ಡೆಲ್ಲಿ ಇಂದು ಗೆದ್ದರೆ ಪ್ಲೇ ಆಫ್ ಹಂತ ತಲುಪುವ ಮೊದಲ ತಂಡವೆನಿಸಿಕೊಳ್ಳುತ್ತದೆ!
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತ್ತಿಯ 47ನೇ ಪಂದ್ಯ ಇಂದು ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ದಕ್ಷಿಣದ ಸನ್ರೈಸರ್ಸ್ ಹೈದರಾಬಾದ್ ಮತ್ತು ಉತ್ತರದ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆಯಲಿದೆ. ಈ ಪಂದ್ಯವನ್ನು ಡೆಲ್ಲಿ ಗೆದ್ದಲ್ಲಿ, ಅಧಿಕೃತವಾಗಿ ಪ್ಲೇ ಆಫ್ ಹಂತ ತಲುಪಿದ ಮೊದಲ ತಂಡವೆನಿಸಿಕೊಳ್ಳಲಿದೆ. ಇದುವರೆಗೆ ಆಡಿರುವ 11 ಪಂದ್ಯಗಲ್ಲಿ ಅದು 7ರಲ್ಲಿ ಗೆಲುವು ಸಾಧಿಸಿ, 4 ರಲ್ಲಿ ಸೋತು 14 ಪಾಯಿಂಟ್ಸ್ ಶೇಖರಿಸಿದೆ. ಮತ್ತೊಂದೆಡೆ, ಹೈದರಾಬಾದ್ ಟೀಮಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಟೂರ್ನಿಯಲ್ಲಿ ಉಳಿದು, […]
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತ್ತಿಯ 47ನೇ ಪಂದ್ಯ ಇಂದು ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ದಕ್ಷಿಣದ ಸನ್ರೈಸರ್ಸ್ ಹೈದರಾಬಾದ್ ಮತ್ತು ಉತ್ತರದ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆಯಲಿದೆ. ಈ ಪಂದ್ಯವನ್ನು ಡೆಲ್ಲಿ ಗೆದ್ದಲ್ಲಿ, ಅಧಿಕೃತವಾಗಿ ಪ್ಲೇ ಆಫ್ ಹಂತ ತಲುಪಿದ ಮೊದಲ ತಂಡವೆನಿಸಿಕೊಳ್ಳಲಿದೆ. ಇದುವರೆಗೆ ಆಡಿರುವ 11 ಪಂದ್ಯಗಲ್ಲಿ ಅದು 7ರಲ್ಲಿ ಗೆಲುವು ಸಾಧಿಸಿ, 4 ರಲ್ಲಿ ಸೋತು 14 ಪಾಯಿಂಟ್ಸ್ ಶೇಖರಿಸಿದೆ. ಮತ್ತೊಂದೆಡೆ, ಹೈದರಾಬಾದ್ ಟೀಮಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಟೂರ್ನಿಯಲ್ಲಿ ಉಳಿದು, ಪ್ಲೇ ಆಫ್ನಲ್ಲಾಡುವ ಕನಸನ್ನು ಸಾಕಾರಗೊಳಿಸಿಕೊಳ್ಳಬೇಕಾದರೆ, ಡೇವಿಡ್ ವಾರ್ನರ್ ತಂಡ ಡೆಲ್ಲಿ ವಿರುದ್ಧ ಇವತ್ತು ಗೆಲ್ಲಲೇಬೇಕು. ಹಾಗೆ ನೋಡಿದರೆ, ಉಳಿದ ಮೂರು ಪಂದ್ಯಗಳಲ್ಲಿ ಗೆದ್ದರೂ ಹೈದರಾಬಾದ್ ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಿಟ್ಟಿಸುವ ಬಗ್ಗೆ ಖಾತ್ರಿಯಿಲ್ಲ.
ಯಾಕೆಂದರೆ, ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ಅದು 4ರಲ್ಲಿ ಮಾತ್ರ ಜಯಗಳಿಸಿ 8 ಅಂಕಗಳೊಂದಿಗೆ ಚೆನೈ ಸೂಪರ್ ಕಿಂಗ್ಸ್ ಜೊತೆ ಕೊನೆಯ ಸ್ಥಾನ ಹಂಚಿಕೊಂಡಿದೆ. ಆದರೆ, ಚೆನೈಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿರುವುದರಿಂದ ಒಂದು ಸ್ಥಾನ ಮೇಲಿದೆ.
ದುಬೈ ಸ್ಟೇಡಿಯಂನಲ್ಲಿ ಈ ಎರಡು ತಂಡಗಳ ಸಾಧನೆಯನ್ನು ನೋಡಿದರೆ, ಹೈದರಾಬಾದ್ 9 ಪಂದ್ಯಗಳನ್ನಾಡಿದೆ ಮತ್ತು 5ರಲ್ಲಿ ಜಯಗಳಿಸಿದೆ. 7 ಪಂದ್ಯಗಳನ್ನಾಡಿರುವ ಡೆಲ್ಲಿ 5 ರಲ್ಲಿ ಗೆದ್ದಿದೆ. ಅಂದರೆ, ಸದರಿ ಮೈದಾನದಲ್ಲಿ ಡೆಲ್ಲಿಯ ಪ್ರದರ್ಶನ ಹೈದರಾಬಾದ್ಗಿಂತ ಚೆನ್ನಾಗಿದೆ. ದಕ್ಷಿಣ ಭಾರತಕ್ಕಿರುವ ಒಂದೇ ಒಂದು ಸಮಾಧಾನಕರ ಅಂಶವೆಂದರೆ, ಮೊದಲ ಸುತ್ತಿನ ಪಂದ್ಯದಲ್ಲಿ ಅದು ಡೆಲ್ಲಿಯನ್ನು ಸೋಲಿಸಿರುವುದು.
[yop_poll id=”23″]
ಹೈದರಾಬಾದ್ಗೆ ಬ್ಯಾಟಿಂಗ್ನಲ್ಲಿ ಉಲ್ಲೇಖಿಸುವಂಥ ಸಮಸ್ಯೆಗಳಿಲ್ಲವಾದರೂ, ಪ್ರಮುಖ ಆಟಗಾರರಾದ ವಾರ್ನರ್, ಜಾನಿ ಬೇರ್ಸ್ಟೊ, ಕೇನ್ ವಿಲಿಯಮ್ಸನ್ ಮತ್ತು ಮನೀಶ್ ಪಾಂಡೆ ಅವರ ಪ್ರದರ್ಶನಗಳಲ್ಲಿ ಸ್ಥಿರತೆಯ ಕೊರತೆಯಿದೆ. ಒಂದು ಯುನಿಟ್ ಅವರು ಕ್ಲಿಕ್ ಆಗುತ್ತಿಲ್ಲ. ಜೇಸನ್ ಹೋಲ್ಡರ್ ಸೇರ್ಪಡೆಯಿಂದ ಟೀಮಿನ ಬ್ಯಾಲೆನ್ಸ್ ಉತ್ತಮಗೊಂಡಿರುವುದು ನಿಜ ಆದರೆ, ಅವರೊಬ್ಬ ಬೌಲಿಂಗ್ ಅಲ್ರೌಂಡರ್.
ಟೀಮಿನ ಬೌಲಿಂಗ್ ಸಹ ನಿರೀಕ್ಷಿತ ಮಟ್ಟದಲ್ಲಿ ಪರ್ಫಾರ್ಮ್ ಮಾಡುತ್ತಿಲ್ಲ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಜಾಸ್ತಿ ಅವಲಂಬಿಸಿರುವುದು ಒಳ್ಳೆಯ ಲಕ್ಷಣವಲ್ಲ. ಕರಾರುವಕ್ಕಾಗಿ ಯಾರ್ಕರ್ಗಳನ್ನು ಎಸೆಯುವ ನಟರಾಜನ್ ಪದೇಪದೆ ತಮ್ಮ ಖ್ಯಾತಿಗೆ ತಕ್ಕ ಬೌಲಿಂಗ್ ಪ್ರದರ್ಶನ ನೀಡಲು ವಿಫಲರಾಗುತ್ತಿರುವುದು ಟೀಮಿನ ಮೇಲೆ ಅಡ್ಡಪರಿಣಾಮ ಬೀರಿದೆ. ಮಧ್ಯಮ ವೇಗದ ಬೌಲರ್ ಸಂದೀಪ್ ಶರ್ಮ ಈ ಸೀಸನ್ನಲ್ಲಿ ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಹೈದರಾಬಾದ್ಗೆ ಹೋಲಿಸಿದರೆ ಡೆಲ್ಲಿಯ ಸಾಧನೆ ಅತ್ಯುತ್ತಮವಾಗಿದೆ. ಇದಕ್ಕೆ ಮೊದಲು ಚರ್ಚಿಸಿರುವಂತೆ ಟೀಮು ಸರ್ವಾಂಗ ಪ್ರಬಲವಾಗಿದೆ ಮತ್ತು ಶ್ರೇಯಸ್ ಅಯ್ಯರ್ ಟೀಮನ್ನು ಅದ್ಭುತವಾಗಿ ಲೀಡ್ ಮಾಡುತ್ತಿದ್ದಾರೆ. ಆದರೆ, ಕಳೆದೆರಡು ಪಂದ್ಯಗಳಲ್ಲಿ ಡೆಲ್ಲಿ ತಂಡ ಕೆಕೆಆರ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಸೋತಿರುವುದು ಅದರ ನೈತಿಕ ಸ್ಥೈರ್ಯವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ.
ಮೊದಲ ಸುತ್ತಿನ ಪಂದ್ಯದಲ್ಲಿ ಹೈದರಾಬಾದ್ಗೆ ಸೋತಿರುವ ಡೆಲ್ಲಿಗೆ ಇಂದು ಮಯ್ಯಿ ತೀರಿಸುವ ಅವಕಾಶ. ಟೀಮಿಗೆ ನೆರವಾಗಬಹುದಾದ ಮತ್ತೊಂದು ಅಂಶವೆಂದರೆ, ದುಬೈನ ಮೈದಾನ. ಮೊದಲೇ ಹೇಳಿದಂತೆ ಇಲ್ಲಿ ಡೆಲ್ಲಿಯ ಪ್ರದರ್ಶನಗಳು ಅದ್ಭುತವಾಗಿವೆ. ಡೆಲ್ಲಿ, ಉಳಿದ ಟೀಮುಗಳಂತೆ ವೈಯಕ್ತಿಕ ಸಾಧನೆಗಳ ಮೇಲೆ ಆತುಕೊಂಡಿಲ್ಲ.
ಆರಂಭ ಆಟಗಾರ ಶಿಖರ್ ಧವನ್ ಉತ್ಕೃಷ್ಟ ಫಾರ್ಮ್ನಲ್ಲಿದ್ದಾರೆ. ಗಬ್ಬರ್ ಸಿಂಗ್ ಬ್ಯಾಟ್ನಿಂದ ಆದಾಗಲೇ ಎರಡು ಶತಕಗಳು ಸಿಡಿದಿವೆ.
ಟೀಮಿಗೆ ಹೊರೆಯಾಗುತ್ತಿರುವ ಆಟಗಾರನೆಂದರೆ ಸತತವಾಗಿ ಫೇಲಾಗುತ್ತಿರುವ ಅಜಿಂಕ್ಯಾ ರಹಾನೆ ಮಾತ್ರ. ಅವರನ್ನು ಇಂದಿನ ಪಂದ್ಯಕ್ಕೆ ಡ್ರಾಪ್ ಮಾಡಿದರೂ ಆಶ್ಚರ್ಯವಿಲ್ಲ. ವೇಗದ ಬೌಲರ್ಗಳಾದ ಕಗಿಸೊ ರಬಾಡ ಮತ್ತು ಌನ್ರಿಕ್ ನೊರ್ಕಿಯ ಮತ್ತು ಸ್ಪಿನ್ನರ್ಗಳು-ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಒಂದು ಬೌಲಿಂಗ್ ಯುನಿಟ್ ಆಗಿ ಗಮನಸೆಳೆಯುವ ಸಾಧನೆ ಮಾಡುತ್ತಿದ್ದಾರೆ.
Published On - 4:19 pm, Tue, 27 October 20