ಸ್ವಯಂಸೇವಕನ ಮೇಲೆ ಉಗುಳಿದ ಬಿಹಾರಿಗಳು, ಅಳಲು ತೋಡಿಕೊಂಡ ಯುವಕ

|

Updated on: Apr 28, 2020 | 11:05 AM

ಬೆಂಗಳೂರು: ಹೊಂಗಸಂದ್ರದಲ್ಲಿ ಆತಂಕ ಸೃಷ್ಟಿಸಿದ ಬಿಹಾರಿ ಮೂಲದ ಕೊರೊನಾ ಸೋಂಕಿತನ ಜತೆ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಬಿಹಾರಿಗಳನ್ನು ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಕ್ವಾರಂಟೈನ್​ನಲ್ಲಿದ್ದರೂ ಬಿಹಾರಿಗಳ ಅಟ್ಟಹಾಸ ನಿಂತಿಲ್ಲ. ಪ್ರತಿ ದಿನ ಒಂದಲ್ಲ ಒಂದು ಕಿರಿಕ್ ಮಾಡುತ್ತಿದ್ದಾರೆ. ತಮ್ಮನ್ನು ನೋಡಿಕೊಳ್ಳುತ್ತಿದ್ದ ಸ್ವಯಂಸೇವಕನ ಮೇಲೆ ಉಗುಳಿ ಪುಂಡಾಟ ಮೆರೆದಿದ್ದಾರೆ. ಕ್ವಾರಂಟೈನ್‌ನಲ್ಲಿರುವ ಬಿಹಾರಿಗಳು ಒಂದಿಲ್ಲೊಂದು ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಇವರನ್ನು ನೋಡಿಕೊಳ್ಳುವುದು ಬಿಬಿಎಂಪಿ ಸಿಬ್ಬಂದಿಗೆ ತಲೆ ನೋವಾಗಿದೆ. ಕ್ವಾರಂಟೈನ್‌ನಲ್ಲಿದ್ದವರಿಗೆ ಅಗತ್ಯವಸ್ತುಗಳನ್ನು ಬಿಬಿಎಂಪಿ ಪೂರೈಸುತ್ತಿದೆ. BBMP ಸಿಬ್ಬಂದಿಗೆ ಈ ವಿಚಾರದಲ್ಲಿ ಸ್ಥಳೀಯರು ಸಹಾಯ ಮಾಡುತ್ತಿದ್ದರು. […]

ಸ್ವಯಂಸೇವಕನ ಮೇಲೆ ಉಗುಳಿದ ಬಿಹಾರಿಗಳು, ಅಳಲು ತೋಡಿಕೊಂಡ ಯುವಕ
Follow us on

ಬೆಂಗಳೂರು: ಹೊಂಗಸಂದ್ರದಲ್ಲಿ ಆತಂಕ ಸೃಷ್ಟಿಸಿದ ಬಿಹಾರಿ ಮೂಲದ ಕೊರೊನಾ ಸೋಂಕಿತನ ಜತೆ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಬಿಹಾರಿಗಳನ್ನು ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಕ್ವಾರಂಟೈನ್​ನಲ್ಲಿದ್ದರೂ ಬಿಹಾರಿಗಳ ಅಟ್ಟಹಾಸ ನಿಂತಿಲ್ಲ. ಪ್ರತಿ ದಿನ ಒಂದಲ್ಲ ಒಂದು ಕಿರಿಕ್ ಮಾಡುತ್ತಿದ್ದಾರೆ. ತಮ್ಮನ್ನು ನೋಡಿಕೊಳ್ಳುತ್ತಿದ್ದ ಸ್ವಯಂಸೇವಕನ ಮೇಲೆ ಉಗುಳಿ ಪುಂಡಾಟ ಮೆರೆದಿದ್ದಾರೆ.

ಕ್ವಾರಂಟೈನ್‌ನಲ್ಲಿರುವ ಬಿಹಾರಿಗಳು ಒಂದಿಲ್ಲೊಂದು ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಇವರನ್ನು ನೋಡಿಕೊಳ್ಳುವುದು ಬಿಬಿಎಂಪಿ ಸಿಬ್ಬಂದಿಗೆ ತಲೆ ನೋವಾಗಿದೆ. ಕ್ವಾರಂಟೈನ್‌ನಲ್ಲಿದ್ದವರಿಗೆ ಅಗತ್ಯವಸ್ತುಗಳನ್ನು ಬಿಬಿಎಂಪಿ ಪೂರೈಸುತ್ತಿದೆ. BBMP ಸಿಬ್ಬಂದಿಗೆ ಈ ವಿಚಾರದಲ್ಲಿ ಸ್ಥಳೀಯರು ಸಹಾಯ ಮಾಡುತ್ತಿದ್ದರು.

ಹೋಟೆಲ್ ಕ್ವಾರಂಟೈನ್‌ನಲ್ಲಿದ್ದವರನ್ನ ನಿಯಂತ್ರಿಸುತ್ತಿದ್ದರು. ಕೊರೊನಾ ವಾರಿಯರ್ಸ್​ ಜತೆ ಕೆಲಸ ಮಾಡುತ್ತಿದ್ದ ಸ್ವಯಂಸೇವಕ ಯುವಕನ ಮೇಲೆ ಬಿಹಾರಿಗಳು ಉಗುಳಿದ್ದಾರೆ. ಊಟ ವೇಸ್ಟ್ ಮಾಡಬೇಡಿ, ಎಲ್ಲೆಂದರಲ್ಲಿ ಉಗುಳ ಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕನಿಗೆ ನೀನೇನ್ ನಮ್ಗೆ ಹೇಳೋದು, ನಮ್ ಹುಡುಗರನ್ನ ಕರೆಸ್ಲಾ? ಎಂದು ಆವಾಜ್ ಹಾಕಿದ್ದಾರೆ. ಯುವಕ ಟಿವಿ9 ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

Published On - 11:04 am, Tue, 28 April 20