ಡಿ.ಜೆ.ಹಳ್ಳಿ ಗಲಾಟೆ: ಸಂಪತ್‌ರಾಜ್, ಜಾಕೀರ್​ಗೆ ಸಿಸಿಬಿ ನೋಟಿಸ್

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಮಾಜಿ ಮೇಯರ್, ಹಾಲಿ ಸದಸ್ಯ ಸಂಪತ್‌ರಾಜ್ ಹಾಗೂ ಕಾರ್ಪೊರೇಟರ್​ ಜಾಕೀರ್​ಗೆ ಸಿಸಿಬಿ ನೋಟಿಸ್​ ಜಾರಿಗೊಳಿಸಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ನೀಡಲಾಗಿದೆ. ಪುಲಕೇಶಿನಗರ ವಾರ್ಡ್ ಕಾರ್ಪೊರೇಟರ್ ಜಾಕೀರ್ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಇವತ್ತು ಸಿಸಿಬಿ ಪೊಲೀಸರ ಮುಂದೆ ಹಾಜರಾಗುಬೇಕಿದೆ. ಸಿಸಿಬಿ ಮುಖ್ಯ ಕಚೇರಿ ಚಾಮರಾಜಪೇಟೆಯಲ್ಲಿದೆ. ಗಲಭೆ ಹಿಂದೆ ಸ್ಥಳೀಯ ರಾಜಕೀಯ ದ್ವೇಷದ ಕಾರಣವೂ ಕೇಳಿ ಬಂದಿತ್ತು. ಪೊಲೀಸರು, ಬಂಧಿತ […]

ಡಿ.ಜೆ.ಹಳ್ಳಿ ಗಲಾಟೆ: ಸಂಪತ್‌ರಾಜ್, ಜಾಕೀರ್​ಗೆ ಸಿಸಿಬಿ ನೋಟಿಸ್

Updated on: Aug 18, 2020 | 7:22 AM

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಮಾಜಿ ಮೇಯರ್, ಹಾಲಿ ಸದಸ್ಯ ಸಂಪತ್‌ರಾಜ್ ಹಾಗೂ ಕಾರ್ಪೊರೇಟರ್​ ಜಾಕೀರ್​ಗೆ ಸಿಸಿಬಿ ನೋಟಿಸ್​ ಜಾರಿಗೊಳಿಸಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ನೀಡಲಾಗಿದೆ.

ಪುಲಕೇಶಿನಗರ ವಾರ್ಡ್ ಕಾರ್ಪೊರೇಟರ್ ಜಾಕೀರ್ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಇವತ್ತು ಸಿಸಿಬಿ ಪೊಲೀಸರ ಮುಂದೆ ಹಾಜರಾಗುಬೇಕಿದೆ. ಸಿಸಿಬಿ ಮುಖ್ಯ ಕಚೇರಿ ಚಾಮರಾಜಪೇಟೆಯಲ್ಲಿದೆ. ಗಲಭೆ ಹಿಂದೆ ಸ್ಥಳೀಯ ರಾಜಕೀಯ ದ್ವೇಷದ ಕಾರಣವೂ ಕೇಳಿ ಬಂದಿತ್ತು. ಪೊಲೀಸರು, ಬಂಧಿತ ಆರೋಪಿಗಳ ಮೊಬೈಲ್ ಸಹ ಪರಿಶೀಲನೆ ನಡೆಸಿದ್ದರು. ಬಂಧಿತರಲ್ಲಿ ಕೆಲವರು ಪ್ರಮುಖರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆರೋಪ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಂಪತ್‌ರಾಜ್ ಹಾಗೂ ಜಾಕೀರ್​ಗೆ ನೋಟಿಸ್ ನೀಡಲಾಗಿದೆ.