ಕೊಪ್ಪಳ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದಲ್ಲೂ ಸಹ ಪೊಲೀಸರ ಗಂಡಿನ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಯಾವುದೇ ವಿಘ್ನ ಬಾರದಂತೆ ಸಂಸದ ಸಂಗಣ್ಣ ಕರಡಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ.
ಶೃಂಗೇರಿ ಮಠದ ಅರ್ಚಕರಿಂದ ತಾಲೂಕಿನ ಹುಲಗೆಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ ನೆರವೇರಿಸಲಾಗುತ್ತಿದೆ. ಚಂಡಿಕಾಯಾಗದಲ್ಲಿ ಸಂಸದ ಕರಡಿ ಸಂಗಣ್ಣ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಪ್ರತಿ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾದಾಗಲೂ ಚಂಡಿಕಾಯಾಗ ನೆರವೇರಿಸುತ್ತಿದ್ದರು. ಹುಲಗೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಗಣ್ಣ ಕರಡಿ ಚಂಡಿಕಾಯಾಗ ನೆರವೇರಿಸಿದ್ದಾರೆ.