ಕಾನೂನಿಗೆ ಹೆದರೋದು ಯಾಕೆ?.. ನೀವು ಧೈರ್ಯವಂತ ಬಂಡೆ -ಡಿಕೆಶಿಗೆ ಕಟೀಲ್​ ವ್ಯಂಗ್ಯ

ಬೆಳಗಾವಿ: ನೀವು ಧೈರ್ಯವಂತ ಬಂಡೆ. ಎಲ್ಲವನ್ನೂ ಎದುರಿಸೋರು CBIನ ಎದುರಿಸೋಕೆ ಆಗಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಆರೋಪದ ವಿಚಾರವಾಗಿ ಸಿಬಿಐ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ಸ್ಥಾಪಿತವಾದ ಸಂಸ್ಥೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನರ ಮೇಲೆ ಸಿಬಿಐ ರೇಡ್ ಆಗಿದೆ. ಲಾಲೂ ಪ್ರಸಾದ್ ಯಾದವ್​, ಜಯಲಲಿತಾರಂಥ ಘಟಾನುಘಟಿ ನಾಯಕರ ಮನೆ […]

ಕಾನೂನಿಗೆ ಹೆದರೋದು ಯಾಕೆ?.. ನೀವು ಧೈರ್ಯವಂತ ಬಂಡೆ -ಡಿಕೆಶಿಗೆ ಕಟೀಲ್​ ವ್ಯಂಗ್ಯ

Updated on: Oct 10, 2020 | 6:45 PM

ಬೆಳಗಾವಿ: ನೀವು ಧೈರ್ಯವಂತ ಬಂಡೆ. ಎಲ್ಲವನ್ನೂ ಎದುರಿಸೋರು CBIನ ಎದುರಿಸೋಕೆ ಆಗಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಆರೋಪದ ವಿಚಾರವಾಗಿ ಸಿಬಿಐ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ಸ್ಥಾಪಿತವಾದ ಸಂಸ್ಥೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನರ ಮೇಲೆ ಸಿಬಿಐ ರೇಡ್ ಆಗಿದೆ. ಲಾಲೂ ಪ್ರಸಾದ್ ಯಾದವ್​, ಜಯಲಲಿತಾರಂಥ ಘಟಾನುಘಟಿ ನಾಯಕರ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ಕಾಂಗ್ರೆಸ್ ಅದನ್ನೆಲ್ಲಾ ರಾಜಕೀಯ ದ್ವೇಷಕ್ಕಾಗಿಯೇ ಮಾಡಿಸಿತ್ತಾ? ಕಾಂಗ್ರೆಸ್ ಸಿಬಿಐನ ದಾಳವಾಗಿ ಮಾಡಿಕೊಂಡು ಆಟವಾಡಿಸಿತ್ತಾ? ಎಂದು ಕಟೀಲ್​ ಪ್ರಶ್ನಿಸಿದ್ದಾರೆ.

‘ಜೈಲಿಂದ ಬರುವಾಗ ಮೆರವಣಿಗೆ, ಜೈಲಿಗೆ ಹೋಗುವಾಗ ಮೆರವಣಿಗೆ’
ಡಿ.ಕೆ ಶಿವಕುಮಾರ್​ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ಐಟಿ ತನಿಖೆಯಾಗಿದೆ. ನಿಮಗೇಕೆ ಭಯ ಇರಬೇಕು? ಯಾಕೆ ಜನರನ್ನು ಸೇರಿಸಬೇಕು. ಜೈಲಿಂದ ಬರುವಾಗ ಮೆರವಣಿಗೆ, ಜೈಲಿಗೆ ಹೋಗುವಾಗ ಮೆರವಣಿಗೆ. ನೀವು ಸರಿ ಇದ್ರೆ ಕಾನೂನಾತ್ಮಕ ಹೋರಾಟ ಮಾಡಿ ಪರಿಶುದ್ಧರಾಗಿ ಹೊರ ಬನ್ನಿ ಎಂದು ಹೇಳಿದರು.

ಕಾನೂನಿಗೆ ಹೆದರೋದು ಏಕೆ? ನೀವು ಧೈರ್ಯವಂತ ಬಂಡೆ. ಎಲ್ಲರನ್ನೂ ಎದುರಿಸೋರು ಸಿಬಿಐ ಸಂಸ್ಥೆಯನ್ನು ಎದುರಿಸೋಕೆ ಆಗಲ್ವಾ? ಎಂದು ಡಿಕೆಶಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಪ್ರಶ್ನೆಮಾಡಿದ್ದಾರೆ.