ಬೆಂಗಳೂರು: ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ಗೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಹಲಸೂರು ಬಳಿ ನಡೆದಿದೆ.
ಹಲಸೂರಿನ ಕೆಲವೆಡೆ ರಸ್ತೆಯಲ್ಲಿ ಮೀನಿನ ಬಾಕ್ಸ್ಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿಗಳು ಮೀನಿನ ಬಾಕ್ಸ್ ಇಟ್ಟಿದ್ದರಿಂದ ರಸ್ತೆಯೆಲ್ಲಾ ಗಲೀಜು ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್, ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಸಂಜಯ್ಗೆ ಆವಾಜ್ ಹಾಕಿದ್ದಾರೆ.
ರಸ್ತೆಯ ಮೇಲೆ ಮೀನಿನ ಬಾಕ್ಸ್ಗಳನ್ನು ಇಟ್ಟುಕೊಂಡಿದ್ದರೂ ನೀವು ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿ ಮಾತಿನ ಭರದಲ್ಲಿ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ಗೆ ಸರ್ಫರಾಜ್ ಖಾನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
Published On - 12:38 pm, Tue, 31 December 19