BIEC ಕೋವಿಡ್‌ ಆಸ್ಪತ್ರೆ ಸಿದ್ಧತೆ ಜೋರಾಗಿದೆ: ಸಚಿವ ಸುರೇಶ್‌ಕುಮಾರ್‌

| Updated By:

Updated on: Jul 06, 2020 | 3:43 PM

ಬೆಂಗಳೂರು: ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಅಂತಾ ಕೊರೊನಾ ಸೋಂಕು ತನ್ನ ರುದ್ರತಾಂಡವ ಮುಂದುವರಿಸಿಯೇ ಇದೆ. ರಾಜ್ಯ ಸರ್ಕಾರ ಹೆಮ್ಮಾರಿಯನ್ನ ನಿಯಂತ್ರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಈಗ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಸ್ಥಳದಲ್ಲಿ ಬೃಹತ್‌ ಕೋವಿಡ್‌ ಕೇರ್‌ ಕೇಂದ್ರವನ್ನ ಆರಂಭಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ಹಿರಿಯ ಸಚಿವ ಸುರೇಶ್‌ಕುಮಾರ್‌ BIEC ಗೆ ಇವತ್ತು ಭೇಟಿ ನೀಡಿ ಕೋವಿಡ್‌ ಕೇರ್‌ ಸೆಂಟರ್‌ನ ತಯಾರಿ ಕುರಿತು ಪರಿಶೀಲನೆ ನಡೆಸಿದರು. ಕೋವಿಡ್‌ ಕೇರ್‌ […]

BIEC ಕೋವಿಡ್‌ ಆಸ್ಪತ್ರೆ ಸಿದ್ಧತೆ ಜೋರಾಗಿದೆ: ಸಚಿವ ಸುರೇಶ್‌ಕುಮಾರ್‌
Follow us on

ಬೆಂಗಳೂರು: ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಅಂತಾ ಕೊರೊನಾ ಸೋಂಕು ತನ್ನ ರುದ್ರತಾಂಡವ ಮುಂದುವರಿಸಿಯೇ ಇದೆ. ರಾಜ್ಯ ಸರ್ಕಾರ ಹೆಮ್ಮಾರಿಯನ್ನ ನಿಯಂತ್ರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಈಗ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಸ್ಥಳದಲ್ಲಿ ಬೃಹತ್‌ ಕೋವಿಡ್‌ ಕೇರ್‌ ಕೇಂದ್ರವನ್ನ ಆರಂಭಿಸಲು ಸಿದ್ಧತೆ ನಡೆಸಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಹಿರಿಯ ಸಚಿವ ಸುರೇಶ್‌ಕುಮಾರ್‌ BIEC ಗೆ ಇವತ್ತು ಭೇಟಿ ನೀಡಿ ಕೋವಿಡ್‌ ಕೇರ್‌ ಸೆಂಟರ್‌ನ ತಯಾರಿ ಕುರಿತು ಪರಿಶೀಲನೆ ನಡೆಸಿದರು. ಕೋವಿಡ್‌ ಕೇರ್‌ ಸೆಂಟರ್‌ನ ತಯಾರಿಯ ಪರಿಶೀಲನೆ ನಂತರ ತಮ್ಮ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಸ್ವತಃ ಸುರೇಶ್‌ಕುಮಾರ್‌ ಹೇಳಿಕೊಂಡಿದ್ದಾರೆ.

ಇವತ್ತು ನಾನು ತುಮಕೂರು ರಸ್ತೆಯಲ್ಲಿರುವ ಬಿಆಯ್‌ಇಸಿನಲ್ಲಿ ರೆಡಿಯಾಗುತ್ತಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಹೋಗಿದ್ದೆ. ಅಲ್ಲಿ ರೋಗ ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು10,100 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿ ಈ ಕಾರ್ಯದ ಜವಾಬ್ದಾರಿ ಹೊತ್ತಿರುವ ಕಾರ್ಯಪಡೆಯ ಅಧಿಕಾರಿಗಳಾದ ರಾಜೇಂದ್ರ ಕಟಾರಿಯ, ಸರ್ಫ್ರಾಜ್ ಖಾನ್ ಮತ್ತಿತರರನ್ನು ಭೇಟಿಯಾದೆ. ಕೆಲಸ ಬಹಳ ರಭಸದಿಂದ ಸಾಗಿದೆ. ಇದು ದೇಶದಲ್ಲಿಯೇ ಅತಿ ದೊಡ್ಡ ಕೋವಿಡ್‌ ಕೇರ್‌ ಆಸ್ಪತ್ರೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ.

Published On - 3:24 pm, Mon, 6 July 20