ಬೆಂಗಳೂರು: ಬರೀ ಬೈ ಎಲೆಕ್ಷನ್ ಅಲ್ಲ. ಇದೊಂದು ಮಿನಿ ಕುರುಕ್ಷೇತ್ರ. ಮೂರು ಪಕ್ಷಗಳ ಜಿದ್ದಾಜಿದ್ದಿನ ಸಮರ. ಪ್ರತಿಷ್ಠೆಗಾಗಿ ನಡೆದ ಕಾದಾಟ. ಇರೋ 15 ಸೀಟ್ಗಳಲ್ಲಿ ಹೆಚ್ಚು ಸ್ಥಾನ ಗೆಲ್ಲೋಕೆ ನಡೆದ ಹೋರಾಟ. ಅಂಥಾ ರಣರೋಚಕ. ಕುತೂಹಲದ ಕಾದಾಟದ ಭವಿಷ್ಯ ಇಂದು ಹೊರಬೀಳಲಿದೆ. ಕಣದಲ್ಲಿ ಮಿಂಚಿನಂತೆ ಕಾದಾಡಿದ್ದ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಶುರುವಾಗಿದೆ. ಅದ್ರಲ್ಲೂ ಬೆಂಗಳೂರಿನ 5 ಕ್ಷೇತ್ರಗಳ ಅಭ್ಯರ್ಥಿಗಳು ಏನಾಗುತ್ತೋ ಏನೋ ಅಂತಾ ಫಲಿತಾಂಶದತ್ತ ಚಿತ್ತ ನೆಟ್ಟು ಕೂತಿದ್ದಾರೆ.
ಬೆಂಗಳೂರಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಾಢ್ಯ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಅವರ ಮಧ್ಯೆ ದೊಡ್ಡ ಕದನವೇ ಏರ್ಪಟ್ಟಿತ್ತು. ಆ ರೋಚಕ ಫೈಟ್ ಮಾಡ್ತಿರೋ ಬೆಂಗಳೂರಿನ 5 ಕ್ಷೇತ್ರಗಳು:
‘ಪಂಚ’ ಕ್ಷೇತ್ರಗಳು
* ಯಶವಂತಪುರ
* ಮಹಾಲಕ್ಷ್ಮೀ ಲೇಔಟ್
* ಹೊಸಕೋಟೆ
* ಕೆ.ಆರ್. ಪುರಂ
* ಶಿವಾಜಿನಗರ
ಯಶವಂತಪುರ ವಿಧಾನಸಭಾ ಕ್ಷೇತ್ರ
ಎಸ್.ಟಿ. ಸೋಮಶೇಖರ್ v/s ಟಿ.ಎನ್. ಜವರಾಯಿಗೌಡ v/s ಪಿ.ನಾಗರಾಜ್
ಬೆಂಗಳೂರಿನಲ್ಲಿ ಯಶವಂತಪುರ ಹೈವೋಲ್ಟೇಜ್ ಕ್ಷೇತ್ರ. ಇಲ್ಲಿ ಬಿಜೆಪಿ ಅಭ್ಯರ್ಥಿ ಆಗಿರುವ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಪ್ರಬಲ ಅಭ್ಯರ್ಥಿ. 2 ಬಾರಿಯೂ ಸೋಮಶೇಖರ್ ವಿರುದ್ಧ ಪರಾಜಿತರಾಗಿದ್ದ ಟಿ.ಎನ್. ಜವರಾಯಿಗೌಡ ಜೆಡಿಎಸ್ ಅಭ್ಯರ್ಥಿಯಾಗಿ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಈ ಬಾರಿ ಇಬ್ಬರ ಮಧ್ಯೆ ನೇರಾನೇರ ಫೈಟ್ ಇದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸ ಮುಖ ಪಿ. ನಾಗರಾಜ್ ಮೊದಲ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ
ಕೆ.ಗೋಪಾಲಯ್ಯ v/s ಎಂ. ಶಿವರಾಜು v/s ಗಿರೀಶ್ ನಾಶಿ
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರವೂ ಅಷ್ಟೇ.. ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಕ್ಷೇತ್ರ.. 2 ಬಾರಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಕೆ. ಗೋಪಾಲಯ್ಯ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಎಂ. ಶಿವರಾಜು ಮೊದಲ ಬಾರಿಗೆ ಅಖಾಡದಲ್ಲಿದ್ದಾರೆ. ಇನ್ನು ಕಾಂಗ್ರೆಸ್ ತೊರೆದಿದ್ದ ಗಿರೀಶ್ ನಾಶಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರ
ಎಂಟಿಬಿ ನಾಗರಾಜ್ v/s ಶರತ್ ಬಚ್ಚೇಗೌಡ v/s ಪದ್ಮಾವತಿ ಸುರೇಶ್
ಹೊಸಕೋಟೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್ಗೆ ಕೈ ಕೊಟ್ಟು ಹೋಗಿರೋ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮಧ್ಯೆ ನೇರಾನೇರ ಫೈಟ್ ಇದೆ. ಇವರಿಬ್ಬರ ಅಲೆ ಮಧ್ಯೆ ಕಾಂಗ್ರೆಸ್ ಪದ್ಮಾವತಿ ಸುರೇಶ್ ಪುಟಿದೇಳುವ ತವಕದಲ್ಲಿದ್ದಾರೆ.
ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರ
ಭೈರತಿ ಬಸವರಾಜ್ v/s ಎಂ.ನಾರಾಯಣಸ್ವಾಮಿ v/s ಸಿ. ಕೃಷ್ಣಮೂರ್ತಿ
ಕೆ.ಆರ್.ಪುರಂ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದ ಭೈರತಿ ಬಸವರಾಜ್ ಬಿಜೆಪಿಯ ಬಲಿಷ್ಠ ಕ್ಯಾಂಡಿಡೇಟ್. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ನ ಎಂ.ನಾರಾಯಣಸ್ವಾಮಿ ಮತ್ತು ಜೆಡಿಎಸ್ನ ಸಿ.ಕೃಷ್ಣಮೂರ್ತಿ ಕಣದಲ್ಲಿದ್ದಾರೆ. ಇವ್ರಿಬ್ಬರೂ ಭೈರತಿ ಬಸವರಾಜ್ಗೆ ಟಫ್ ಫೈಟ್ ನೀಡದಿದ್ರೂ ಹೋರಾಟ ಮಾಡೋ ಕೆಪಾಸಿಟಿ ಹೊಂದಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರ
ರಿಜ್ವಾನ್ ಅರ್ಷದ್ v/s ಎಂ.ಸರವಣ v/s ತನ್ವೀರ್ ಅಹ್ಮದ್
ಶಿವಾಜಿನಗರ ಕ್ಷೇತ್ರದಲ್ಲಿ ಮುಸ್ಲಿಂರ ಪ್ರಾಬಲ್ಯ ಜಾಸ್ತಿ ಇದೆ. ಹೀಗಾಗಿ, ಹಾಲಿ ಎಂಎಲ್ಸಿ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆಲ್ಲೋ ಚಾನ್ಸಸ್ ಹೆಚ್ಚಾಗಿದೆ.. ಅರ್ಷದ್ಗೆ ಬಿಜೆಪಿ ಅಭ್ಯರ್ಥಿ ಎಂ.ಸರವಣ ಪೈಪೋಟಿ ನೀಡೋ ಸಾಧ್ಯತೆ ಇದೆ. ಇದ್ರ ಮಧ್ಯೆ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ಕೂಡ ಪ್ರತಿರೋಧ ಒಡ್ಡೋ ಶಕ್ತಿ ಹೊಂದಿದ್ದಾರೆ.
Published On - 7:22 am, Mon, 9 December 19