ವಿಶ್ವದಲ್ಲೇ ಅತಿವೇಗದ ಕಂಪ್ಯೂಟರ್​ಗಿಂತ 100 ಲಕ್ಷ ಕೋಟಿ ಪಟ್ಟು ಫಾಸ್ಟ್​: ಇದು ಚೀನಾದ ಕ್ವಾಂಟಂ ಕಂಪ್ಯೂಟರ್​

| Updated By: KUSHAL V

Updated on: Dec 07, 2020 | 12:51 PM

ತಂತ್ರಜ್ಞಾನ ಕ್ಷೇತ್ರದಲ್ಲಿ  ಮೇಲುಗೈ ಸಾಧಿಸಲು ಅಮೆರಿಕ ಮತ್ತು ಚೀನಾ ಸ್ಪರ್ಧಿಸುತ್ತಿವೆ. ಈ ನಿಟ್ಟಿನಲ್ಲಿ, ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರ್ ಒಂದನ್ನು​ ನಿರ್ಮಿಸಿದ್ದಾರೆ. ಇದು ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್​ಗಿಂತ ವೇಗವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಚೀನಾ ಮಾಹಿತಿ ನೀಡಿದೆ.

ವಿಶ್ವದಲ್ಲೇ ಅತಿವೇಗದ ಕಂಪ್ಯೂಟರ್​ಗಿಂತ 100 ಲಕ್ಷ ಕೋಟಿ ಪಟ್ಟು ಫಾಸ್ಟ್​: ಇದು ಚೀನಾದ ಕ್ವಾಂಟಂ ಕಂಪ್ಯೂಟರ್​
ಫೋಟಾನಿಕ್ ಕ್ವಾಂಟಂ ಕಂಪ್ಯೂಟರ್
Follow us on

ತಂತ್ರಜ್ಞಾನ ಕ್ಷೇತ್ರದಲ್ಲಿ  ಮೇಲುಗೈ ಸಾಧಿಸಲು ಅಮೆರಿಕ ಮತ್ತು ಚೀನಾ ಸ್ಪರ್ಧಿಸುತ್ತಿವೆ. ಈ ನಿಟ್ಟಿನಲ್ಲಿ, ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರ್ ಒಂದನ್ನು​ ನಿರ್ಮಿಸಿದ್ದಾರೆ. ಇದು ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್​ಗಿಂತ ವೇಗವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಚೀನಾ ಮಾಹಿತಿ ನೀಡಿದೆ.

ಏನಿದು ಕ್ವಾಂಟಂ ಕಂಪ್ಯೂಟರ್?
ಅಂದ ಹಾಗೆ, ಚೀನಾದ ಈ ಕ್ವಾಂಟಂ ಕಂಪ್ಯೂಟರ್ ವಿಶ್ವದ ಅತಿ ವೇಗದ ಸೂಪರ್​ ಕಂಪ್ಯೂಟರ್​ಗಿಂತ ಸುಮಾರು 100 ಟ್ರಿಲಿಯನ್ (100 ಲಕ್ಷ ಕೋಟಿ) ಪಟ್ಟು ಅಧಿಕ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ . ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಆಗಿರುವ  ಜಪಾನ್​ನ ಫುಗಾಕುಗಿಂತ 100 ಟ್ರಿಲಿಯನ್ ಪಟ್ಟು ವೇಗದಲ್ಲಿದೆ.

ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರನ್ನು ನಾವೇ ನಿರ್ಮಿಸಿದ್ದೇವೆಂದು ಬೀಗುತ್ತಿದ್ದಾರೆ. ಈ ಮೂಲಕ ಚೀನಾ, ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಸ್ಪರ್ಧಿಸುತ್ತಿದೆ.

ಕ್ವಾಂಟಂ ಪ್ರಚಾರದಲ್ಲಿದೆಯೆ?
ಕ್ವಾಂಟಂ ಕಂಪ್ಯೂಟರ್ ತಂತ್ರಜ್ಞಾನ ಇತ್ತೀಚೆಗೆ ಸುದ್ದಿಯಲ್ಲಿದೆ. ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಯ ಭಾಗವಾಗಿ ಬೇಕಾಗುವ ಗಣಿತ ಮತ್ತು ಇತರ ಕಾರ್ಯಗಳಿಗೆ ಕ್ವಾಂಟಂ ಕಂಪ್ಯೂಟರ್​ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸದ್ಯ, ಅಮೆರಿಕದ ಡಿಜಿಟಲ್​ ದಿಗ್ಗಜ ಗೂಗಲ್​ನ ಸೈಕಮೋರ್ ಡಿವೈಸ್ ಮಾತ್ರ ಇಲ್ಲಿಯವರೆಗೆ ಕ್ವಾಂಟಾಂ ತಂತ್ರಜ್ಞಾನವ​ನ್ನು ಹೊಂದಿದೆ.

ಅಂದ ಹಾಗೆ, ಈ ಸೈಕಮೋರ್ ಡಿವೈಸ್​ ಸೂಪರ್ ಕಂಡಕ್ಟಿಂಗ್ (ಅತಿವಾಹಕ) ವಸ್ತುಗಳಿಂದ ತಯಾರಿಸಲಾಗಿದೆ. ಆದರೆ, ಇತ್ತ ಚೀನಾ, ಫೋಟಾನ್ ಆಧಾರಿತ ಕ್ವಾಂಟಂ ಕಂಪ್ಯೂಟರ್​ಗಳನ್ನು ಅಳವಡಿಸಿಕೊಂಡಿದೆ. ಬೋಸಾನ್ ಸ್ಯಾಂಪಲಿಂಗ್ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ.