BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?

| Updated By: ಸಾಧು ಶ್ರೀನಾಥ್​

Updated on: Mar 02, 2021 | 10:57 AM

ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್​ ಕೇಸ್​​ನಲ್ಲಿ FIR ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?
ಬಿಡಿಎ ಕಚೇರಿ
Follow us on

ಬೆಂಗಳೂರು: ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್ ಆಗಿರುವ​ ಕೇಸ್​​ನಲ್ಲಿ ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ (FIR)  ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ. ಎಫ್​ಐಆರ್​ನಲ್ಲಿ ಆ ಹೆಸರು ಕೈ ಬಿಡಲು ಕಾರಣವೇನು? ಹೆಸರು ಕೈ ಬಿಡೋದ್ರ ಹಿಂದಿದ್ಯಾ ಪ್ರಭಾವಿಗಳ ಕೈವಾಡ? ಕೈ ಬಿಟ್ಟಿದ್ದು ಯಾರ ಹೆಸರನ್ನ? ಎಂಬುವುದರ ಮಾಹಿತಿ ಇಲ್ಲಿದೆ ಓದಿ.

ಅನಾಥ ಮಕ್ಕಳ ಆಭಿವೃದ್ದಿ ಸಂಘಕ್ಕೆ ನೀಡಿರೋ BDA ಸೈಟನ್ನು ಅಕ್ರಮವಾಗಿ ಅಲಾಟ್ ಮಾಡಿಕೊಂಡಿದ್ದ ಕೇಸ್​​ಗೆ ಸಂಬಂಧಿಸಿ ಬಿಡಿಎನಲ್ಲಿ ಕೆಲಸ ಮಾಡಿದ್ದ ನಾಲ್ವರು ಅಧಿಕಾರಿಗಳಿಗೆ ಬಿಡಿಎ ಆಯುಕ್ತ H.R.ಮಹದೇವ್ ನೋಟಿಸ್ ನೀಡಿದ್ದರು.

FIRನಲ್ಲಿ ಚಿದಾನಂದ ಹೆಸರಿಲ್ಲ..
ಅನಿಲ್ ಕುಮಾರ್​, ಸುಧಾ, ಭಾಸ್ಕರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಇದೇ ವಿಚಾರ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು. ಆದ್ರೆ ಈಗ ಪೊಲೀಸರ FIR​​ನಲ್ಲಿ ಒಬ್ಬ ಅಧಿಕಾರಿಯ ಹೆಸರೇ ಇಲ್ಲ. ಕೇವಲ ಮೂವರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ದಾಖಲಾಗಿರೋ FIRನಲ್ಲಿ ಚಿದಾನಂದ ಹೆಸರಿಲ್ಲ.

ಇನ್ನು ಚಿದಾನಂದ ವಿರುದ್ಧ ನೋಟಿಸ್​​ನಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದವು. ನೋಟಿಸ್​​ನಲ್ಲಿ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಸದ್ಯ ಚಿದಾನಂದ ಹೆಸರು ಮಾಯಾವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಯಾಕೆ ದೂರಿನಲ್ಲಿ ಚಿದಾನಂದ ಹೆಸರು ಉಲ್ಲೇಖ ಮಾಡಿಲ್ಲ ಅನ್ನೋ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಅಷ್ಟೂ ಅಧಿಕಾರಿಗಳಿಗೆ ನೀಡಿರೋ ನೋಟಿಸ್​ನಲ್ಲಿ ಕ್ರಮ ಜರುಗಿಸೋ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ನೋಟಿಸ್​ಗೆ ಉತ್ತರ ನೀಡುವಂತೆಯೂ ಸೂಚಿಸಲಾಗಿತ್ತು. ಆದ್ರೆ ಈಗ ಎಲ್ಲರ ವಿರುದ್ಧ FIR ದಾಖಲಾಗಿದ್ರು ಒಬ್ಬರ ಹೆಸರು ಮಿಸ್ ಆಗಿದೆ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ.

ಇದನ್ನೂ ಓದಿ: ಬಿಡಿಎಯಿಂದ ಮತ್ತೊಂದು ಹೊಸ ಲೇಔಟ್ ನಿರ್ಮಾಣ: ಸುಮಾರು 450 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್..!