಿ ರಾಜಕಾಲುವೆ ಒತ್ತುವರಿ ಜಾಗದಲ್ಲಿರುವ 100 ಕುಟುಂಬಗಳು ಬೀದಿಗೆ ಬೀಳಲಿವೆ. ಒತ್ತುವರಿ ಸರ್ವೆ ನಡೆದ್ರೆ 100 ಕಟ್ಟಡ ಡೆಮಾಲಿಷ್‌ ಆಗೋದು ಗ್ಯಾರಂಟಿ. ಹೀಗಾಗಿ ನಿನ್ನೆ ಪರಿಹಾರದ ಚೆಕ್ ಪಡೆದು ಖುಷಿ ಪಟ್ಟವರಿಗೆ ಮುಂದಿದೆ ಮಾರಿ ಹಬ್ಬ ಎಂಬಂತಾಗಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಸಚಿವ ಅಶೋಕ್‌ ಸೂಚನೆ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಪರಿಹಾರ ಪಡೆದ344 ಕುಟುಂಬಗಳ ಪೈಕಿ 100 ಕುಟುಂಬಗಳು ಒತ್ತುವರಿ ಜಾಗದಲ್ಲಿವೆ. ಮಳೆ ನೀರು ನುಗ್ಗಿ ಹಾನಿ ಹಿನ್ನೆಲೆಯಲ್ಲಿ ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದ ನಿವಾಸಿಗಳಿಗೆ ಸಚಿವ R.ಅಶೋಕ್‌ ನಿನ್ನೆ 25 ಸಾವಿರ ರೂ. ಪರಿಹಾರದ ಚೆಕ್​ ವಿತರಿಸಿದ್ದರು.

ಇದನ್ನೂ ಓದಿ: ಮನೆಯವರೆಲ್ಲಾ ಹೊಸ ಬಟ್ಟೆ ಖರೀದಿ ಮಾಡಿ -ಮಳೆ ಸಂತ್ರಸ್ತರಿಗೆ 25 ಸಾವಿರ ರೂ. ಚೆಕ್​ ವಿತರಣೆ

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us