ಕಾರು ಹರಿದು ನಾಲ್ವರು ಮೃತಪಟ್ಟ ಪ್ರಕರಣ: ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿ ಬಾರ್ ಕೃಷ್ಣಪ್ಪ ಖುಲಾಸೆ

| Updated By: ganapathi bhat

Updated on: Apr 06, 2022 | 9:07 PM

2013ರಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಲ್ಯಾಂಡ್ ರೋವರ್ ಕಾರು ಹರಿದು ನಾಲ್ವರು ತೀರಿಕೊಂಡಿದ್ದರು.

ಕಾರು ಹರಿದು ನಾಲ್ವರು ಮೃತಪಟ್ಟ ಪ್ರಕರಣ: ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿ ಬಾರ್ ಕೃಷ್ಣಪ್ಪ ಖುಲಾಸೆ
2013ರ ಕಾರು ಅಪಘಾತ
Follow us on

ಬೆಂಗಳೂರು: ಕಾರು ಹರಿದು ನಾಲ್ವರು ಮೃತಪಟ್ಟ ಪ್ರಕರಣದ ಆರೋಪಿ ಕೃಷ್ಣಪ್ಪ ಖುಲಾಸೆಯಾಗಿದ್ದಾರೆ. ಕೃಷ್ಣಪ್ಪ ಅಲಿಯಾಸ್‌ ಬಾರ್ ಕೃಷ್ಣಪ್ಪರನ್ನು ಖುಲಾಸೆಗೊಳಿಸಿ, ಬೆಂಗಳೂರು ಗ್ರಾಮಾಂತರ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. 2013ರಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಲ್ಯಾಂಡ್ ರೋವರ್ ಕಾರು ಹರಿದು ನಾಲ್ವರು ತೀರಿಕೊಂಡಿದ್ದರು.

2013ರ ಜುಲೈ 15ರಂದು, ಪರಪ್ಪನ ಅಗ್ರಹಾರ ಸಮೀಪದ ಹೊಸರಸ್ತೆಯಲ್ಲಿ‌ ಅಪಘಾತ ಸಂಭವಿಸಿತ್ತು. ಐಪಿಸಿ ಸೆಕ್ಷನ್‌ 304a, 337, 338ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ, ಸಾಕ್ಷ್ಯಾಧಾರ ಕೊರತೆಯ ಕಾರಣದಿಂದ ಆರೋಪಿ ಕೃಷ್ಣಪ್ಪ ಖುಲಾಸೆಯಾಗಿದ್ದಾರೆ.

ಅಂಕೋಲ ಸಮೀಪ ರಸ್ತೆ ಅಪಘಾತ: ಕೇಂದ್ರ ಸಚಿವ ಶ್ರೀಪಾದ್​ ನಾಯಕ್​ಗೆ ಗಂಭೀರ ಗಾಯ, ಪತ್ನಿ ಸಾವು

 

Published On - 6:34 pm, Tue, 12 January 21