ಶಾಸಕ ಸಂಗಮೇಶ್ ಬೆನ್ನಿಗೆ ನಿಂತ ‘ಕೈ’ ಪಡೆ: ಮಾ.10ರಂದು ಭದ್ರಾವತಿಯಲ್ಲಿ ಧರಣಿ ನಡೆಸಲು ನಿರ್ಧಾರ

ಭದ್ರಾವತಿ ಶಾಸಕ ಸಂಗಮೇಶ್​ಗೆ ಬಿಜೆಪಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್​ ಇದೀಗ MLA​ಗೆ ಬೆಂಬಲವಾಗಿ ನಿಲ್ಲಲು ನಿರ್ಧಾರ ಮಾಡಿದೆ. ಈ ಕುರಿತು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

ಶಾಸಕ ಸಂಗಮೇಶ್ ಬೆನ್ನಿಗೆ ನಿಂತ ‘ಕೈ’ ಪಡೆ: ಮಾ.10ರಂದು ಭದ್ರಾವತಿಯಲ್ಲಿ ಧರಣಿ ನಡೆಸಲು ನಿರ್ಧಾರ
ಶಾಸಕ ಸಂಗಮೇಶ್ ಬೆನ್ನಿಗೆ ನಿಂತ ‘ಕೈ’ ಪಡೆ

Updated on: Mar 08, 2021 | 11:54 PM

ಬೆಂಗಳೂರು: ಭದ್ರಾವತಿ ಶಾಸಕ ಸಂಗಮೇಶ್​ಗೆ ಬಿಜೆಪಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್​ ಇದೀಗ MLA​ಗೆ ಬೆಂಬಲವಾಗಿ ನಿಲ್ಲಲು ನಿರ್ಧಾರ ಮಾಡಿದೆ. ಈ ಕುರಿತು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಸಿಎಲ್​ಪಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸದನದ ಹೊರಗೆ ಸಂಗಮೇಶ್​ ಬೆನ್ನಿಗೆ ನಿಲ್ಲುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಸಿದ್ದರಾಮಯ್ಯ ಮನವಿ ಮಾಡಿದರು. ಹಾಗಾಗಿ, ಮಾ.10ರಂದು ಭದ್ರಾವತಿಯಲ್ಲಿ ಕಾಂಗ್ರೆಸ್​ನಿಂದ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಧರಣಿ ನಡೆಸಲು ನಿರ್ಧಾರ ಮಾಡಲಾಯಿತು.

ಎರಡು ಪಟ್ಟಣ ಪಂಚಾಯಿತಿ, 27 ವಾರ್ಡ್‌ಗಳಿಗೆ ಚುನಾವಣೆ ಘೋಷಣೆ
ಇತ್ತ, ಎರಡು ಪಟ್ಟಣ ಪಂಚಾಯಿತಿ, 27 ವಾರ್ಡ್‌ಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ. ಅಂತೆಯೇ, ಮಾರ್ಚ್‌ 29ರಂದು ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಸಲು ಮಾರ್ಚ್ 17 ಕೊನೆಯ ದಿನವಾಗಿದ್ದು ಮಾರ್ಚ್ 31ರಂದು ಮತ ಎಣಿಕೆ ನಡೆಯಲಿದೆ. ಮೈಸೂರು ಜಿಲ್ಲೆಯ ಸರಗೂರು ಪಟ್ಟಣ ಪಂಚಾಯಿತಿ ಹಾಗೂ ತುಮಕೂರು ಜಿಲ್ಲೆಯ ಹುಳಿಯಾರು ಪ.ಪಂ.ಗೆ ಚುನಾವಣೆ ನಡೆಯಲಿದೆ. ಇದಲ್ಲದೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ 27 ವಾರ್ಡ್‌ಗಳಿಗೆ ಚುನಾವಣೆ ಸಹ ನಡೆಯಲಿದೆ.

ವಿವಿಧ ಕಾರಣಗಳಿಂದ ರಾಜ್ಯಾದ್ಯಂತ ತೆರವಾಗಿದ್ದ 27 ವಾರ್ಡ್ ಮತ್ತು ಅವಧಿ ಮುಕ್ತಾಯಗೊಂಡಿರುವ ಗ್ರಾ.ಪಂ.ಗಳಿಗೂ ಚುನಾವಣೆ ನಡೆಯಲಿದೆ. 19 ಜಿಲ್ಲೆಗಳಲ್ಲಿ ಅವಧಿ ಮುಕ್ತಾಯಗೊಂಡಿರುವ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ‘ಬೆಳಗಾವಿ ಬೈ ಎಲೆಕ್ಷನ್​ ಟೈಂಗೆ ರಮೇಶ್​ ಅಥವಾ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿರಬೇಕು’