ಕ್ವಾರಂಟೈನ್ ಮುಗ್ಸಿ ಮನೆಗೆ ಮರಳಿದ ನರ್ಸ್,​ ತಾಯಿ-ಮಗಳ ಸಮ್ಮಿಲನಕ್ಕೆ ಜನ ಖುಷ್

|

Updated on: Apr 18, 2020 | 3:53 PM

ಬೆಳಗಾವಿ: ಕೊರೊನಾ ವಾರ್ಡ್​ನಲ್ಲಿ ಕೆಲಸ ಮಾಡಿ ಮನೆಗೆ ನರ್ಸ್ ವಾಪಸ್ ಆಗುತ್ತಿದ್ದಂತೆ ಮಗು ಓಡೋಡಿ ಬಂದು ತಾಯಿಯನ್ನು ಅಪ್ಪಿಕೊಂಡಿದೆ. ಈ ವೇಳೆ ಮುಗುವನ್ನು ಮುದ್ದಾಡಿ ತಾಯಿ ಆನಂದ ಭಾಷ್ಪ ಸುರಿಸಿದ್ದಾರೆ. ಬೆಳಗಾವಿ ನಗರದ ಬಡಕಲ್ ಗಲ್ಲಿಯಲ್ಲಿರುವ ಮನೆಯಲ್ಲಿ ನರ್ಸ್​ ಸುಗಂಧಾ ವಾಸವಿದ್ದರು. ಒಂದು ವಾರ ಕೊರೊನಾ ವಾರ್ಡ್​ನಲ್ಲಿ ನರ್ಸ್​ ಕೆಲಸ ಮಾಡಿದ್ದರು. ಬಳಿಕ 14 ದಿನ ಸುಗಂಧಾ ಕ್ವಾರಂಟೈನ್​ನಲ್ಲಿದ್ದರು. ಹಾಗಾಗಿ 21 ದಿನ 3 ವರ್ಷದ ಮಗಳನ್ನ ಬಿಟ್ಟು ಸುಗಂಧಾ ಕೆಲಸ ಮಾಡುತ್ತಿದ್ದರು. ಕ್ವಾರಂಟೈನ್​ನಲ್ಲಿರುವ ಕಾರಣ ತನ್ನ […]

ಕ್ವಾರಂಟೈನ್ ಮುಗ್ಸಿ ಮನೆಗೆ ಮರಳಿದ ನರ್ಸ್,​ ತಾಯಿ-ಮಗಳ ಸಮ್ಮಿಲನಕ್ಕೆ ಜನ ಖುಷ್
Follow us on

ಬೆಳಗಾವಿ: ಕೊರೊನಾ ವಾರ್ಡ್​ನಲ್ಲಿ ಕೆಲಸ ಮಾಡಿ ಮನೆಗೆ ನರ್ಸ್ ವಾಪಸ್ ಆಗುತ್ತಿದ್ದಂತೆ ಮಗು ಓಡೋಡಿ ಬಂದು ತಾಯಿಯನ್ನು ಅಪ್ಪಿಕೊಂಡಿದೆ. ಈ ವೇಳೆ ಮುಗುವನ್ನು ಮುದ್ದಾಡಿ ತಾಯಿ ಆನಂದ ಭಾಷ್ಪ ಸುರಿಸಿದ್ದಾರೆ. ಬೆಳಗಾವಿ ನಗರದ ಬಡಕಲ್ ಗಲ್ಲಿಯಲ್ಲಿರುವ ಮನೆಯಲ್ಲಿ ನರ್ಸ್​ ಸುಗಂಧಾ ವಾಸವಿದ್ದರು. ಒಂದು ವಾರ ಕೊರೊನಾ ವಾರ್ಡ್​ನಲ್ಲಿ ನರ್ಸ್​ ಕೆಲಸ ಮಾಡಿದ್ದರು. ಬಳಿಕ 14 ದಿನ ಸುಗಂಧಾ ಕ್ವಾರಂಟೈನ್​ನಲ್ಲಿದ್ದರು. ಹಾಗಾಗಿ 21 ದಿನ 3 ವರ್ಷದ ಮಗಳನ್ನ ಬಿಟ್ಟು ಸುಗಂಧಾ ಕೆಲಸ ಮಾಡುತ್ತಿದ್ದರು.

ಕ್ವಾರಂಟೈನ್​ನಲ್ಲಿರುವ ಕಾರಣ ತನ್ನ ಮಗಳನ್ನು ಭೇಟಿಯಾಗದೆ ಆಸ್ಪತ್ರೆ ಮುಂದೆ ಸುಗಂಧಾ-ಮಗಳು ಕಣ್ಣೀರಿಟ್ಟಿದ್ದರು. ಈ ಕುರಿತು ಟಿವಿ9 ಕನ್ನಡದಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಟಿವಿ9 ಸುದ್ದಿ ನೋಡಿ ನರ್ಸ್ ಸುಗಂಧಾ ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿ ಮಾತನಾಡಿದ್ದರು. 21 ದಿನಗಳ ನಂತರ ಇದೀಗ ಮನೆಗೆ ವಾಪಸ್ ಆಗಿದ್ದಾರೆ. ಅಮ್ಮ-ಮಗಳ ಸಮ್ಮಿಲನ ಕಂಡು ಕಾಲೋನಿಯ ಜನ ಖುಷಿಯಾಗಿದ್ದಾರೆ.

Published On - 3:50 pm, Sat, 18 April 20