AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬುಧಾಬಿಯಲ್ಲಿಂದು RCB-MI ಸಮರ, ಮುಂಬೈ ಮಣಿಸಿದ್ರೆ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ ಆರ್​ಸಿಬಿ

ಆರ್‌ಸಿಬಿ ತಂಡ ಈ ಸೀಸ್‌ನಲ್ಲಿ ತನ್ನ 12ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಅಬುದಾಬಿಯಲ್ಲಿ ಮುಖಾಮುಖಿಯಾಗ್ತಿದೆ. ಉಭಯ ತಂಡಗಳಿಗೆ ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಎರಡೂ ತಂಡಗಳಿಗೆ ಪ್ಲೇ ಆಫ್‌ಗೆ ಎಂಟ್ರಿಕೊಡೋಕೆ ಇನ್ನೊಂದು ಗೆಲುವಿನ ಅನಿವಾರ್ಯತೆ ಇದೆ. ಹೀಗಾಗಿ ಅಬುಧಾಬಿಯಲ್ಲಿ ಇಂದು ಆರ್​ಸಿಬಿ ಮತ್ತು ಮುಂಬೈ ನಡುವೆ ಬಿಗ್ ಫೈಟ್ ನಡೆಯಲಿದೆ. ಎರಡು ತಂಡಕ್ಕೆ ಕಾಡ್ತಿದೆ ಗಾಯದ ಸಮಸ್ಯೆ! ಆಘಾತಕಾರಿ ಸಂಗತಿ ಅಂದ್ರೆ, ಆರ್​ಸಿಬಿ ಮತ್ತು ಮುಂಬೈ ತಂಡಗಳಿಗೆ ಗಾಯದ ಸಮಸ್ಯೆ ಕಾಡ್ತಿದೆ. ಮೊದಲಿಗೆ ಮುಂಬೈಗೆ ನಾಯಕ ರೋಹಿತ್ […]

ಅಬುಧಾಬಿಯಲ್ಲಿಂದು RCB-MI ಸಮರ, ಮುಂಬೈ ಮಣಿಸಿದ್ರೆ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ ಆರ್​ಸಿಬಿ
ಬಲಿಷ್ಠ ಮುಂಬೈ ಇಂಡಿಯನ್ಸ್​ಗೆ ಸೋಲುಣಿಸುವ ಮೂಲಕ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ದ್ವಿತಿಯಾರ್ಧದಲ್ಲಿ ಗೆಲುವಿನ ಖಾತೆ ತೆರೆದಿದೆ. 166 ರನ್​ಗಳ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಚೇಸ್ ಮಾಡುವ ಸ್ಥಿತಿಯಲ್ಲಿತ್ತು. ಆದರೆ ಇಡೀ ಪಂದ್ಯದ ಚಿತ್ರಣ ಬದಲಾಗಿದ್ದು 17ನೇ ಓವರ್​ನಲ್ಲಿ. ವಿರಾಟ್ ಕೊಹ್ಲಿ ಮಾಡಿದ ಬೌಲಿಂಗ್ ಚೇಂಜ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಏಕೆಂದರೆ ಒಂದೇ ಓವರ್​ನಲ್ಲಿ 3 ವಿಕೆಟ್​ ಉರುಳಿದ್ದವು. ಈ ಮೂವರಲ್ಲಿ ಇಬ್ಬರು ಟಿ20 ಕ್ರಿಕೆಟ್​ನ ಡೇಂಜರಸ್​ ಬ್ಯಾಟ್ಸ್​ಮನ್ ಎಂಬುದು ವಿಶೇಷ.
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Oct 28, 2020 | 11:55 AM

ಆರ್‌ಸಿಬಿ ತಂಡ ಈ ಸೀಸ್‌ನಲ್ಲಿ ತನ್ನ 12ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಅಬುದಾಬಿಯಲ್ಲಿ ಮುಖಾಮುಖಿಯಾಗ್ತಿದೆ. ಉಭಯ ತಂಡಗಳಿಗೆ ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಎರಡೂ ತಂಡಗಳಿಗೆ ಪ್ಲೇ ಆಫ್‌ಗೆ ಎಂಟ್ರಿಕೊಡೋಕೆ ಇನ್ನೊಂದು ಗೆಲುವಿನ ಅನಿವಾರ್ಯತೆ ಇದೆ. ಹೀಗಾಗಿ ಅಬುಧಾಬಿಯಲ್ಲಿ ಇಂದು ಆರ್​ಸಿಬಿ ಮತ್ತು ಮುಂಬೈ ನಡುವೆ ಬಿಗ್ ಫೈಟ್ ನಡೆಯಲಿದೆ.

ಎರಡು ತಂಡಕ್ಕೆ ಕಾಡ್ತಿದೆ ಗಾಯದ ಸಮಸ್ಯೆ! ಆಘಾತಕಾರಿ ಸಂಗತಿ ಅಂದ್ರೆ, ಆರ್​ಸಿಬಿ ಮತ್ತು ಮುಂಬೈ ತಂಡಗಳಿಗೆ ಗಾಯದ ಸಮಸ್ಯೆ ಕಾಡ್ತಿದೆ. ಮೊದಲಿಗೆ ಮುಂಬೈಗೆ ನಾಯಕ ರೋಹಿತ್ ಶರ್ಮಾ, ಅಲಭ್ಯತೆ ಇಂದಿನ ಪಂದ್ಯದಲ್ಲೂ ಕಾಡೋ ಸಾಧ್ಯತೆಯಿದೆ. ಮಂಡಿ ನೋವಿನಿಂದ ಬಳಲುತ್ತಿರೋ ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. [yop_poll id=”24″] ಇತ್ತ ವೇಗಿ ನವದೀಪ್ ಸೈನಿ ಗಾಯಗೊಂಡಿರೋದು, ಆರ್​ಸಿಬಿಗೆ ಪಾಳಯದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಬಲಗೈಗೆ ಗಾಯ ಮಾಡಿಕೊಂಡಿರೋ ಸೈನಿ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ, ಡೇಲ್ ಸ್ಟೇನ್​ಗೆ ಅವಕಾಶ ನೀಡೋ ಸಾಧ್ಯತೆ ಹೆಚ್ಚಿದೆ. ಸೈನಿ ಪ್ಲೇಸ್​ಗೆ ಸ್ಟೇನ್ ಬಂದ್ರೂ, ಸೈನಿ ಸ್ಥಾನವನ್ನ ತುಂಬ್ತಾರಾ ಅನ್ನೋ ಅನುಮಾನ ಆರ್​ಸಿಬಿ ಮ್ಯಾನೇಜ್ಮೆಂಟ್​ಗಿದೆ.

ಆಲ್​ರೌಂಡರ್ ಕೋಟಾದಲ್ಲಿ ದುಬೆಗೆ ಅವಕಾಶ! ಚೆನ್ನೈ ವಿರುದ್ಧದ ಸೋಲಿನ ಬಳಿಕ ಆರ್‌ಸಿಬಿ ತಂಡ, ಸಖತ್ ಪ್ರಾಕ್ಟೀಸ್ ನಡೆಸಿದೆ. ಪ್ರಾಕ್ಟೀಸ್ ಸೆಷನ್‌ನಲ್ಲಿ ಆಲ್‌ರೌಂಡರ್ ಶಿವಮ್ ದುಬೆ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದುಬೆ, ತಾವಾಡಿದ 27 ಬಾಲ್‌ಗಳಲ್ಲಿ 73 ರನ್ ಸಿಡಿಸಿದ್ದಾರೆ. ಫಿಯರ್‌ಲೆಸ್ ಆಗಿ ಬ್ಯಾಟ್ ಬೀಸಿದ ದುಬೆ, 4 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದ್ದಾರೆ. ಹೀಗಾಗಿ ಮುಂಬೈ ವಿರುದ್ಧ ದುಬೆ ಆರ್​ಸಿಬಿ ತಂಡವನ್ನ ಸೇರಿಕೊಳ್ಳೋ ಸಾಧ್ಯತೆ ಹೆಚ್ಚಿದೆ.

ಕಳೆದ ಪಂದ್ಯದಲ್ಲಿ ಎರಡು ತಂಡಗಳಿಗೆ ಮುಖಭಂಗ! ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಮತ್ತು ಮುಂಬೈ ಮುಗ್ಗರಿಸಿವೆ. ಮುಂಬೈ ಇಂಡಿಯನ್ಸ್ ತಂಡವನ್ನ, ಕಳೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ 8 ವಿಕೆಟ್‌ಗಳಿಂದ ಮಣಿಸಿತ್ತು. ಇನ್ನೂ ಆರ್‌ಸಿಬಿ ತಂಡವನ್ನ ಸಿಎಸ್‌ಕೆ ಕೂಡ 8 ವಿಕೆಟ್‌ಗಳಿಂದ ಸೋಲಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿ, 2 ಪಾಯಿಂಟ್ ಪಡೆದು ಪ್ಲೇ ಆಫ್​ಗೆ ಎಂಟ್ರಿ ಕೊಡೋದಕ್ಕೆ ಎರಡು ತಂಡಗಳು ತುದಿಗಾಲಲ್ಲಿ ನಿಂತಿವೆ.

ನಿಜ.. ಈ ಸೀಸನ್​ನಲ್ಲಿ ಮುಂಬೈ ವಿರುದ್ಧ ಗೆಲುವು ದಾಖಲಿಸಿರೋದು ಆರ್​ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರ ಜೊತೆಯಲ್ಲೇ ರೋಹಿತ್ ಶರ್ಮಾ ಅನುಪಸ್ಥಿತಿ, ಕೊಹ್ಲಿ ಪಡೆಗೆ ಅಡ್ವಾಂಟೇಜ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಇಂದೇ ಕೊಹ್ಲಿ ಪಡೆ ಪ್ಲೇ ಆಫ್​​ಗೆ ಅಧಿಕೃತವಾಗಿ ಎಂಟ್ರಿ ಕೊಡುತ್ತೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿದೆ.

Published On - 8:53 am, Wed, 28 October 20

ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು