ಕಾರಿನಲ್ಲಿ ನಕಲಿ ಪಾಸ್-ಬಟನ್‌ ಚಾಕು! ಇದು ಮಾಜಿ MLA ಸೋದರನ ದೌಲತ್ತು

| Updated By: ಆಯೇಷಾ ಬಾನು

Updated on: Jun 15, 2020 | 10:58 AM

ದೇವನಹಳ್ಳಿ: ಭಂಡತನಕ್ಕೂ ಒಂದು ಮಿತಿ ಇರಬೇಕು. ಅದು ಬಿಟ್ಟು ಮಾಡೋದೆ ಕೆಟ್ಟ ಕೆಲಸ, ಅಂತಹದ್ರಲ್ಲಿ ಪೊಲೀಸ್‌ರಿಗೆ ಆವಾಜ್‌. ಸುಮ್ಮನೇ ಬಿಡ್ತಾರಾ ಪೊಲೀಸರು. ಎತ್ತಾಕ್ಕೊಂಡು ಒಳಗಾಕಿಬಿಡ್ತಾರೆ. ಈಗ ದೇವನಹಳ್ಳಿಯಲ್ಲಿ ಆಗಿರೋದೂ ಇದೇ.. ಹೌದು, ದೇವನಹಳ್ಳಿಯ ಮಾಜಿ ಶಾಸಕ ವೆಂಕಟಸ್ವಾಮಿಯ ಸಹೋದರ ನವೀನ್‌ ಮತ್ತು ಆತನ ಸಹಚರ ನರೇಶ್‌ ಭಂಡತನ ಮೆರೆದ ಕಮಂಗಿಗಳು. ಅದಕ್ಕಾಗಿ ಈಗ ಪೊಲೀಸ್‌ ಅತಿಥಿಯಾಗಿದ್ದಾರೆ. ಅಣ್ಣ ಮಾಜಿ ಆದ್ರೂ ಧಿಮಾಕು ನಿಂತಿಲ್ಲ ಅಣ್ಣ ವೆಂಕಟಸ್ವಾಮಿ ಈಗ ಮಾಜಿ ಶಾಸಕ. ಆದ್ರೇನಂತೆ ಅಂತ ಮತ್ತೊಬ್ಬ ಎಂಎಲ್‌ಎ ಅಖಂಡ […]

ಕಾರಿನಲ್ಲಿ ನಕಲಿ ಪಾಸ್-ಬಟನ್‌ ಚಾಕು! ಇದು ಮಾಜಿ MLA ಸೋದರನ ದೌಲತ್ತು
Follow us on

ದೇವನಹಳ್ಳಿ: ಭಂಡತನಕ್ಕೂ ಒಂದು ಮಿತಿ ಇರಬೇಕು. ಅದು ಬಿಟ್ಟು ಮಾಡೋದೆ ಕೆಟ್ಟ ಕೆಲಸ, ಅಂತಹದ್ರಲ್ಲಿ ಪೊಲೀಸ್‌ರಿಗೆ ಆವಾಜ್‌. ಸುಮ್ಮನೇ ಬಿಡ್ತಾರಾ ಪೊಲೀಸರು. ಎತ್ತಾಕ್ಕೊಂಡು ಒಳಗಾಕಿಬಿಡ್ತಾರೆ. ಈಗ ದೇವನಹಳ್ಳಿಯಲ್ಲಿ ಆಗಿರೋದೂ ಇದೇ..

ಹೌದು, ದೇವನಹಳ್ಳಿಯ ಮಾಜಿ ಶಾಸಕ ವೆಂಕಟಸ್ವಾಮಿಯ ಸಹೋದರ ನವೀನ್‌ ಮತ್ತು ಆತನ ಸಹಚರ ನರೇಶ್‌ ಭಂಡತನ ಮೆರೆದ ಕಮಂಗಿಗಳು. ಅದಕ್ಕಾಗಿ ಈಗ ಪೊಲೀಸ್‌ ಅತಿಥಿಯಾಗಿದ್ದಾರೆ.

ಅಣ್ಣ ಮಾಜಿ ಆದ್ರೂ ಧಿಮಾಕು ನಿಂತಿಲ್ಲ
ಅಣ್ಣ ವೆಂಕಟಸ್ವಾಮಿ ಈಗ ಮಾಜಿ ಶಾಸಕ. ಆದ್ರೇನಂತೆ ಅಂತ ಮತ್ತೊಬ್ಬ ಎಂಎಲ್‌ಎ ಅಖಂಡ ಶ್ರೀನಿವಾಸ ಮೂರ್ತಿಯ ನಕಲಿ ಪಾಸ್ ಅನ್ನು ತಮ್ಮ ಕಾರಿನ ಮೇಲೆ ಅಂಟಿಸ್ಕೊಂಡು ಮಜಾ ಮಾಡುತ್ತಿದ್ರು ನವೀನ್‌. ಇಷ್ಟೇ ಅಲ್ಲ ಜತೆಗೆ ಯಾವುದಕ್ಕೂ ಇರಲಿ ಅಂತಾ ಹೈಕೋರ್ಟ್‌ ಬೋರ್ಡ್‌ ಬೇರೆ ತಮ್ಮ ಕಾರ್‌ ಮೇಲೆ ಹಾಕ್ಕೋಂಡಿದ್ರು.

ಪೊಲೀಸರಿಗೇ ಆವಾಜ್‌
ಆದ್ರೆ ರವಿವಾರ ದೇವನಹಳ್ಳಿ ಬಳಿ ಹೆದ್ದಾರಿಯಲ್ಲಿ ತಪಾಸಣೆ ವೇಳೆ ಪೊಲೀಸರು ಅವ್ರನ್ನ ತಡೆದು ಚೆಕ್‌ ಮಾಡಿದ್ದಾರೆ. ಆಗ ಯಾಕಪ್ಪ ಹೀಗೆ ಮಾಡಿದ್ರಿ ಅಂದಿದ್ದಾರೆ. ಅದಕ್ಕೆ ನವೀನ್‌ ಮತ್ತು ನರೇಶ್‌ ತಮ್ಮ ರಾಜಕೀಯ ಪುಢಾರಿತನ ತೋರಿಸಿದ್ದಾರೆ. ಪೊಲೀಸರಿಗೇ ಆವಾಜ್‌ ಹಾಕಿದ್ದಾರೆ.

ಎಷ್ಟಂದ್ರು ಪೊಲೀಸರಲ್ವಾ? ಅಲಲೆೇ ತಾಳಪ್ಪ ತಮ್ಮಾ! ಏನೋ ಯಡವಟ್ಟಿದೆ ಅಂತಾ ಕಾರ್‌ನ ಮತ್ತಷ್ಟು ತಪಾಸಣೆ ಮಾಡಿದ್ದಾರೆ. ಆಗ ಆಘಾತಕಾರಿಯೆಂಬಂತೆ ಬಟನ್‌ ಚಾಕುಗಳು ಪತ್ತೆಯಾಗಿವೆ! ಇನ್ನೇನು ಬೇಕು.. ನಕಲಿ ಪಾಸ್, ಬಟನ್‌ ಚಾಕು.. ಸಾಕಲ್ಲ. ಕಾರ್‌ ಸೀಜ್‌ ಮಾಡಿದ ಪೊಲೀಸರು, ಇಬ್ಬರ ಮೇಲೂ ಕೇಸ್‌ ಜಡಿದಿದ್ದಾರೆ. ಬೇಕಿತ್ತಾ ಇದೆಲ್ಲಾ..

Published On - 1:54 pm, Sun, 14 June 20