AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi Bypoll: ‘ಬೆಳಗಾವಿ ಬೈ ಎಲೆಕ್ಷನ್​ ಟೈಂಗೆ ರಮೇಶ್​ ಅಥವಾ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿರಬೇಕು’

Belagavi Lok Sabha Bypoll: ಬೆಳಗಾವಿ ಉಪಚುನಾವಣೆ ವೇಳೆಗೆ ಜಾರಕಿಹೊಳಿ ಕುಟುಂಬದವರು ಸಚಿವರಾಗಿರಬೇಕು. ಹೀಗಾಗಿ, ಬಾಲಚಂದ್ರಗೆ ಸಚಿವ ಸ್ಥಾನ ನೀಡಲು ಶಾಸಕರ ನಿಯೋಗವೊಂದು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮನವಿ ಮಾಡಿದರು.

Belagavi Bypoll: ‘ಬೆಳಗಾವಿ ಬೈ ಎಲೆಕ್ಷನ್​ ಟೈಂಗೆ ರಮೇಶ್​ ಅಥವಾ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿರಬೇಕು’
ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಶಾಸಕರ ನಿಯೋಗ
KUSHAL V
| Updated By: Digi Tech Desk|

Updated on:Mar 09, 2021 | 8:28 AM

Share

ಬೆಂಗಳೂರು: ಬೆಳಗಾವಿ ಉಪಚುನಾವಣೆ ವೇಳೆಗೆ ಜಾರಕಿಹೊಳಿ ಕುಟುಂಬದವರು ಸಚಿವರಾಗಿರಬೇಕು. ಹೀಗಾಗಿ, ಬಾಲಚಂದ್ರಗೆ ಸಚಿವ ಸ್ಥಾನ ನೀಡಲು ಶಾಸಕರ ನಿಯೋಗವೊಂದು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮನವಿ ಮಾಡಿದರು. ಜಾರಕಿಹೊಳಿ ಬ್ರದರ್ಸ್​ ಪರವಾಗಿ ಶಾಸಕರು ಸಿಎಂ ಯಡಿಯೂರಪ್ಪರನ್ನು ಭೇಟಿಮಾಡಿದರು.

ಮತ್ತೆ ರಮೇಶ್​​ರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ದಿನೇಶ್​ ಕಲ್ಲಹಳ್ಳಿ ದೂರು ಹಿಂಪಡೆಯಲು ಮುಂದಾದ ಹಿನ್ನೆಲೆಯಲ್ಲಿ ರಮೇಶ್​​ರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಶಾಸಕರು ಮನವಿ ಮಾಡಿದರು. ಒಂದು ವೇಳೆ, ರಮೇಶ್​ ಸೇರ್ಪಡೆ ವಿಳಂಬವಾದ್ರೆ ಬಾಲಚಂದ್ರಗೆ ನೀಡಿ ಎಂದು ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡಲು ಮನವಿ ಮಾಡಿದರು.

ಸುಮಾರು 15ಕ್ಕೂ ಹೆಚ್ಚು ಬಿಜೆಪಿ ಶಾಸಕರಿಂದ ಸಿಎಂಗೆ ಮನವಿ ಸಲ್ಲಿಸಲಾಯಿತು. ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿಯಾದ ಶಾಸಕರು ರಮೇಶ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಬಾಲಚಂದ್ರ ಜಾರಕಿಹೊಳಿಗೆ ನೀಡುವಂತೆ ಕೋರಿದರು. ಆದರೆ, ಈ ಬಗ್ಗೆ ಹೈಕಮಾಂಡ್ ಕೇಳಬೇಕು ಎಂದು ಹೇಳಿ CM ಸುಮ್ಮನಾದರಂತೆ. ಹಾಗಾಗಿ, ಸಿಎಂಗೆ ಮನವಿ ಸಲ್ಲಿಸಿ ಶಾಸಕರ ನಿಯೋಗ ತೆರಳಿತು.

ಇದನ್ನೂ ಓದಿ: IAS ಅಧಿಕಾರಿ ದಿವಂಗತ ಡಿ.ಕೆ.ರವಿ ತಂದೆ ಕರಿಯಪ್ಪ ವಿಧಿವಶ

Published On - 11:13 pm, Mon, 8 March 21