ಬಿಗ್ಬಾಸ್ ಖ್ಯಾತಿಯ ಪ್ರಥಮ್ ವಿರುದ್ಧ SDPIಯಿಂದ ದೂರು ದಾಖಲು, ಯಾಕೆ?
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ವಿಡಿಯೋಗೆ ಕಾಮೆಂಟ್ ಮಾಡಿದ ಆರೋಪದಡಿ ಬಿಗ್ಬಾಸ್ ಖ್ಯಾತಿಯ ಪ್ರಥಮ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ವಿಡಿಯೋಗೆ ಪ್ರಥಮ್ ಕಾಮೆಂಟ್ ಮಾಡಿದ್ದರಂತೆ. ಹೀಗಾಗಿ, ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಹೇಳಿಕೆಯನ್ನು ಪ್ರಥಮ್ ಪೋಸ್ಟ್ ಮಾಡಿರುವುದಾಗಿ SDPI ಜಿಲ್ಲಾ ಸಮಿತಿ ಸದಸ್ಯ ಉಮರ್ ಫಾರೂಕ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು, ಪ್ರಥಮ್ನ ಬಂಧಿಸಲು […]

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ವಿಡಿಯೋಗೆ ಕಾಮೆಂಟ್ ಮಾಡಿದ ಆರೋಪದಡಿ ಬಿಗ್ಬಾಸ್ ಖ್ಯಾತಿಯ ಪ್ರಥಮ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ವಿಡಿಯೋಗೆ ಪ್ರಥಮ್ ಕಾಮೆಂಟ್ ಮಾಡಿದ್ದರಂತೆ. ಹೀಗಾಗಿ, ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಹೇಳಿಕೆಯನ್ನು ಪ್ರಥಮ್ ಪೋಸ್ಟ್ ಮಾಡಿರುವುದಾಗಿ SDPI ಜಿಲ್ಲಾ ಸಮಿತಿ ಸದಸ್ಯ ಉಮರ್ ಫಾರೂಕ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು, ಪ್ರಥಮ್ನ ಬಂಧಿಸಲು ಮುಂದಾಗಿದ್ದಾರೆ.
Published On - 7:22 pm, Mon, 17 August 20




