
ಬೆಂಗಳೂರು: ರಾಜ್ಯದ ಜನರು ತಲೆಕೆಡಿಸಿಕೊಳ್ಳಬೇಡಿ.. ಭಾರತ್ ಬಂದ್ ಇದುವರೆಗೆ ಎಲ್ಲಿಯೂ ಯಶಸ್ವಿಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಇಂದು ವಿಧಾನಸೌಧದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಎಂದಿಗೂ ರೈತರ ವಿರುದ್ಧ ಹೋಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ನಮ್ಮ ರಾಜ್ಯ ಸರ್ಕಾರ ಸದಾ ರೈತ ಪರ ಸರ್ಕಾರಗಳು. ಇದೀಗ ರಾಜಕೀಯಕ್ಕಾಗಿ ಸರ್ಕಾರಗಳ ವಿರುದ್ಧ ಬಂದ್ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿಯಿಂದ ಜನಜಾಗೃತಿ
ಇನ್ನು ಟ್ವೀಟ್ ಮೂಲಕವೂ ಸಹ ಸಿಎಂ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು, ಬಂದ್ ವಿರೋಧಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳು, ಹಿಂದೆ ಅದರ ಪರವಾಗಿದ್ದವು. ಮಸೂದೆಯ ಕುರಿತು ರೈತರ ದಾರಿ ತಪ್ಪಿಸುತ್ತಿವೆ.. ಈ ಮೂಲಕ ರೈತರಿಗೆ ಕೃಷಿ ಕಾಯ್ದೆಗಳಿಂದ ಆಗುವ ಅನುಕೂಲತೆಗಳನ್ನು ತಪ್ಪಿಸುತ್ತಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ.. ಬಿಜೆಪಿಯಿಂದ ಜನಜಾಗೃತಿ ಮೂಡಿಸುತ್ತೇವೆ ಎಂದಿದ್ದಾರೆ.
ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಾಗಿದೆ. ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಪ್ರಕ್ರಿಯೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಖಚಿತವಾಗಿ ಮುಂದುವರಿಯುತ್ತದೆ. ಹಾಗೇ, ರೈತರಿಗೆ ಹೆಚ್ಚಿನ ಅವಕಾಶ, ಆಯ್ಕೆ, ಆದಾಯ ಹೆಚ್ಚಿಸಲು ಈ ಕಾಯ್ದೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
ರಾಜಕೀಯ ಅಸ್ತಿತ್ವಕ್ಕಾಗಿ ಕೇಂದ್ರ ಸರ್ಕಾರದ ಕೃಷಿ ಸುಧಾರಣೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ಹಿಂದೆ ಅದರ ಪರವಾಗಿದ್ದವು. ಈಗ ಮಸೂದೆ ವಿರುದ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರೈತರಿಗೆ ಆಗುವ ಅನುಕೂಲತೆಗಳನ್ನು ತಪ್ಪಿಸಲು ನಡೆಸುತ್ತಿರುವ ವಿರೋಧವನ್ನು ಒಪ್ಪಲಾಗದು. ಇದರ ವಿರುದ್ಧ ಬಿಜೆಪಿ ಜನಜಾಗೃತಿ ನಡೆಸಲಿದೆ. (2/2)
— B.S. Yediyurappa (@BSYBJP) December 8, 2020
Published On - 11:24 am, Tue, 8 December 20