ಮುಂದಿನ ವಾರ ಶತಕ ಬಾರಿಸಲಿರುವ ಪೆಟ್ರೋಲ್​ ದರ.. ‘ನಿರ್ಮಲ ಬಜೆಟ್’​ ನೋಡಿ ದೇವರೇ ದಿಕ್ಕು ಅಂತಿದ್ದಾನೆ ಜನಸಾಮಾನ್ಯ!

ನಿರ್ಮಲಾ ಸೀತಾರಾಮನ್​ ಅವರು ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಜಾಣ ನಡೆಯಿಟ್ಟಿದ್ದಾರೆ ಎಂದು ಆಡಳಿತಾರೂಢ ಮಂದಿ ಹೇಳುತ್ತಿದ್ದಾರೆ. ಆದ್ರೆ ನೌಕರ ವರ್ಗ ಹೇಳುತ್ತಿರುವುದೇ ಬೇರೆ. ಏಕೆಂದ್ರೆ ಅವರ ನಿರೀಕ್ಷೆ ಬೇರೆಯದ್ದೇ ಆಗಿತ್ತು.

ಮುಂದಿನ ವಾರ ಶತಕ ಬಾರಿಸಲಿರುವ ಪೆಟ್ರೋಲ್​ ದರ.. ‘ನಿರ್ಮಲ ಬಜೆಟ್’​ ನೋಡಿ ದೇವರೇ ದಿಕ್ಕು ಅಂತಿದ್ದಾನೆ ಜನಸಾಮಾನ್ಯ!
ಬಜೆಟ್ ದಾಖಲೆ ಕೈಲಿ ಹಿಡಿದಿರುವ ನಿರ್ಮಲಾ ಸೀತಾರಾಮನ್
sadhu srinath

|

Feb 01, 2021 | 6:18 PM

ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್​ ಇದೀಗತಾನೆ ‘ಟ್ಯಾಬ್​ ಬಜೆಟ್​’ ಮಂಡಿಸಿದ್ದಾರೆ. ಅಂದರೆ ಇದುವರೆಗೆ ಕಾಗದ ರೂಪದ ಬಜೆಟ್ ಅನ್ನು ಕೆಂಪು ಬ್ರೀಫ್​ ಕೇಸ್​ನಲ್ಲಿ ಸುತ್ತಿಕೊಂಡು ಬಂದು ಮಂಡಿಸುತ್ತಿದ್ದರು. ಈ ಬಾರಿ ಕೊರೊನಾ ಸೋಂಕನ್ನು ದೂರವಿಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್​ ರೂಪದಲ್ಲಿ ಟ್ಯಾಬ್​ನಲ್ಲಿ ಇದ್ದುದ್ದನ್ನು ವಾಚಿಸಿದ್ದಾರೆ.

ಟ್ಯಾಬ್​ನಲ್ಲಿದ್ದ ಬಜೆಟ್​ ಅನ್ನು ಜನ ನಾನಾ ರೀತಿ ವ್ಯಾಖ್ಯಾನಿಸತೊಡಗಿದ್ದಾರೆ. ಮೊದಲಿಗೆ ಇದನ್ನು ಅಕ್ಷರಶಃ Tab budget ಅಂದಿದ್ದಾರೆ. ಅಂದ್ರೆ Tab budget ನಿಜವಾದ ‘ಅರ್ಥ’ T– Tamilnadu Assembly Election, A– Assam Assembly Election ಮತ್ತು B– Bengal Assembly Election 2021 ಎಂದು ಲೇವಡಿ ಮಾಡಿದ್ದಾರೆ.

ಇನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಜಾಣ ನಡೆಯಿಟ್ಟಿದ್ದಾರೆ ಎಂದು ಆಡಳಿತಾರೂಢ ಮಂದಿ ಹೇಳುತ್ತಿದ್ದಾರೆ. ಆದ್ರೆ ನೌಕರ ವರ್ಗ ಹೇಳುತ್ತಿರುವುದೇ ಬೇರೆ. ಏಕೆಂದ್ರೆ ಅವರ ನಿರೀಕ್ಷೆ ಬೇರೆಯದ್ದೇ ಆಗಿತ್ತು.

ಕೊರೊನಾದಿಂದ ಇರುವ ಉದ್ಯೋಗಕ್ಕೇ ಸಂಚಕಾರ ಬಂದಿದೆ. ಉದ್ಯೋಗ ಉಳಿಸಿಕೊಂಡರೂ ಸಂಬಳ ಹೆಚ್ಚಳಗಳು ಆಗುವುದಿರಲಿ ಇರುವ ಸಂಬಳವನ್ನೇ ಕಡಿತ ಮಾಡುವ ಪ್ರವೃತ್ತಿ ದೇಶಾದ್ಯಂತ ಬಹುತೇಕ ಎಲ್ಲ ಉದ್ಯಮಗಳಲ್ಲೂ ಕಂಡುಬಂದಿದೆ. ಪರಿಸ್ಥಿತಿ ಹೀಗಿರುವಾಗ ಟ್ಯಾಕ್ಸ್​ ಸ್ಲ್ಯಾಬ್​ ಅನ್ನು ಕುಗ್ಗಿಸಿ, ತೆರಿಗೆ ಪ್ರಮಾಣದಲ್ಲಿ ಕಡಿತ ಮಾಡುತ್ತಾರೆ ಎಂದು ಸಂಬಳದಾರರು ನಿರೀಕ್ಷಿಸುತ್ತಿದ್ದರು. ಆದ್ರೆ ತೆರಿಗೆ ಬದಲಾಗದಿದ್ದರೂ ಕೊರೊನಾ ಮಾರಿಯಿಂದಾಗಿ ತೆರಿಗೆ ಬರೆ ಜೋರಾಗಿಯೇ ಬಿದ್ದಿದೆ.

ಇನ್ನು, ಇದಕ್ಕಿಂತಲೂ ಭೀಕರ ಲೆಕ್ಕಾಚಾರವೆಂದರೆ ಈ ಬಾರಿ ಸೆಸ್​ ಗಳ ಆರ್ಭಟ ಜೋರಾಗಿರುವುದು Cess. ಹೌದು ಅರ್ಥ ಸಚಿವೆ ನಿರ್ಮಲಾ ಅವರು ಮಂಡಿಸಿರುವ ಬಜೆಟ್​ನಲ್ಲಿ ಸೆಸ್​ ಲೆಕ್ಕ ನುಸುಳಿದೆ. ಬಹುತೇಕ ಸೇವೆ/ಸರಕುಗಳ ಮೇಲೆ ಅದರ ಪರಿಣಾಮ ನೇರವಾಗಿ ಬಿದ್ದಿದೆ. ಪ್ರಧಾನವಾಗಿ ಅದು ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಗಳ ಮೇಲೆ ಸವಾರಿ ಮಾಡಿರುವುದು ಜನಸಾಮಾನ್ಯನಿಗೆ ಅರಗಿಸಿಕೊಳ್ಳುವುದು ಕಷ್ಟ ಕಷ್ಟವಾಗಿದೆ. ಈ ಮಧ್ಯೆ, ಇಂದಿನಿಂದ ಪೆಟ್ರೋಲ್​ ಬೆಲೆ ಸಾಮಾನ್ಯ ದರ ಏರಿಕೆಯಲ್ಲಿ 95 ರೂಪಾಯಿಗೆ ತಲುಪಲಿದ್ದು, ಮುಂದಿನ ವಾರದ ವೇಳೆಗೆ ಪೆಟ್ರೋಲ್​ ಬೆಲೆ ಶತಕದ ಗಡಿ ದಾಟಿದರೆ ಜನಸಾಮಾನ್ಯನಿಗೆ ದೇವರೇ ದಿಕ್ಕು! ಅನ್ನೋ ಪರಿಸ್ಥಿತಿ ನಿರ್ಮಾಣವಾಗಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada