AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಚಿತ್ರದಲ್ಲಿ ನಟಿಸ್ತಿಲ್ಲ ಸಮಂತಾ, ನಯನತಾರಾ: ಕಥೆ ಕೇಳಿ ಓಕೆ ಅಂದು ಇದೀಗ ಹೊರನಡೆದ ಸಮಂತಾ..

ಸೌತ್‌ ಸಿನಿ ದುನಿಯಾದ ಟಚಾಪ್‌ ಸುಂದರಿಯರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಕೇಳಿದ್ದ ಅಭಿಮಾನಿಗಳು ಅವ್ರ ಅಭಿನಯ ನೋಡೋಕೆ ಥ್ರಿಲ್‌ ಆಗಿ ಕಾಯ್ತಿದ್ರು. ಆದ್ರೀಗ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಬ್ಬರೂ ಒಂದಾಗೋದು ಡೌಟ್ ಅನ್ನೋ ಮಾತಿಗೆ ಈ ಸ್ಟೋರಿ ಉತ್ತರ ಕೊಟ್ಟಂತಿದೆ. ಹಾಗಾದ್ರೆ ಅದ್ಯಾವ ಸಿನಿಮಾ.. ಆ ನಟಿಮಣಿಯರ ನಡುವೆ ನಡೆದಿದ್ದೇನು.. ಅದರ ಡಿಟೇಲ್ಸ್ ಇಲ್ಲಿದೆ ಓದಿ.

ಒಂದೇ ಚಿತ್ರದಲ್ಲಿ ನಟಿಸ್ತಿಲ್ಲ ಸಮಂತಾ, ನಯನತಾರಾ: ಕಥೆ ಕೇಳಿ ಓಕೆ ಅಂದು ಇದೀಗ ಹೊರನಡೆದ ಸಮಂತಾ..
ಕಾತುವಕ್ಕಲು ರೆಂಡು ಕಾದಲ್‌
ಆಯೇಷಾ ಬಾನು
ಆಯೇಷಾ ಬಾನು|

Updated on: Dec 07, 2020 | 7:41 AM

Share

ಸಿನಿ ದುನಿಯಾದಲ್ಲಿ ಸದ್ಯ ಮಲ್ಟಿ ಸ್ಟಾರ್‌ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಒಂದೇ ಸಿನಿಮಾದಲ್ಲಿ ತಮ್ಮ ತಮ್ಮ ನೆಚ್ಚಿನ ನಟನಟಿಯರನ್ನ ನೋಡೋಕೆ ಸಿನಿಮಾ ಅನೌನ್ಸ್‌ ಆದಾಗಿನಿಂದ್ಲೂ ಅಭಿಮಾನಿಗಳು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳೋವರೆಗೂ ಕಾದು ಕುಳಿತಿರ್ತಾರೆ.

ಆರಂಭದಿಂದ್ಲೇ ಸ್ಟಾರ್‌ಗಳೂ ಕೂಡ ತಮ್ಮ ಪಾತ್ರಕ್ಕೆ ಎಷ್ಟು ಇಂಪಾರ್ಟೆನ್ಸ್ ಇದೆ ಅನ್ನೋದನ್ನ ಲೆಕ್ಕ ಹಾಕಿಯೇ ಸಿನಿಮಾಗೆ ಸೈನ್ ಮಾಡಿರ್ತಾರೆ. ಸದ್ಯ ಟಾಲಿವುಡ್‌ ಹಾಗೂ ಕಾಲಿವುಡ್‌ ನಟಿಮಣಿಯರಾದ ಸಮಂತ ಹಾಗೂ ನಯನತಾರಾ ಒಂದೇ ಚಿತ್ರದಲ್ಲಿ ನಟಿಸ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು.

ನಯನತಾರಾ ಬಾಯ್‌ ಫ್ರೆಂಡ್‌ ವಿಗ್ನೇಶ್‌ ಶಿವನ್‌ ಆ್ಯಕ್ಷನ್‌ ಕಟ್‌ ಹೇಳ್ತಿರೋ ಕಾತುವಕ್ಕಲು ರೆಂಡು ಕಾದಲ್‌ ಸಿನಿಮಾದಲ್ಲಿ ಸಮಂತ ಹಾಗೂ ನಯನತಾರಾ ನಟಿಸ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈಗಾಗ್ಲೇ ಆಗಿರೋ ಮಾತು ಕಥೆ ಪ್ರಕಾರ ಇಬ್ಬರೂ ನಟಿಮಣಿಯರು ಕಥೆ ಕೇಳಿ ಪಾತ್ರಕ್ಕೂ ಓಕೆ ಅಂತ ಹೇಳಿದ್ರು. ಆದ್ರೀಗ ಕಾತುವಕ್ಕಲು ರೆಂಡು ಕಾದಲ್‌ ಸಿನಿಮಾದಿಂದ ಸಮಂತ ಹೊರ ನಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

ಒಂದೇ ಚಿತ್ರದಲ್ಲಿ ನಟಿಸ್ತಿಲ್ಲ ಸಮಂತಾ, ನಯನತಾರಾ: ಅಷ್ಟಕ್ಕೂ ಈ ಚಿತ್ರದಲ್ಲಿ ಸಮಂತಾ ಪಾತ್ರಕ್ಕೆ ಅಂದುಕೊಂಡಷ್ಟು ಪ್ರಾಮುಖ್ಯತೆ ಇಲ್ವಂತೆ. ಹೀಗಾಗಿ ಸಮಂತಾ ಆ ಸಿನಿಮಾದಿಂದ ಹೊರ ಬಂದಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ. ಆದ್ರೆ ಈ ಸುದ್ದಿ ಎಷ್ಟು ನಿಜ ಅನ್ನೋದನ್ನ ಚಿತ್ರತಂಡ ಅಧಿಕೃತವಾಗಿ ಕನ್‌ ಫರ್ಮ್‌ ಮಾಡಬೇಕಿದೆ. ಸದ್ಯ ಹರಿದಾಡ್ತಿರೋ ಮಾಹಿತಿ ಪ್ರಕಾರ ಸಮಂತಾ ಪಾತ್ರಕ್ಕೆ ನಟಿ ಕೀರ್ತಿ ಸುರೇಶ್‌ ಅಥವಾ ತ್ರಿಶಾರನ್ನ ಕರೆತರೋಕೆ ಚಿತ್ರತಂಡ ಫ್ಲ್ಯಾನ್‌ ಮಾಡ್ತಿದೆಯಂತೆ.

ಒಟ್ನಲ್ಲಿ ನಟರ ಮಸ್ಟಿ ಸ್ಟಾರ್‌ ಸಿನಿಮಾ ರೀತಿಯೇ ನಟಿಮಣಿಯರೂ ಒಂದಾಗಿ ಸಿನಿಮಾದಲ್ಲಿ ಅಭಿನಯಿಸ್ತಾರೆ ಅನ್ನೋದನ್ನ ಕೇಳಿ ಫುಲ್‌ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಈಗ ಈ ಸುದ್ದಿ ನಿರಾಸೆ ಮೂಡಿಸಿದೆ. ಹಾಗಾಗಿ ಕಾತುವಕ್ಕಲು ರೆಂಡು ಕಾದಲ್‌ ಚಿತ್ರದಲ್ಲಿ ಸಮಂತಾ ನಟಿ ಗಾಳಿ ಸುದ್ದಿಗೆ ಬ್ರೇಕ್‌ ಹಾಕ್ತಾರಾ. ಬೇರೆ ನಟಿ ಬಂದು ಕಮಾಲ್‌ ಮಾಡ್ತಾರಾ ಅನ್ನೋದು ಸದ್ಯದ ಕುತೂಹಲ.

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್