Budget 2021 | ವಿದ್ಯುತ್ ಕ್ಷೇತ್ರದ ಸುಧಾರಣೆಗೆ ₹ 3.60 ಲಕ್ಷ ಕೋಟಿ ಮೀಸಲು
ದೇಶಾದ್ಯಂತ ಇರುವ ವಿದ್ಯುತ್ ವಿತರಣಾ ಕಂಪನಿಗಳು, ಅವರು ಸರ್ಕಾರಿಯಾಗಿರಲಿ, ಖಾಸಗಿಯಾಗಿದ್ದಿರಲಿ ಏಕಸ್ವಾಮ್ಯವಾಗಿರುತ್ತವೆ. ಗ್ರಾಹಕರಿಗೆ ಆಯ್ಕೆಯ ಅವಕಾಶ ಕೊಡಲೇಬೇಕಾಗುತ್ತದೆ ಎಂದು ಹಣಕಾಸು ಸಚಿವೆ ಅಭಿಪ್ರಾಯಪಟ್ಟರು.

ನವೀಕರಣ, ಸುಧಾರಣಾ ಆಧಾರಿತ ಹಾಗೂ ಫಲಿತಾಂಶ ಸಂಬಂಧಿ ವಿದ್ಯುತ್ ಪೂರೈಕೆ ವಲಯವನ್ನು ಪ್ರಾರಂಭಿಸುವ ಸಲುವಾಗಿ ಬಜೆಟ್ನಲ್ಲಿ ಸುಮಾರು ₹ 3.60 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ವಿದ್ಯುತ್ ವಿತರಣಾ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇನ್ನು ಮುಂದೆ ಗ್ರಾಹಕರಿಗೆ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ.
ಸದ್ಯ ದೇಶದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳ (ಡಿಸ್ಕಾಂ) ಕಾರ್ಯಕ್ಷಮತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಸುಧಾರಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಈ ಯೋಜನೆ, ಡಿಸ್ಕಾಂನ ಆರ್ಥಿಕ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಅಷ್ಟೇ ಅಲ್ಲ, ಪ್ರೀಪೇಯ್ಡ್ ಸ್ಮಾರ್ಟ್ ಮೀಟರಿಂಗ್, ಪ್ರತ್ಯೇಕ ಫೀಡರ್ ಮತ್ತು ಸಿಸ್ಟಂ ಅಪ್ಗ್ರೇಡೇಶನ್ಗೂ ನೆರವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದೇಶಾದ್ಯಂತ ಇರುವ ವಿದ್ಯುತ್ ವಿತರಣಾ ಕಂಪನಿಗಳು, ಸರ್ಕಾರಿಯಾಗಿರಲಿ, ಖಾಸಗಿಯಾಗಿದ್ದಿರಲಿ ಅವರ ಏಕಸ್ವಾಮ್ಯ ಇರುತ್ತದೆ. ಗ್ರಾಹಕರಿಗೆ ಆಯ್ಕೆಯ ಅವಕಾಶ ಕೊಡಲೇಬೇಕಾಗುತ್ತದೆ ಎಂದು ಹಣಕಾಸು ಸಚಿವೆ ಅಭಿಪ್ರಾಯ ಪಟ್ಟರು. ಕಳೆದ ಆರು ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.
Budget 2021 LIVE: ಬಜೆಟ್ ಭಾಷಣ ಮುಕ್ತಾಯ.. ಬಜೆಟ್ಗೆ ಅನುಮೋದನೆ ಸೂಚಿಸಿದ ಲೋಕಸಭೆ