ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನೀರುಪಾಲು
ರಾಯಚೂರು: ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನೀರುಪಾಲು ಆಗಿರುವ ಘಟನೆ ಜಿಲ್ಲೆಯ ಕುರವಕುಲ್ ಗ್ರಾಮದ ಬಳಿ ಸಂಭವಿಸಿದೆ. ಒಂದೇ ತೆಪ್ಪದಲ್ಲಿ ಕೃಷ್ಣಾ ನದಿಯನ್ನ 13 ಜನರು ದಾಟುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ತೆಪ್ಪ ಮುಳುಗಿ ನಾಲ್ವರು ನೀರುಪಾಲು ಆಗಿದ್ದು ಉಳಿದ 8 ಜನ ಸುರಕ್ಷಿತವಾಗಿ ದಡ ಸೇರಿದ್ದಾರೆ. ಅಪಘಾತಕ್ಕೀಡಾದವರು ಕಡೆ ಶ್ರಾವಣ ಸೋಮವಾರ ಹಿನ್ನೆಲೆ ನಾರದಗಡ್ಡೆಗೆ ತೆರಳಿ ದರ್ಶನ ಪಡೆದಿದ್ದರು. ನಂತರ ತೆಲಂಗಾಣದ ಮಕ್ತಲಗೆ ತೆರಳಿ ವಾಪಸ್ ಅಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ […]

ರಾಯಚೂರು: ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನೀರುಪಾಲು ಆಗಿರುವ ಘಟನೆ ಜಿಲ್ಲೆಯ ಕುರವಕುಲ್ ಗ್ರಾಮದ ಬಳಿ ಸಂಭವಿಸಿದೆ.
ಒಂದೇ ತೆಪ್ಪದಲ್ಲಿ ಕೃಷ್ಣಾ ನದಿಯನ್ನ 13 ಜನರು ದಾಟುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ತೆಪ್ಪ ಮುಳುಗಿ ನಾಲ್ವರು ನೀರುಪಾಲು ಆಗಿದ್ದು ಉಳಿದ 8 ಜನ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಅಪಘಾತಕ್ಕೀಡಾದವರು ಕಡೆ ಶ್ರಾವಣ ಸೋಮವಾರ ಹಿನ್ನೆಲೆ ನಾರದಗಡ್ಡೆಗೆ ತೆರಳಿ ದರ್ಶನ ಪಡೆದಿದ್ದರು. ನಂತರ ತೆಲಂಗಾಣದ ಮಕ್ತಲಗೆ ತೆರಳಿ ವಾಪಸ್ ಅಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 8 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರು ನೀರುಪಾಲಾಗಿದ್ದಾರೆ.
ಮಕ್ತಲ್ ಠಾಣೆ ಪೊಲೀಸರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು ಅವರಿಗೆ ಯಾಪಲದಿನ್ನಿ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂದು ಟಿವಿ9ಗೆ ರಾಯಚೂರು ಎಸ್ಪಿ ಹರಿಬಾಬು ಮಾಹಿತಿ ನೀಡಿದ್ದಾರೆ.



