ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಕಾಸ ಸೌಧದಲ್ಲಿ ಇಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಎಐಟಿಯುಸಿ, ಬಿಎಂಎಸ್, ಸಿಐಟಿಯು ಮತ್ತು ಮಹಾಮಂಡಳ ಸಂಘಟನೆಗಳ ಜೊತೆ ಸವದಿ ಸಭೆ ನಡೆಸುತ್ತಿದ್ದಾರೆ.
ಇಂದಿನ ಸಭೆಯಲ್ಲಿ ಬಿಎಂಟಿಸಿ ಎಂಡಿ ಶಿಖಾ, ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಹಾಗೂ NWKRTC, NEKRTC ಎಂಡಿಗಳು ಭಾಗಿಯಾಗಿದ್ದಾರೆ. ಜೊತೆಗೆ, ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಸಹ ಉಪಸ್ಥಿತರಿದ್ದಾರೆ.
ಇದಲ್ಲದೆ, ಸಾರಿಗೆ ನೌಕರರ ಮುಖಂಡರಾದ ಅನಂತ ಸುಬ್ಬುರಾವ್ ಸೇರಿದಂತೆ ಒಕ್ಕೂಟದ ಮುಖಂಡರು ಭಾಗಿಯಾಗಿದ್ದು AITUCಯಿಂದ ಅನಂತ ಸುಬ್ಬುರಾವ್, ವಿಜಯ್ ಭಾಸ್ಕರ್, CITUಯಿಂದ ಪ್ರಕಾಶ್ ,ರೇವಪ್ಪ ಮತ್ತು ಭಾರತೀಯ ಮಜ್ದೂರ್ ಸಂಘದ ಪೂಂಜಾ ಮಂಜುನಾಥ, ಉದಯ್ ಕುಮಾರ್ ಮತ್ತು ಮಹಾಮಂಡಳದ ಅರುಸು ಸೇರಿದಂತೆ ನೋಂದಾಯಿತ ಒಕ್ಕೂಟದ ಮುಖಂಡರು ಮಾತ್ರ ಭಾಗಿಯಾಗಿದ್ದಾರೆ.
ಆದರೆ ಸಭೆಯಲ್ಲಿ ಪ್ರತಿಭಟನಾ ನಿರತ ಮುಖಂಡರೇ ಆಗಮಿಸಿಲ್ಲ ಎಂದು ತಿಳಿದುಬಂದಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ತಂಡ ಸಭೆಯಲ್ಲಿ ಇಲ್ಲ ಎಂದು ಹೇಳಲಾಗಿದೆ. ಈ ಬಾರಿಯೂ ಅವರನ್ನು ಆಹ್ವಾನ ಮಾಡದೆ ಸಭೆ ನಡೆಸ್ತಿರುವ ಸವದಿ ಬರೀ ನೋಂದಾಯಿತ ಮುಖಂಡರ ಜೊತೆಗೆ ಮಾತ್ರ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
‘ಬಿಕ್ಕಟ್ಟು ನಿರ್ವಹಿಸುವುದೆಂದರೆ, ಸದನದಲ್ಲಿ ಕೂತು ರೋಮಾಂಚನ ಚಿತ್ರ ವೀಕ್ಷಿಸಿದಂತಲ್ಲ’
ಈ ನಡುವೆ, ಲಕ್ಷ್ಮಣ ಸವದಿಯವರೇ ಬಿಕ್ಕಟ್ಟು ನಿರ್ವಹಿಸುವುದೆಂದರೆ, ಸದನದಲ್ಲಿ ಕೂತು ರೋಮಾಂಚನ ಚಿತ್ರ ವೀಕ್ಷಿಸಿದಂತಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ರಾಜ್ಯ ಕಾಂಗ್ರೆಸ್ ಟಾಂಗ್ ಕೊಟ್ಟಿದೆ. ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ.
◼️ಪ್ರಯಾಣಿಕರ ಪರದಾಟ
◼️ಅನಾನುಭವಿ ಖಾಸಗಿ ಚಾಲಕರ ಪೀಕಲಾಟ
◼️ಸರ್ಕಾರದ ಮೊಂಡು ಹಠ
◼️ಖಾಸಗಿ ಬಸ್ ಮಾಲೀಕರ ನಿರಾಕರಣೆ@LaxmanSavadi ಅವರೇ ಬಿಕ್ಕಟ್ಟುಗಳನ್ನ ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್'ನಲ್ಲಿ "ರೋಮಾಂಚನದ" ಚಿತ್ರ ವೀಕ್ಷಿಸಿದಂತಲ್ಲ!!— Karnataka Congress (@INCKarnataka) December 13, 2020
Published On - 11:16 am, Sun, 13 December 20