ಕೊರೊನಾ ಬಂದ್ರೆ ಸಂಬಂಧಿಕರೇ ಹತ್ತಿರ ಬರಲ್ಲ, ಇರಲಿ ಎಚ್ಚರ -ಸಿದ್ದರಾಮಯ್ಯ ಕಿವಿಮಾತು
[lazy-load-videos-and-sticky-control id=”IxMJKpk0e0U”] ಬೆಂಗಳೂರು: ಕೊರೊನಾ ಬಂದ ಮೇಲೆ ಹಲವು ಸಂಕಷ್ಟಗಳನ್ನ ಎದುರಿಸಬೇಕು. ಹಾಗಾಗಿ, ಕೊರೊನಾ ಬಗ್ಗೆ ಅಲಕ್ಷ್ಯ ಬೇಡ. ಜ್ವರ, ನೆಗಡಿ, ಕೆಮ್ಮು ಬಂದಿದೆ ಎಂದು ಕೇರ್ಲೆಸ್ ಆಗಬೇಡಿ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಿತವಚನ ಹೇಳಿದ್ದಾರೆ. ನಮ್ಮ ಆನೇಕ ಶಾಸಕರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಮತ್ತೆ ಕೆಲವರು ಆಸ್ಪತ್ರೆಯಲ್ಲಿದ್ದಾರೆ ಹಾಗೂ ಕೆಲವರು ಕ್ವಾರಂಟೈನ್‌ನಲ್ಲಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಗಸ್ತಿಯವರು ರಾಜ್ಯಸಭೆಗೇ ಕಾಲಿಟ್ಟಿರಲಿಲ್ಲ. ಆಗಲೇ ಅವರು ಕೊರೊನಾದಿಂದ ಮೃತಪಟ್ರು ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು. ಜೊತೆಗೆ, ಬಸವಕಲ್ಯಾಣ ಶಾಸಕ […]
[lazy-load-videos-and-sticky-control id=”IxMJKpk0e0U”]
ಬೆಂಗಳೂರು: ಕೊರೊನಾ ಬಂದ ಮೇಲೆ ಹಲವು ಸಂಕಷ್ಟಗಳನ್ನ ಎದುರಿಸಬೇಕು. ಹಾಗಾಗಿ, ಕೊರೊನಾ ಬಗ್ಗೆ ಅಲಕ್ಷ್ಯ ಬೇಡ. ಜ್ವರ, ನೆಗಡಿ, ಕೆಮ್ಮು ಬಂದಿದೆ ಎಂದು ಕೇರ್ಲೆಸ್ ಆಗಬೇಡಿ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಿತವಚನ ಹೇಳಿದ್ದಾರೆ.
ನಮ್ಮ ಆನೇಕ ಶಾಸಕರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಮತ್ತೆ ಕೆಲವರು ಆಸ್ಪತ್ರೆಯಲ್ಲಿದ್ದಾರೆ ಹಾಗೂ ಕೆಲವರು ಕ್ವಾರಂಟೈನ್‌ನಲ್ಲಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಗಸ್ತಿಯವರು ರಾಜ್ಯಸಭೆಗೇ ಕಾಲಿಟ್ಟಿರಲಿಲ್ಲ. ಆಗಲೇ ಅವರು ಕೊರೊನಾದಿಂದ ಮೃತಪಟ್ರು ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು. ಜೊತೆಗೆ, ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ICUನಲ್ಲಿದ್ದಾರೆ. ಒಂದು ತಿಂಗಳಿಂದ ಅವರು ಸ್ವತಂತ್ರವಾಗಿ ಉಸಿರಾಡುತ್ತಿಲ್ಲ. ನಾನು ವೈದ್ಯರಿಗೆ ಪ್ರತಿದಿನ ಕರೆ ಮಾಡ್ತೇನೆ. ವೈದ್ಯರು ಇನ್ನೂ ಏನೂ ಹೇಳೋಕೆ ಆಗಲ್ಲ ಅಂತಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
‘ಒಮ್ಮೆ ಸೋಂಕು ತಗುಲಿದರೆ ಸಂಬಂಧಿಕರೇ ಹತ್ತಿರ ಬರಲ್ಲ’ ಒಮ್ಮೆ ಸೋಂಕು ತಗುಲಿದರೆ ಸಂಬಂಧಿಕರೇ ಹತ್ತಿರ ಬರಲ್ಲ. ಹಾಗಾಗಿ, ಕೊವಿಡ್ ರೋಗ ಬಂದವರು ಕುಗ್ಗಿ ಹೋಗ್ತಾರೆ ಅಂತಾ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಎಲ್ಲರೂ ಎಚ್ಚರಿಕೆ ವಹಿಸಲು ವಿಶ್ವಸಂಸ್ಥೆಯೂ ಹೇಳಿತ್ತು. ಆದರೆ, ಕೇಂದ್ರದ ಆರೋಗ್ಯ ಸಚಿವರು ಜನರು ಆತಂಕ ಪಡುವ ಅಗತ್ಯವಿಲ್ಲ ಅಂತಾ ಹೇಳಿದ್ರು. ಈ ಮೂಲಕ ದೇಶದ ಜನರಿಗೆ ಅವರು ತಪ್ಪು ಮಾಹಿತಿಯನ್ನು ಕೊಟ್ಟಿದ್ರು. ಕೊರೊನಾ ವಿಚಾರದಲ್ಲಿ ಅಮೆರಿಕ ಬಿಟ್ರೆ ಭಾರತವೇ ಎರಡನೇ ಸ್ಥಾನದಲ್ಲಿದೆ.
ಇನ್ನು 15 ದಿನ ಕಳೆದರೆ ದೇಶ ಪ್ರಪಂಚದಲ್ಲೇ ಮೊದಲ ಸ್ಥಾನಕ್ಕೆ ಬರಲಿದೆ. ಪ್ರತಿನಿತ್ಯ 50 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗ್ತಿವೆ. ಅಮೆರಿಕಾಗೆ, ನಮಗೂ ಬರೀ 15 ಲಕ್ಷ ಅಷ್ಟೇ ಅಂತರ. ಇನ್ನು ಕೆಲವೇ ದಿನಗಳಲ್ಲಿ ಅಮೆರಿಕಾವನ್ನು ಭಾರತ ಹಿಂದಿಕ್ಕಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ವಿದೇಶಗಳಿಂದ ಬರುವ ವಿಮಾನಗಳನ್ನು ನಿಲ್ಲಿಸಬೇಕಿತ್ತು’ ವಿದೇಶಗಳಿಂದ ಬರುವ ವಿಮಾನಗಳನ್ನು ನಿಲ್ಲಿಸಬೇಕಿತ್ತು. ಅದನ್ನು ಮಾಡದೆ ಇರುವ ಪರಿಣಾಮವಾಗಿ ಇವಾಗ ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಹೆಚ್ಚಳವಾಗಿದೆ. ಮಹಾಮಾರಿಯಿಂದ ಲಕ್ಷಾಂತರ ಜನರು ಕುಗ್ಗಲು ಹಾಗೂ ಸಾವಿರಾರು ಜನರು ಸಾಯುವಂಥ ಪರಿಸ್ಥಿತಿ ಉಂಟಾಗಿದೆ.
ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಸರಿಯಾದ ಕ್ರಮ ತೆಗೆದು ಕೊಂಡಿದ್ರೆ ಕೊರೊನಾ ಇಷ್ಟೊಂದು ಉಲ್ಬಣವಾಗ್ತಿರಲಿಲ್ಲ. ಕೊರೊನಾ ತಡೆಯಲು ಕೇಂದ್ರ ಸರ್ಕಾರ ಎಡವಿದೆ ಎಂಬುದು ನನ್ನ ಅಭಿಪ್ರಾಯ ಅಂತಾ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ.
Published On - 11:57 am, Tue, 22 September 20