ಚಿನ್ನ ಮತ್ತು ಬೆಳ್ಳಿಯ ಮೇಲಿನ ಸೀಮಾ ಸುಂಕವನ್ನು (Customs Duty) ಕಡಿಮೆ ಮಾಡುವುದಾಗಿ ಇಂದಿನ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸದ್ಯ ಚಿನ್ನ ಹಾಗೂ ಬೆಳ್ಳಿಯ ಮೇಲೆ ಶೇ 12.5ರಷ್ಟು ಆಮದು ಸುಂಕ ವಿಧಿಸಲಾಗುತ್ತಿದ್ದು, ಇದನ್ನು ಶೇ 7.5ಕ್ಕೆ ಇಳಿಕೆ ಮಾಡಲು ನಿರ್ಧರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಚಿನ್ನ-ಬೆಳ್ಳಿಯ ಮೇಲಿನ ಆಮದು ಸುಂಕ 2019ರ ಜುಲೈವರೆಗೆ ಶೇ 10ರಷ್ಟಿತ್ತು. ಜುಲೈನಲ್ಲಿ ಅದನ್ನು ಶೇ 12.5ಕ್ಕೆ ಏರಿಸಲಾಗಿತ್ತು. ಆದಗಿನಿಂದಲೂ ಕಸ್ಟಮ್ಸ್ ಸುಂಕ ಕಡಿಮೆ ಮಾಡುವಂತೆ ಚಿನ್ನದ ಉದ್ಯಮಿಗಳು ಒತ್ತಾಯಿಸುತ್ತಲೇ ಇದ್ದರು. ಆದರೆ ಸದ್ಯಕ್ಕಂತೂ ಸೀಮಾ ಶುಲ್ಕ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈಗ ಚಿನ್ನದ ಬೆಲೆ ಸತತವಾಗಿ ಏರುತ್ತಿರುವ ಬೆನ್ನಲ್ಲೇ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಬಜೆಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸುತ್ತಿದ್ದಂತೆ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) ಚಿನ್ನದ ಬೆಲೆ ಶೇ 3 ಅಂದರೆ 10 ಗ್ರಾಂಗೆ ಸುಮಾರು ₹ 1500ಕ್ಕೆ ಕುಸಿಯಿತು. ಪ್ರಸ್ತುತ ₹ 47,918ಕ್ಕೆ ವಹಿವಾಟು ನಡೆಯುತ್ತಿದೆ.
Gold Silver Price ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಕಡಿತ.. ನಗರದಲ್ಲಿ ಚಿನ್ನದ ದರ ಎಷ್ಟಿದೆ ಇಂದು?
Published On - 3:25 pm, Mon, 1 February 21