ಮೀಟಿಂಗ್ ಸಂತೋಷ ತಂದಿದೆ.. ಸಚಿವ ಸಂಪುಟದ ಬಗ್ಗೆ ಆದಷ್ಟು ಬೇಗ ಗುಡ್ ನ್ಯೂಸ್ ಸಿಗಲಿದೆ -ಸಿಎಂ BSY

|

Updated on: Jan 10, 2021 | 5:00 PM

ರಾಷ್ಟ್ರ ನಾಯಕರ ಜೊತೆಗಿನ ಸಭೆ ಸಂತೋಷ ತಂದುಕೊಟ್ಟಿದೆ. ಹಾಗಾಗಿ,ಸಚಿವ ಸಂಪುಟದ ಬಗ್ಗೆ  ಹೈಕಮಾಂಡ್ ಆದಷ್ಟು ಬೇಗ ಗುಡ್​ ನ್ಯೂಸ್​ ಕೊಡಲಿದೆ ಎಂದು ಯಡಿಯೂರಪ್ಪ ಹೇಳಿದರು.

ಮೀಟಿಂಗ್ ಸಂತೋಷ ತಂದಿದೆ.. ಸಚಿವ ಸಂಪುಟದ ಬಗ್ಗೆ ಆದಷ್ಟು ಬೇಗ ಗುಡ್ ನ್ಯೂಸ್ ಸಿಗಲಿದೆ -ಸಿಎಂ BSY
ಸಿಎಂ ಬಿ.ಎಸ್.ಯಡಿಯೂರಪ್ಪ
Follow us on

ದೆಹಲಿ: ಅಮಿತ್ ಶಾ, ನಡ್ಡಾ, ಅರುಣ್ ಕುಮಾರ್ ಜೊತೆ ಚರ್ಚೆ ಮಾಡಿದ್ದೇನೆ. ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಮಾಹಿತಿ ನೀಡಿದ್ದೇನೆ. ಚುನಾವಣೆ ಫಲಿತಾಂಶದ ಅಂಕಿ-ಅಂಶ ನೀಡಿದ್ದೇನೆ. ಗ್ರಾ.ಪಂ. ಚುನಾವಣೆ ಫಲಿತಾಂಶ ಅವರಿಗೆ ಸಂತೋಷ ತಂದಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಉಪಚುನಾವಣೆ ಸಂಬಂಧವೂ ಚರ್ಚೆಯಾಯಿತು. 3 ಸ್ಥಾನಗಳಲ್ಲೂ ಗೆಲ್ಲಲೇಬೇಕೆಂದು ಸೂಚಿಸಿದ್ದಾರೆ. ಆದಷ್ಟು ಬೇಗ ಆಕಾಂಕ್ಷಿಗಳ ಪಟ್ಟಿ ಕಳಿಸಲು ಹೇಳಿದ್ದಾರೆ. ಪಟ್ಟಿ ಕಳಿಸಿದರೆ ಅಂತಿಮಗೊಳಿಸುವುದಾಗಿ ಹೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಜೊತೆಗೆ, ಸಮಾಧಾನಕರ ಹಾಗೂ ತೃಪ್ತಿಕರವಾದ ಚರ್ಚೆಗಳು ನಡೆದಿದೆ. ಈ ಸಭೆ ನನಗಂತೂ ಅತ್ಯಂತ ಸಂತೋಷ, ಸಮಾಧಾನ,
ತೃಪ್ತಿ ತಂದಿದೆ. ರಾಷ್ಟ್ರ ನಾಯಕರ ಜೊತೆಗಿನ ಸಭೆ ಸಂತೋಷ ತಂದುಕೊಟ್ಟಿದೆ. ಸಚಿವ ಸಂಪುಟದ ಬಗ್ಗೆ  ಹೈಕಮಾಂಡ್ ಆದಷ್ಟು ಬೇಗ ಗುಡ್​ ನ್ಯೂಸ್​ ಕೊಡಲಿದೆ. ಆದಷ್ಟು ಬೇಗ ಶುಭ ಸುದ್ದಿಯನ್ನು ಕೊಡುತ್ತಾರೆ. ರಾಷ್ಟ್ರ ನಾಯಕರು ಶುಭ ಸುದ್ದಿ ಕೊಡುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಷ್ಟ್ರ ನಾಯಕರ ಭೇಟಿ ಬಳಿಕ ನಾನು ಸಂತೋಷವಾಗಿದ್ದೇನೆ. ಹೀಗಾಗಿ, ಈಗ ಯತ್ನಾಳ್ ವಿಚಾರದ ಬಗ್ಗೆ ಮಾತಾಡಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿ ಸುಮ್ಮನಾದರು.

ಅಮಿತ್ ಶಾ ಭೇಟಿಯಾದ ಯಡಿಯೂರಪ್ಪ: ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ

Published On - 4:51 pm, Sun, 10 January 21