ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ.. ಕೈ ಕಳೆದುಕೊಂಡ 8 ವರ್ಷದ ಬಾಲಕ, ಇದುವರೆಗೂ ಸಿಕ್ಕಿಲ್ಲ ಪರಿಹಾರ

|

Updated on: Mar 09, 2021 | 1:37 PM

ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ 8 ವರ್ಷದ ಬಾಲಕನ ಕೈಗೆ ಗಂಭೀರ ಗಾಯಗಳಾಗಿದ್ದು ಬಾಲಕ ಕೈ ಕಳೆದುಕೊಂಡಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ.. ಕೈ ಕಳೆದುಕೊಂಡ 8 ವರ್ಷದ ಬಾಲಕ, ಇದುವರೆಗೂ ಸಿಕ್ಕಿಲ್ಲ ಪರಿಹಾರ
ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕೈ ಕಳೆದುಕೊಂಡ 8 ವರ್ಷದ ಬಾಲಕ ಅಕ್ಷಯ್ ಕುಮಾರ್
Follow us on

ಮಂಡ್ಯ: ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ 8 ವರ್ಷದ ಬಾಲಕನ ಕೈಗೆ ಗಂಭೀರ ಗಾಯಗಳಾಗಿದ್ದು ಬಾಲಕ ಕೈ ಕಳೆದುಕೊಂಡಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಅಕ್ಷಯ್ ಕುಮಾರ್(8) ಕೈ ಕಳೆದುಕೊಂಡ ಬಾಲಕ. ಮನೆಯ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಕೈಗೆ ಗಂಭೀರವಾಗಿ ಗಾಯವಾಗಿತ್ತು. ಬಾಲಕನಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರು ಕೈ ಕತ್ತರಿಸಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಬಾಲಕನೊಬ್ಬ ಕೈ ಕಳೆದುಕೊಂಡಂತಾಗಿದೆ. ಬೇವಿನಕುಪ್ಪೆ ಗ್ರಾಮದ ಮನೆಯೊಂದರ ಮೇಲೆ ವಿದ್ಯುತ್ ತಂತಿ ಹಾದು ಹೋಗಿತ್ತು. ವಿದ್ಯುತ್ ತಂತಿ ತೆಗೆಯುವಂತೆ ಮನೆಯವರು ಮನವಿ ಮಾಡಿದ್ರು. ಆದ್ರೆ ವಿದ್ಯತ್ ತಂತಿ ಸ್ಥಳಾಂತರ ಮಾಡದೆ ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಇದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಮನೆಯವರು ಆರೋಪಿಸಿದ್ದಾರೆ. ಇನ್ನು ಮನೆಯ ಮೇಲೆ ಆಟವಾಡುತ್ತಿದ್ದ ಬಾಲಕನಿಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಇದರಿಂದ ಬಾಲಕನ ಕೈಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಕಿತ್ಸೆ ವೇಳೆ ಗಂಭೀರ ಗಾಯಕೊಂಡಿದ್ದ ಬಾಲಕನ ಕೈಯನ್ನು ವೈದ್ಯರು ಕತ್ತರಿಸಿದ್ದಾರೆ. ಘಟನೆ ನಡೆದು ಒಂದು ವಾರವಾದ್ರು, ಪರಿಹಾರ ಕೊಡಲು ಚೆಸ್ಕಾಂ ಅಧಿಕಾರಿಗಳ ಮೀನಾಮೇಷ ಎಣಿಸುತ್ತಿದ್ದಾರೆ. ಇಂದು ಪಾಂಡವಪುರ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲು ಪೋಷಕರು ನಿರ್ಧರಿಸಿದ್ದು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕೈ ಕಳೆದುಕೊಂಡ 8 ವರ್ಷದ ಬಾಲಕ ಅಕ್ಷಯ್ ಕುಮಾರ್

ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ, ಸ್ಥಳದಲ್ಲೇ ಪವರ್​ಮನ್ ಸಾವು