50 ಸಾವಿರ ರೂ. ನೇರ ಸಾಲದ ಆಮಿಷ; ಸಾಲಮನ್ನಾದ ಭರವಸೆ: ಶಿರಾ ಗೆಲ್ಲಲು BJP ಕಾರ್ಯಕರ್ತರ ಪ್ಲಾನ್​?

|

Updated on: Oct 04, 2020 | 1:30 PM

ತುಮಕೂರು: ನವೆಂಬರ್‌ 3ರಂದು ಶಿರಾ ಕ್ಷೇತ್ರದ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಕಾರ್ಯಕರ್ತರ ಹಲವು ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮೀಣ ಭಾಗದಲ್ಲಿರುವ ಜನರಿಗೆ ನೇರ ಸಾಲ ಕೊಡಿಸುವುದಾಗಿ ಬಿಜೆಪಿ ಕಾರ್ಯಕರ್ತರು ಆಮಿಷ ಒಡ್ಡುತ್ತಿದ್ದಾರೆ ಅನ್ನೋ ಆರೋಪವನ್ನು ರೈತನೊಬ್ಬ ಮಾಡಿದ್ದಾನೆ. 50 ಸಾವಿರ ರೂಪಾಯಿವರೆಗೆ ಸಾಲ ಕೊಡಿಸೋದಾಗಿ ಬಿಜೆಪಿ ಕಾರ್ಯಕರ್ತರು ಭರವಸೆ ಕೊಡುತ್ತಿದ್ದಾರೆ ಎಂದು ರೈತ ವಿಡಿಯೋದಲ್ಲಿ ಹೇಳಿದ್ದಾರೆ. ಇದೀಗ, ರೈತನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ನಿಟ್ಟಿನಲ್ಲಿ […]

50 ಸಾವಿರ ರೂ. ನೇರ ಸಾಲದ ಆಮಿಷ; ಸಾಲಮನ್ನಾದ ಭರವಸೆ: ಶಿರಾ ಗೆಲ್ಲಲು BJP ಕಾರ್ಯಕರ್ತರ ಪ್ಲಾನ್​?
Follow us on

ತುಮಕೂರು: ನವೆಂಬರ್‌ 3ರಂದು ಶಿರಾ ಕ್ಷೇತ್ರದ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಕಾರ್ಯಕರ್ತರ ಹಲವು ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗ್ರಾಮೀಣ ಭಾಗದಲ್ಲಿರುವ ಜನರಿಗೆ ನೇರ ಸಾಲ ಕೊಡಿಸುವುದಾಗಿ ಬಿಜೆಪಿ ಕಾರ್ಯಕರ್ತರು ಆಮಿಷ ಒಡ್ಡುತ್ತಿದ್ದಾರೆ ಅನ್ನೋ ಆರೋಪವನ್ನು ರೈತನೊಬ್ಬ ಮಾಡಿದ್ದಾನೆ. 50 ಸಾವಿರ ರೂಪಾಯಿವರೆಗೆ ಸಾಲ ಕೊಡಿಸೋದಾಗಿ ಬಿಜೆಪಿ ಕಾರ್ಯಕರ್ತರು ಭರವಸೆ ಕೊಡುತ್ತಿದ್ದಾರೆ ಎಂದು ರೈತ ವಿಡಿಯೋದಲ್ಲಿ ಹೇಳಿದ್ದಾರೆ. ಇದೀಗ, ರೈತನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ಈ ನಿಟ್ಟಿನಲ್ಲಿ ಜನರಿಂದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌ ಸೇರಿ ಕೆಲ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನ ಬಿಜೆಪಿ ಕಾರ್ಯಕರ್ತರು ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಜೊತೆಗೆ, ಸ್ತ್ರೀಶಕ್ತಿ ಸಂಘ, ಹಿಂದುಳಿದ ವರ್ಗ ಮತ್ತು ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದು ಜೊತೆಗೆ ಸಾಲಮನ್ನಾ ಮಾಡಿಸುವ ಭರವಸೆ ಸಹ ಕಾರ್ಯಕರ್ತರು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.