Budget 2021| ಇಂದು 11 ಗಂಟೆಗೆ ಮಂಡನೆ; ಕಾದು ಕುಳಿತಿದೆ ದೇಶ

|

Updated on: Feb 01, 2021 | 8:42 AM

ಗ್ರಾಮಾಂತರ ಪ್ರದೇಶಗಳಲ್ಲಿ ಹೈಸ್ಪೀಡ್ ಇಂಟರ್​ನೆಟ್ ಅನಿವಾರ್ಯವಾಗಿದ್ದು, ಸಂವಹನ ಕ್ಷೇತ್ರದ ಸುಧಾರಣೆಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತಿಳಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ.

Budget 2021| ಇಂದು 11 ಗಂಟೆಗೆ ಮಂಡನೆ; ಕಾದು ಕುಳಿತಿದೆ ದೇಶ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us on

ಇಂದು ಬೆಳಿಗ್ಗೆ 11 ಗಂಟೆಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಡಿಜಿಟಲ್​ ರೂಪದ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ದೇಶದ ಗಮನವೆಲ್ಲ ಬಜೆಟ್​ನತ್ತ ಹೊರಳಿದ್ದು, ಯಾವ ವಲಯಕ್ಕೆ ಏನು ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಬಜೆಟ್ ಆಗಲಿದೆಯಾ ಆರ್ಥಿಕ ಲಸಿಕೆ?

ಕೊರೊನಾ ಸೋಂಕಿನಿಂದ ಲಕ್ಷಾಂತರ ಜೀವಗಳು ಬಲಿಯಾಗಿವೆ. ಕೊರೊನಾ ಲಸಿಕೆ ಕುರಿತ ಘೋಷಣೆ ಆಗಲಿದೆಯಾ ಎಂಬ ಕುತೂಹಲವೂ ಇದ್ದೇ. ತೆರಿಗೆ ಹೊರೆ ಮತ್ತಷ್ಟು ಹೆಚ್ಚಿಸುತ್ತಾ, ಹೊರೆಯನ್ನ ಇಳಿಸುತ್ತಾ ಎಂಬ ನಿರೀಕ್ಷೆಗಳು ಕೇಂದ್ರ ಬಜೆಟ್​ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಿಸಿವೆ. ದೇಶದಲ್ಲಿ 3 ಕೋಟಿ ಪ್ರಾಮಾಣಿಕ ತೆರಿಗೆದಾರರಿದ್ದು, ಕೇಂದ್ರ ತೆರಿಗೆದಾರರಿಂದ ಗರಿಷ್ಟ ಆದಾಯ ಪಡೆಯುವ ಯೋಜನೆ ರೂಪಿಸುವ ಕುರಿತು ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ : Budget 2021 | ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಆಗಬೇಕಿದೆ ಮೇಜರ್ ಸರ್ಜರಿ

ಅನ್ನದಾತರ ಕುರಿತು ಹಣಕಾಸು ಸಚಿವರ ಲಕ್ಷ್ಯ ಹರಿಯುವ ಚಿತ್ತ ವ್ಯಕ್ತವಾಗಿದೆ. 2022ರೊಳಗೆ ರೈತರ ಆದಾಯ ದುಪ್ಪಟ್ಟುಗೊಳಿಸುವ ಘೋಷಣೆ ಮಾಡಲಾಗಿತ್ತು. ಬ್ಯಾಂಕ್​ಗಳಿಗೆ ಕೃಷಿ ಸಾಲವನ್ನು ₹19 ಲಕ್ಷ ಕೋಟಿಗೆ ಹೆಚ್ಚಳ ಸಾಧ್ಯತೆಯಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ಮಾಡುವ ನಿರೀಕ್ಷೆ

ಈ ಬಾರಿ ಕೊರೊನಾದಿಂದ ಸಂಪೂರ್ಣವಾಗಿ ಶಾಲೆ ತೆರೆದಿಲ್ಲವಾದ್ದರಿಂದ ಲಕ್ಷಾಂತರ ಪೋಷಕರ ಬಳಿ ಸಂಪೂರ್ಣ ಮಕ್ಕಳ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ, ತೆರಿಗೆ ಕಡಿತ, ಅನುದಾನದ ನಿರೀಕ್ಷೆಯಲ್ಲಿ ಶೈಕ್ಷಣಿಕ ಕ್ಷೇತ್ರವಿದೆ. ಶಾಲಾ-ಕಾಲೇಜು ಮುಚ್ಚಿದ್ದರಿಂದ ಬೋಧಕ ಸಿಬ್ಬಂದಿಗೆ ಕಷ್ಟವಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ವಿನಾಯಿತಿ ನೀಡುವ ನಿರೀಕ್ಷೆಯಿದೆ.

ಶೈಕ್ಷಣಿಕ ವಲಯದಲ್ಲಿ ತಾಂತ್ರಿಕವಾಗಿ ಹೆಚ್ಚು ಅಭಿವೃದ್ಧಿಗಾಗಿ ನಿರೀಕ್ಷೆ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೈಸ್ಪೀಡ್ ಇಂಟರ್​ನೆಟ್ ಅನಿವಾರ್ಯವಾಗಿದ್ದು, ಸಂವಹನ ಕ್ಷೇತ್ರದ ಸುಧಾರಣೆಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತಿಳಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ.

Budget 2021 LIVE: ಇಂದು ಕೇಂದ್ರ ಬಜೆಟ್​.. ಸೊರಗಿರುವ ಆರ್ಥಿಕತೆಗೆ ನಿರ್ಮಲಾ ನೀಡಲಿದ್ದಾರಾ ಮದ್ದು?