‘ಒಬ್ಬರನ್ನು ಕೈಬಿಡಬೇಕಾಗುತ್ತದೆ; ಸಣ್ಣಪುಟ್ಟ ವ್ಯತ್ಯಾಸಗಳಿವೆ; ಸಚಿವರ ಪಟ್ಟಿಯನ್ನು ರಾತ್ರಿ ಬಿಡುಗಡೆ ಮಾಡುವೆ: ಸಿಎಂ ಯಡಿಯೂರಪ್ಪ

| Updated By: ಸಾಧು ಶ್ರೀನಾಥ್​

Updated on: Jan 12, 2021 | 5:58 PM

ನಾಳೆ 7ರಿಂದ 8 ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡುತ್ತಾರೆ. ಸಚಿವರಾಗುವವರ ಪಟ್ಟಿಯನ್ನು ರಾತ್ರಿ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಹೇಳಿದರು.

‘ಒಬ್ಬರನ್ನು ಕೈಬಿಡಬೇಕಾಗುತ್ತದೆ; ಸಣ್ಣಪುಟ್ಟ ವ್ಯತ್ಯಾಸಗಳಿವೆ; ಸಚಿವರ ಪಟ್ಟಿಯನ್ನು ರಾತ್ರಿ ಬಿಡುಗಡೆ ಮಾಡುವೆ: ಸಿಎಂ ಯಡಿಯೂರಪ್ಪ
ಸಿಎಂ B.S.ಯಡಿಯೂರಪ್ಪ
Follow us on

ಬೆಂಗಳೂರು: ನಾಳೆ 7ರಿಂದ 8 ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡುತ್ತಾರೆ. ಸಚಿವರಾಗುವವರ ಪಟ್ಟಿಯನ್ನು ರಾತ್ರಿ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಹೇಳಿದರು.

ಈಗಾಗಲೇ ಸಚಿವ ಸ್ಥಾನ ಖಚಿತ ಆಗಿರುವವರಿಗೆ ತಿಳಿಸಿದ್ದೇನೆ. ಸಣ್ಣಪುಟ್ಟ ವ್ಯತ್ಯಾಸ ಇರುವುದನ್ನು ಅವರಿಗೆ ತಿಳಿಸಿದ್ದೇನೆ. ಜೊತೆಗೆ, ಒಬ್ಬರನ್ನು ಕೈಬಿಡಬೇಕಾಗಬಹುದು, ಅದು ಚರ್ಚೆ ಆಗುತ್ತಿದೆ. ಇಂದು ರಾತ್ರಿ ಈ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇನೆ. ಆದರೆ, ಸಂಪುಟ ವಿಸ್ತರಣೆಯಲ್ಲಿ ಯಾವುದೇ ರೀತಿ ಗೊಂದಲ ‌‌ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಏಳೆಂಟು ಸಚಿವರು ನಾಳೆ 3.50ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಾರೆ -ಸಿಎಂ ಬಿ.ಎಸ್​. ಯಡಿಯೂರಪ್ಪ