ಬೆಂಗಳೂರು ಮೂಲದ ಡಾ. ಪಿಂಚಿ ಶ್ರೀನಿವಾಸನ್​ಗೂ ಅಮೆರಿಕಾದಲ್ಲಿ ವೆಹಿಕಲ್ ಪರೇಡ್ ಗೌರವ

ವಾಷಿಂಗ್ ಟನ್: ಹಂತಕ ಮಹಾಮಾರಿ ಕೊರೊನಾ ವೈರಸ್​ನಿಂದ ತತ್ತರಿಸಿರುವ ಅಮೆರಿಕಾಗೆ ಈಗ ವೈದ್ಯರು ಸಾಕ್ಷಾತ್ ದೇವರಾಗಿದ್ದಾರೆ. ಅದ್ರಲ್ಲೂ ಅಮೆರಿಕಾದಲ್ಲಿ ಕರ್ನಾಟಕದ ವೈದ್ಯರು ಕೂಡ ಕೊರೊನಾ ವಿರುದ್ಧ ಹೋರಾಡ್ತಿದ್ದಾರೆ. ಹೀಗಾಗಿ ವೈದ್ಯರ ಮನೆ ಮುಂದೆ ಸ್ಥಳೀಯ ಜನರು ವೆಹಿಕಲ್ ಪರೇಡ್ ನಡೆಸಿ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಮೈಸೂರು ಮೂಲದ ವೈದ್ಯೆ ಉಮಾರಾಣಿ ಅವರಿಗೆ ವೆಹಿಕಲ್ ಪರೇಡ್ ನಡೆಸಿ ಗೌರವ ನೀಡಿದ್ದರು. ಈಗ ಅದೇ ರೀತಿಯ ಮತ್ತೊಬ್ಬ ಕನ್ನಡಿಗರಿಗೆ ಗೌರವ ಸಿಕ್ಕಿದೆ. ನ್ಯೂಯಾರ್ಕ್​ನ ವೆಲ್ ಕಾರ್ನೆಲ್ ಮೆಡಿಸಿನ್ […]

ಬೆಂಗಳೂರು ಮೂಲದ ಡಾ. ಪಿಂಚಿ ಶ್ರೀನಿವಾಸನ್​ಗೂ ಅಮೆರಿಕಾದಲ್ಲಿ ವೆಹಿಕಲ್ ಪರೇಡ್ ಗೌರವ
ಸಾಧು ಶ್ರೀನಾಥ್​

Updated on: Apr 28, 2020 | 9:32 AM

ವಾಷಿಂಗ್ ಟನ್: ಹಂತಕ ಮಹಾಮಾರಿ ಕೊರೊನಾ ವೈರಸ್​ನಿಂದ ತತ್ತರಿಸಿರುವ ಅಮೆರಿಕಾಗೆ ಈಗ ವೈದ್ಯರು ಸಾಕ್ಷಾತ್ ದೇವರಾಗಿದ್ದಾರೆ. ಅದ್ರಲ್ಲೂ ಅಮೆರಿಕಾದಲ್ಲಿ ಕರ್ನಾಟಕದ ವೈದ್ಯರು ಕೂಡ ಕೊರೊನಾ ವಿರುದ್ಧ ಹೋರಾಡ್ತಿದ್ದಾರೆ. ಹೀಗಾಗಿ ವೈದ್ಯರ ಮನೆ ಮುಂದೆ ಸ್ಥಳೀಯ ಜನರು ವೆಹಿಕಲ್ ಪರೇಡ್ ನಡೆಸಿ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇತ್ತೀಚೆಗೆ ಮೈಸೂರು ಮೂಲದ ವೈದ್ಯೆ ಉಮಾರಾಣಿ ಅವರಿಗೆ ವೆಹಿಕಲ್ ಪರೇಡ್ ನಡೆಸಿ ಗೌರವ ನೀಡಿದ್ದರು. ಈಗ ಅದೇ ರೀತಿಯ ಮತ್ತೊಬ್ಬ ಕನ್ನಡಿಗರಿಗೆ ಗೌರವ ಸಿಕ್ಕಿದೆ. ನ್ಯೂಯಾರ್ಕ್​ನ ವೆಲ್ ಕಾರ್ನೆಲ್ ಮೆಡಿಸಿನ್ ಆಸ್ಪತ್ರೆಯಲ್ಲಿ ಪ್ರೊಫೆಸರ್ ಹಾಗೂ ನ್ಯೂಯಾರ್ಕ್ ನ ಮೌಂಟ್ ಸಿನಾಯಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡ್ತಿರುವ ಡಾಕ್ಟರ್ ಪಿಂಚಿ ಶ್ರೀನಿವಾಸನ್ ಅವರಿಗೂ ಕೂಡ ವೆಹಿಕಲ್ ಪರೇಡ್ ನಡೆಸಿ ಗೌರವ ಸಲ್ಲಿಸಿದ್ದಾರೆ.

ಬೆಂಗಳೂರಿನವರಾದ ಡಾಕ್ಟರ್ ಪಿಂಚಿ ಶ್ರೀನಿವಾಸನ್ ಗುಲ್ಬರ್ಗದ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪದವಿ ಪಡೆದಿದ್ದಾರೆ.

Published On - 7:53 am, Tue, 28 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us