ಬೆಳಗಾವಿ: ಹಾಡಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಖದೀಮರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿರುವ ಘಟನೆ ಬೆಳಗಾವಿ ಹೊರವಲಯದ ಜಾಡ್ ಶಹಾಪುರ್ ಬಳಿ ನಡೆದಿದೆ. ಪ್ರಕಾಶ್ ಪಾಟೀಲ್, ನಿಪಾಯಿ ಮಂಡಲ್ ಬಂಧಿತ ಆರೋಪಿಗಳು.
ಗೋವಾ ಮೂಲದ ಇಬ್ಬರು ಆರೋಪಿಗಳು ಪೊಲೀಸರಿಗೆ ಚಾಕು ತೋರಿಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಈ ವೇಳೆ ಇಬ್ಬರು ಕಳ್ಳರನ್ನು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಹೊಲದಲ್ಲಿ ಹಿಡಿಯಲಾಗಿದೆ. ಇದೇ ಸಂದರ್ಭದಲ್ಲಿ ಕೆಲ ಸ್ಥಳೀಯರು ಖದೀಮರಿಗೆ ಗೂಸಾ ಕೊಟ್ಟಿದ್ದಾರೆ.
ಸದ್ಯ ಬಂಧಿತರಿಂದ ಮಾರಕಾಸ್ತ್ರ, ನಕಲಿ ನಂಬರ್ ಪ್ಲೇಟ್ ಜಪ್ತಿ ಮಾಡಲಾಗಿದೆ. ಕಳ್ಳರನ್ನು ಬೆನ್ನಟ್ಟಿ ಹಿಡಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ಬುಕ್ನಲ್ಲಿ ನಕಲಿ ಅಕೌಂಟ್ ತೆರೆದು ಹಣ ದೋಚುತ್ತಿದ್ದ ನಕಲಿ ಪೊಲೀಸ್ ಕಮಿಷನರ್ ಅಂದರ್, ಯಾವೂರಲ್ಲಿ?