ಹೊಡಿತೂ ಜಾಕ್ಪಾಟ್.. 24 ವರ್ಷದ ಅನಂತುಗೆ 12 ಕೋಟಿ ರೂ ವಿಜಯ
ಅದೃಷ್ಟ ಮನುಷ್ಯನಿಗೆ ಹೇಗೆಲ್ಲಾ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಇಡುಕ್ಕಿ ಜಿಲ್ಲೆಯ ಬಡ ಕುಟುಂಬದ 24 ವರ್ಷದ ಯುವಕ 12 ಕೋಟಿ ರೂ.ಗಳ ಕೇರಳ ಸರ್ಕಾರದ ಓಣಂ ಬಂಪರ್ ಲಾಟರಿಯ ಪ್ರಥಮ ಬಹುಮಾನವನ್ನು ಗೆದ್ದಿದ್ದಾನೆ. ದೇವಾಲಯದ ಗುಮಾಸ್ತ ಅನಂತ ವಿಜಯ! ಎರ್ನಾಕುಲಂನ ದೇವಾಲಯವೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಅನಂತು ವಿಜಯನ್ ಎಂಬ ಯುವಕ ಕಳೆದ ತಿಂಗಳು ಟಿಬಿ 173964 ಲಾಟರಿ ಟಿಕೆಟ್ ಅನ್ನು ಖರೀದಿಸಿದ್ದ. ಭಾನುವಾರ ಸಂಜೆ ಡ್ರಾ ಪ್ರಕ್ರಿಯೆ ನಡೆದಿತ್ತು. ಮತ್ತು ರಾತ್ರಿ […]
ಅದೃಷ್ಟ ಮನುಷ್ಯನಿಗೆ ಹೇಗೆಲ್ಲಾ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಇಡುಕ್ಕಿ ಜಿಲ್ಲೆಯ ಬಡ ಕುಟುಂಬದ 24 ವರ್ಷದ ಯುವಕ 12 ಕೋಟಿ ರೂ.ಗಳ ಕೇರಳ ಸರ್ಕಾರದ ಓಣಂ ಬಂಪರ್ ಲಾಟರಿಯ ಪ್ರಥಮ ಬಹುಮಾನವನ್ನು ಗೆದ್ದಿದ್ದಾನೆ.
ದೇವಾಲಯದ ಗುಮಾಸ್ತ ಅನಂತ ವಿಜಯ! ಎರ್ನಾಕುಲಂನ ದೇವಾಲಯವೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಅನಂತು ವಿಜಯನ್ ಎಂಬ ಯುವಕ ಕಳೆದ ತಿಂಗಳು ಟಿಬಿ 173964 ಲಾಟರಿ ಟಿಕೆಟ್ ಅನ್ನು ಖರೀದಿಸಿದ್ದ. ಭಾನುವಾರ ಸಂಜೆ ಡ್ರಾ ಪ್ರಕ್ರಿಯೆ ನಡೆದಿತ್ತು. ಮತ್ತು ರಾತ್ರಿ ಅನಂತುಗೆ ಕರೆ ಬಂದಾಗ ಅವನಿಗೆ ಶಾಕ್ ಆಗಿದೆ. ಯಾಕೆಂದರೆ ಅವನು ಖರೀದಿಸಿದ್ದ ಟಿಕೆಟ್ 12 ಕೋಟಿಯ ಮೊದಲ ಬಹುಮಾನಕ್ಕೆ ಕಾರಣವಾಗಿತ್ತು.
ನನಗೆ ಕರೆ ಬಂದಾಗ ತಮಾಷೆ ಅಂದುಕೊಂಡಿದ್ದೆ: ಅನಂತ ವಿಜಯ ನನಗೆ ಕರೆ ಬಂದಾಗ ಯಾರೋ ನನ್ನೊಂದಿಗೆ ತಮಾಷೆ ಮಾಡುತ್ತಿದ್ದಾರೆಂದು ಭಾವಿಸಿದೆ. ಆದರೆ ನಾನು ಸುದ್ದಿಯನ್ನು ಪರಿಶೀಲಿಸಿದಾಗ ನನಗೆ ನಂಬಲಾಗಲಿಲ್ಲ. ಭಾನುವಾರ ಬೆಳಿಗ್ಗೆ ಓಣಂ ಬಂಪರ್ ನನ್ನ ಭವಿಷ್ಯವನ್ನು ಬದಲಾಯಿಸಿದೆ ಎಂದು ಅನಂತು ವಿಜಯನ್ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಡುಕ್ಕಿ ಜಿಲ್ಲೆಯ ದೂರದ ಪ್ರದೇಶದಲ್ಲಿ ತನ್ನ ಹೆತ್ತವರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದ ಅವರು ಸರಿಯಾದ ಸಮಯದಲ್ಲಿ ಜಾಕ್‌ಪಾಟ್‌ಗೆ ಹೊಡೆದಿರುವುದು ಈ ಬಡ ಕುಟುಂಬಕ್ಕೆ ದೊಡ್ಡ ಸಹಾಯವಾಗಿದೆ ಎಂದು ಅನಂತು ಹೇಳಿದ್ರು.
ಅಕೌಂಟಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅವರ ಸಹೋದರಿ ಕೋವಿಡ್ನಿಂದಾಗಿ ಕೆಲಸ ಕಳೆದುಕೊಂಡಿದ್ದರು. ಮತ್ತು ವರ್ಣಚಿತ್ರಕಾರರಾಗಿರುವ ಅವರ ತಂದೆ ಸಹ ಕೆಲವು ತಿಂಗಳಿಂದ ಕೆಲಸವಿಲ್ಲದೆ ಮನೆ ನಡೆಸಲು ಕಷ್ಟ ಪಡುತ್ತಿದ್ದರು. ಇದೀಗ.. ಈ ಜಾಕ್ಪಾಟ್ ಲಾಟರಿಯಿಂದ ಇವರ ಬಾಳು ಬಂಗಾರವಾಗಿದೆ.
ಇನ್ನು ಲಾಟರಿ ಹೊಡೆದ ಬಳಿಕ ಅನಂತ್ ಆ ಹಣವನ್ನು ಸರಿಯಾಗಿ ಉಪಯೋಗಿಸುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದಾರೆ. “ನನ್ನ ಮೊದಲ ಆದ್ಯತೆಯೆಂದರೆ ಈಗಿನ ಪ್ರದೇಶದಿಂದ ಸ್ಥಳಾಂತರಗೊಂಡು ಎರ್ನಾಕುಲಂ ಬಳಿ ಒಂದು ಸಣ್ಣ ಮನೆಯನ್ನು ಖರೀದಿಸುವುದು ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.
300 ರೂ ಟಿಕೆಟ್ ಖರೀದಿಸಿ, ಅದೃಷ್ಟವನ್ನೇ ಪಣಕ್ಕಿಟ್ಟು.. 12 ಕೋಟಿ ಹಣ ತಮ್ಮದಾಗಿಸಿಕೊಂಡರು! ಇನ್ನು ಅನಂತು ವಿಜಯನ್ಗೆ ಇದೇ ಮೊದಲ ಬಾರಿಗೆ ಲಾಟರಿ ಹೊಡೆದಿರೋದಲ್ಲ. ಈ ಹಿಂದೆ ಕೂಡ 5 ಸಾವಿರದ ಲಾಟರಿ ಹೊಡೆದಿತ್ತು. ಹಾಗಾಗಿ ಅನಂತು ಆಗಾಗ ಲಾಟರಿ ಖರೀದಿಸುತ್ತಿದ್ದರು. ಓಣಂ ಬಂಪರ್‌ನ ಒಂದು ಟಿಕೆಟ್‌ನ ಬೆಲೆ 300 ರೂಪಾಯಿ ಇದೆಯಂತೆ. 300 ರೂ ಟಿಕೆಟ್ ಖರೀದಿಸಿ 12 ಕೋಟಿ ಹಣವನ್ನು ಅನಂತು ತಮ್ಮದಾಗಿಸಿಕೊಂಡಿದ್ದಾರೆ.