ಕೇವಲ 20 ನಿಮಿಷದಲ್ಲಿ ರಿಸಲ್ಟ್ ನೀಡ್ತಿದ್ದ ಆ್ಯಂಟಿಜನ್ ಟೆಸ್ಟ್​ಗೆ ತಿಲಾಂಜಲಿ?

ಬೆಂಗಳೂರು: ರಾಜ್ಯದಲ್ಲಿ ವೇಗವಾಗಿ ಹಬ್ಬುತ್ತಿದ್ದ ಕೊರೊನಾವನ್ನು ಹೆಮ್ಮೆಟ್ಟಿಸಲು ಇಪ್ಪತ್ತೇ ನಿಮಿಷದಲ್ಲಿ ರಿಸಲ್ಟ್ ನೀಡುವ ಆ್ಯಂಟಿಜನ್ ಟೆಸ್ಟ್​ನ ಸರ್ಕಾರ ಪರಿಚಯಿಸಿತ್ತು. ಆದರೆ ಈಗ ಆ ಟೆಸ್ಟ್​ಗೆ ತಿಲಾಂಜಲಿ ಇಡಲು ನಿರ್ಧರಿಸಿದೆ. ಆ್ಯಂಟಿಜನ್ ಱಪಿಡ್ ಟೆಸ್ಟ್ ಬದಲಿಗೆ ಸರ್ಕಾರ ಆರ್.ಟಿ.ಪಿ.ಸಿ.ಆರ್. ಗಂಟಲು ದ್ರವ ಪರೀಕ್ಷೆಗೆ ಒತ್ತು ನೀಡ್ತಿದೆ. ಹೌದು ಸೋಂಕನ್ನು ವೇಗವಾಗಿ ಪತ್ತೆ ಹಚ್ಚಲು ಸರ್ಕಾರ ಆ್ಯಂಟಿಜನ್ ಱಪಿಡ್ ಟೆಸ್ಟ್ ಮೊರೆ ಹೋಗಿತ್ತು. ಆದರೆ ಈ ಟೆಸ್ಟ್ ನಿಖರವಾಗಿ ಸೋಂಕಿತರನ್ನ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ […]

ಕೇವಲ 20 ನಿಮಿಷದಲ್ಲಿ ರಿಸಲ್ಟ್ ನೀಡ್ತಿದ್ದ ಆ್ಯಂಟಿಜನ್ ಟೆಸ್ಟ್​ಗೆ ತಿಲಾಂಜಲಿ?

Updated on: Oct 28, 2020 | 7:07 AM

ಬೆಂಗಳೂರು: ರಾಜ್ಯದಲ್ಲಿ ವೇಗವಾಗಿ ಹಬ್ಬುತ್ತಿದ್ದ ಕೊರೊನಾವನ್ನು ಹೆಮ್ಮೆಟ್ಟಿಸಲು ಇಪ್ಪತ್ತೇ ನಿಮಿಷದಲ್ಲಿ ರಿಸಲ್ಟ್ ನೀಡುವ ಆ್ಯಂಟಿಜನ್ ಟೆಸ್ಟ್​ನ ಸರ್ಕಾರ ಪರಿಚಯಿಸಿತ್ತು. ಆದರೆ ಈಗ ಆ ಟೆಸ್ಟ್​ಗೆ ತಿಲಾಂಜಲಿ ಇಡಲು ನಿರ್ಧರಿಸಿದೆ. ಆ್ಯಂಟಿಜನ್ ಱಪಿಡ್ ಟೆಸ್ಟ್ ಬದಲಿಗೆ ಸರ್ಕಾರ ಆರ್.ಟಿ.ಪಿ.ಸಿ.ಆರ್. ಗಂಟಲು ದ್ರವ ಪರೀಕ್ಷೆಗೆ ಒತ್ತು ನೀಡ್ತಿದೆ.

ಹೌದು ಸೋಂಕನ್ನು ವೇಗವಾಗಿ ಪತ್ತೆ ಹಚ್ಚಲು ಸರ್ಕಾರ ಆ್ಯಂಟಿಜನ್ ಱಪಿಡ್ ಟೆಸ್ಟ್ ಮೊರೆ ಹೋಗಿತ್ತು. ಆದರೆ ಈ ಟೆಸ್ಟ್ ನಿಖರವಾಗಿ ಸೋಂಕಿತರನ್ನ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಬಿಬಿಎಂಪಿ ಅಧಿಕಾರಿಗಳು ಱಪಿಡ್ ಟೆಸ್ಟ್ ಕಡಿಮೆ ಮಾಡಿದ್ದಾರೆ. ಸಾಮಾನ್ಯ ಜ್ವರದ ಲಕ್ಷಣಗಳು ಇದ್ದರೂ ಪಾಸಿಟಿವ್ ಎಂದೇ ರಿಸಲ್ಟ್ ತೋರಿಸುತ್ತಿದೆ. ಆ್ಯಂಟಿಜನ್ ಕಿಟ್​ ಮೂಲಕ ಪರೀಕ್ಷೆಗೆ ಒಳಪಟ್ಟಿ ಪಾಸಿಟಿವ್ ಬಂದವರನ್ನ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬರ್ತಿದೆ. ಪಾಸಿಟಿವ್, ನೆಗೆಟಿವ್ ಕೇಸ್​ಗಳ ಗೊಂದಲದ ಕಾರಣಕ್ಕೆ ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರದಲ್ಲಿ ನಿತ್ಯ ಶೇ.40 ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡುವ ಮೂಲಕ ಸೋಂಕಿತರ ಪತ್ತೆ ಮಾಡಲಾಗುತ್ತಿತ್ತು. ಇದರಿಂದ ನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿತ್ತು. ಆದ್ರೆ ಅಸಲಿ ಸೋಂಕಿತರು ಪತ್ತೆಯಾಗದ ಕಾರಣ ಈಗಾಗಲೇ ಶೇ.25 ರಷ್ಟು ಆ್ಯಂಟಿಜನ್ ಟೆಸ್ಟ್ ಕಡಿಮೆ ಮಾಡಲಾಗಿದೆ. ಮುಂದೆ ಸಂಪೂರ್ಣವಾಗಿ ಆ್ಯಂಟಿಜನ್ ಟೆಸ್ಟ್ ಕೈ ಬಿಡುವ ಸಾಧ್ಯತೆ ಇದೆ.