2 ಲಾರಿಗಳ ಮಧ್ಯೆ ಡಿಕ್ಕಿ, ಎರಡೂ ಲಾರಿ ಚಾಲಕರು ಸ್ಥಳದಲ್ಲೇ ದುರ್ಮರಣ

ಗದಗ:  ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ. ಮೋಹನ್(40) ಮಂಜುನಾಥ(55) ಮೃತ ದುರ್ದೈವಿಗಳು. ನಾರಾಯಣಪೂರ ಗ್ರಾಮದ ಬಳಿ ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಗದಗದಿಂದ ಗಜೇಂದ್ರಗಡಕ್ಕೆ ಹೊರಟ್ಟಿದ್ದ ಲಾರಿ ಮತ್ತು ಶಿವಮೊಗ್ಗಕ್ಕೆ ಹೊರಟ್ಟಿದ ಲಾರಿ ನಡುವೆ ಭೀಕರ ಅಪಘಾತವಾಗಿದೆ. ಎರಡೂ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಎರಡೂ ಲಾರಿ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮೋಹನ್ ರೋಣ ತಾಲೂಕಿನ ಮೆಣಸಗಿ ನಿವಾಸಿ. ಹಾಗೂ ಮಂಜುನಾಥ ಮೈಸೂರು ಮೂಲದವ. […]

2 ಲಾರಿಗಳ ಮಧ್ಯೆ ಡಿಕ್ಕಿ, ಎರಡೂ ಲಾರಿ ಚಾಲಕರು ಸ್ಥಳದಲ್ಲೇ ದುರ್ಮರಣ
Ayesha Banu

| Edited By: sadhu srinath

Sep 22, 2020 | 10:49 AM

ಗದಗ:  ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ. ಮೋಹನ್(40) ಮಂಜುನಾಥ(55) ಮೃತ ದುರ್ದೈವಿಗಳು.

ನಾರಾಯಣಪೂರ ಗ್ರಾಮದ ಬಳಿ ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಗದಗದಿಂದ ಗಜೇಂದ್ರಗಡಕ್ಕೆ ಹೊರಟ್ಟಿದ್ದ ಲಾರಿ ಮತ್ತು ಶಿವಮೊಗ್ಗಕ್ಕೆ ಹೊರಟ್ಟಿದ ಲಾರಿ ನಡುವೆ ಭೀಕರ ಅಪಘಾತವಾಗಿದೆ. ಎರಡೂ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಎರಡೂ ಲಾರಿ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಮೋಹನ್ ರೋಣ ತಾಲೂಕಿನ ಮೆಣಸಗಿ ನಿವಾಸಿ. ಹಾಗೂ ಮಂಜುನಾಥ ಮೈಸೂರು ಮೂಲದವ. ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada