ಸ್ಯಾಂಡಲ್​ವುಡ್​ಗೆ Drugs ಜಾಲ: ‘ಕೋಟಿ ನಾಯಿ ಒಡೆಯ’ನಿಗೆ CCB ಬುಲಾವ್​

| Updated By: sandhya thejappa

Updated on: Dec 03, 2020 | 11:42 AM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಶ್ವಾನ ತಳಿ ಮಾಲೀಕ ಸತೀಶ್​ ಕ್ಯಾಡಬೋಮ್ಸ್  ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಸತೀಶ್​ಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಸತೀಶ್ ಬಂಧಿತ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಜೊತೆಗೆ, ಸಂಜನಾ ಮತ್ತು ರಾಹುಲ್‌ ಟೀಂ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಸೆಲೆಬ್ರಿಟಿ ಡಾಗ್​ ಬ್ರೀಡರ್ ಸತೀಶ್​ ಕ್ಯಾಡಬೋಮ್ಸ್ ಕೋಟಿ ರೂಪಾಯಿ ಮೌಲ್ಯದ ಶ್ವಾನದ ಮಾಲೀಕ ಎಂದೇ ಫೇಮಸ್​. ಈತ ನಟಿ ಸಂಜನಾ […]

ಸ್ಯಾಂಡಲ್​ವುಡ್​ಗೆ Drugs ಜಾಲ: ‘ಕೋಟಿ ನಾಯಿ ಒಡೆಯ’ನಿಗೆ CCB ಬುಲಾವ್​
Follow us on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಶ್ವಾನ ತಳಿ ಮಾಲೀಕ ಸತೀಶ್​ ಕ್ಯಾಡಬೋಮ್ಸ್  ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಸತೀಶ್​ಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಸತೀಶ್ ಬಂಧಿತ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಜೊತೆಗೆ, ಸಂಜನಾ ಮತ್ತು ರಾಹುಲ್‌ ಟೀಂ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ಸೆಲೆಬ್ರಿಟಿ ಡಾಗ್​ ಬ್ರೀಡರ್ ಸತೀಶ್​ ಕ್ಯಾಡಬೋಮ್ಸ್ ಕೋಟಿ ರೂಪಾಯಿ ಮೌಲ್ಯದ ಶ್ವಾನದ ಮಾಲೀಕ ಎಂದೇ ಫೇಮಸ್​. ಈತ ನಟಿ ಸಂಜನಾ ಹಾಗೂ ರಾಹುಲ್ ಟೀಂ ಜೊತೆ ಮಸ್ತ್-ಮಸ್ತ್ ಪಾರ್ಟಿಗಳಲ್ಲಿ‌ ಭಾಗಿಯಾಗಿದ್ದ ಹಾಗೂ ಡ್ರಗ್ ಕೇಸ್​ನಲ್ಲಿ ಜೈಲುಪಾಲಾಗಿರುವ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ.

ಹಲವು ಪಾರ್ಟಿಗಳಲ್ಲಿ ಆರೋಪಿಗಳ ಜೊತೆ ಕಾಣಿಸಿಕೊಂಡಿರುವ ಸತೀಶ ಪೇಜ್-3 ಪಾರ್ಟಿಗಳಲ್ಲಿ ಸದಾ ಇರುತ್ತಿದ್ದನಂತೆ. ಈ ಹಿನ್ನೆಲೆಯಲ್ಲಿ ಆತನ ಬಳಿ ಪೆಡ್ಲರ್ಸ್ ಕಾಂಟ್ಯಾಕ್ಟ್ ಬಗ್ಗೆ ಮಾಹಿತಿ ಪಡೆಯಲು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದಾರಂತೆ. ನಿಮಗೂ ಬಂಧಿತ ಪೆಡ್ಲರ್ಸ್​ಗೂ ಸಂಬಂಧವಿದ್ಯಾ? ವ್ಯವಹಾರವಿದೆಯಾ..? ಅನ್ನೋದರ ಬಗ್ಗೆ ಮಾಹಿತಿ ಪಡೆಯಲು ಈತನಿಗೆ ನೋಟಿಸ್ ನೀಡಲಾಗಿದೆ.

Published On - 12:53 pm, Tue, 22 September 20